ಐವರು ನೆಟ್ ಬೌಲರ್​ಗಳಿಗೆ ಮಣೆ ಹಾಕಿರುವ ಬಿಸಿಸಿಐ -ದುಂದುವೆಚ್ಚ ಸರಿನಾ?

ಐವರು ನೆಟ್ ಬೌಲರ್​ಗಳಿಗೆ ಮಣೆ ಹಾಕಿರುವ ಬಿಸಿಸಿಐ -ದುಂದುವೆಚ್ಚ ಸರಿನಾ?

ಶಿಖರ್ ಧವನ್ ನೇತೃತ್ವದ ಯಂಗಿಸ್ತಾನ್ ದ್ವೀಪರಾಷ್ಟ್ರಕ್ಕೆ ತೆರಳಿದ್ದಾಗಿದೆ. ಬರೋಬ್ಬರಿ 25 ಸದಸ್ಯರ ಜಂಬೋ ತಂಡವನ್ನೇ ನೆರೆ ರಾಷ್ಟ್ರಕ್ಕೆ ಬಿಸಿಸಿಐ ಕಳುಹಿಸಿದೆ. ಆದ್ರೀಗ ಇದೇ 25 ಸದಸ್ಯರ ತಂಡದ ಬಗ್ಗೆಯೇ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಆಗಿರೋದು ರಾಹುಲ್ ದ್ರಾವಿಡ್ ನೀಡಿರೋ ಒಂದು ಹೇಳಿಕೆ.

ಮೂರು ಪಂದ್ಯಗಳ ಏಕದಿನ, ಟಿ20 ಸರಣಿಗಾಗಿ ಯಂಗ್ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಯುವ ಹಾಗೂ ಅನುಭವಿಗಳ ಸಮ್ಮಿಶ್ರಣದ ತಂಡವನ್ನ ಕಳುಹಿಸಿರುವ ಬಿಸಿಸಿಐ, ವಿಶ್ವ ಕ್ರಿಕೆಟ್​ನಲ್ಲಿ ವಿದೇಶಿ ಸರಣಿಗಳಿಗೆ, ಎರಡು ತಂಡಗಳನ್ನ ಕಳುಹಿಸಿದೆ. ಆದ್ರೆ, ನೆರೆ ರಾಷ್ಟ್ರದ ಕಿರು ಪ್ರವಾಸಕ್ಕೆ ಜಂಬೋ ತಂಡವನ್ನ ಕಳುಹಿಸಿ ಟೀಕಿಗೆ ಗುರಿಯಾಗ್ತಿದೆ.

blankಲಂಕಾ ಪ್ರವಾಸದಲ್ಲಿ ಯುವ ಆಟಗಾರರಿಗೆ ಜಾಕ್​​ಪಾಟ್
ಇಂಗ್ಲೆಂಡ್​ನ ಸುದೀರ್ಘ ಪ್ರವಾಸಕ್ಕೆ ಒಟ್ಟು 24 ಸದಸ್ಯರ ತಂಡವನ್ನ ಕಳುಹಿಸಿರುವ ಬಿಸಿಸಿಐ, ಲಂಕಾದ ಕಿರು ಸರಣಿಗೆ ಬರೋಬ್ಬರಿ 25 ಮಂದಿ ಆಟಗಾರರನ್ನ ಕಳುಹಿಸಿಕೊಟ್ಟಿದೆ. ಇದೇ ಕಾರಣಕ್ಕೆ ಲಂಕಾ ಪ್ರವಾಸಕ್ಕೆ ತೆರಳಿರುವ ಯುವ ಆಟಗಾರರಿಗೆ ಜಾಕ್​​ಪಾಟ್ ಹೊಡೆದಿದೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಕೋಚ್ ದ್ರಾವಿಡ್ ಹೇಳಿದ ಒಂದೇ ಒಂದು ಮಾತು.

ತಂಡದಲ್ಲಿ ಇರುವ ಎಲ್ಲರಿಗೂ ಅವಕಾಶ ಸಿಗಲ್ಲ. ತಂಡದ ಕಾಂಬಿನೇಷನ್ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನ ಕಣಕ್ಕಿಳಿಸಲಾಗುತ್ತೆ ಎಂಬುವುದು ರಾಹುಲ್ ದ್ರಾವಿಡ್ ಮಾತು. ಈ ಒಂದು ಮಾತೇ ಈಗ ಚರ್ಚೆಯ ಕೇಂದ್ರ ಬಿಂದು ಹಾಗೂ ಪ್ರಶ್ನೆಯನ್ನ ಹುಟ್ಟುಹಾಕಿರೋದು.

ಐವರು ನೆಟ್ ಬೌಲರ್​ಗಳಿಗೆ ಮಣೆ ಹಾಕಿರುವ ಬಿಸಿಸಿಐ
20 ಮಂದಿಯ ಟೀಮ್  ಜೊತೆಗೆ ಬಿಸಿಸಿಐ ಲಂಕಾ ಪ್ರವಾಸಕ್ಕೆ 5 ಮಂದಿ ನೆಟ್​ ಬೌಲರ್​ಗಳನ್ನ ಕಳುಹಿಸಿಕೊಟ್ಟಿದೆ. ದೇಶಿ ಕ್ರಿಕೆಟ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಆರ್ಶ್​ದೀಪ್ ಸಿಂಗ್, ಸಂದೀಪ್ ವಾರಿಯರ್, ಇಶಾನ್ ಪೊರಲ್, ಸಿಮ್ರನ್​ಜಿತ್​ ಸಿಂಗ್ ಹಾಗೂ ಸ್ಪಿನ್ನರ್ ಸಾಯಿ ಕಿಶೋರ್, ನೆಟ್​ ಬೌಲರ್​ಗಳಾಗಿ ಲಂಕಾಗೆ ಹಾರಿದ್ದಾರೆ. ಇವರನ್ನ ಲಂಕಾಗೆ ಕಳುಹಿಸಿದ್ದಕ್ಕೆ ಕಾರಣ, ದೇಶಿ ಕ್ರಿಕೆಟ್ ಹಾಗೂ IPL​​ನಲ್ಲಿ ನೀಡಿದ್ದ ಪ್ರದರ್ಶನವೇ ಆಗಿದೆ.

blankಐಪಿಎಲ್​​ನಲ್ಲಿ ಆರ್ಶ್​​ದೀಪ್​ ಸಿಂಗ್
ಹೌದು..! ಐಪಿಎಲ್​​ನಲ್ಲಿ ಅದ್ಬುತ ಪ್ರದರ್ಶನ ತೋರಿರುವ ಪಂಜಾಬ್​ನ ಆರ್ಶ್​ದೀಪ್ ಸಿಂಗ್​, ಆಡಿದ 5 ಪಂದ್ಯಗಳಿಂದ 8.18 ಎಕಾನಮಿಯಲ್ಲಿ 7 ವಿಕೆಟ್​ ಉರುಳಿಸಿದ್ದಾರೆ. ಈ ಪೈಕಿ 35 ರನ್​​ಗೆ 3 ವಿಕೆಟ್ ಉರುಳಿಸಿರೋದು ಬೆಸ್ಟ್​ ಪರ್ಫಾಮೆನ್ಸ್ ಆಗಿದೆ. ಇವರಷ್ಟೇ ಅಲ್ಲ.. ಸಂದೀಪ್ ವಾರಿಯರ್, ಇಶಾನ್ ಪೊರಲ್, ಸಿಮ್ರನ್​ಜಿತ್​ ಸಿಂಗ್ ಹಾಗೂ ಸ್ಪಿನ್ನರ್ ಸಾಯಿ ಕಿಶೋರ್ ಕೂಡ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

SMA ಟೂರ್ನಿಯಲ್ಲಿ ವಾರಿಯರ್​​​-ಪೊರಲ್​

  • 06           ಪಂದ್ಯ            05
  • 07           ವಿಕೆಟ್           03
  • 2/22        ಬೆಸ್ಟ್             4/24
  • 7.40        ಎಕಾನಮಿ      7.42

ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಸಂದೀಪ್ ವಾರಿಯರ್ ಆಡಿರುವ 6 ಪಂದ್ಯಗಳಿಂದ 7 ವಿಕೆಟ್​​​ ಉರುಳಿಸಿ 7.40 ಏಕನಾಮಿಯಲ್ಲಿ ರನ್​​ ನೀಡಿದ್ರೆ, 5 ಪಂದ್ಯಗಳನ್ನಾಡಿರುವ ಇಶಾನ್ ಪೊರಲ್ 7.42ರ ಏಕಾನಮಿಯಲ್ಲಿ ರನ್ ನೀಡಿ 13 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ 24 ರನ್ ನೀಡಿ 4 ವಿಕೆಟ್ ಉರುಳಿಸಿದ್ದು ಬೆಸ್ಟ್ ಪರ್ಫಾಮೆನ್ಸ್.

SMA ಟೂರ್ನಿಯಲ್ಲಿ ಸಿಮ್ರನ್​ಜಿತ್-ಕಿಶೋರ್

  • 05           ಪಂದ್ಯ           08
  • 07           ವಿಕೆಟ್          08
  • 2/21        ಬೆಸ್ಟ್            2/16
  • 8.81        ಏಕಾನಮಿ      4.82

ಇನ್ನೂ ಸಿಮ್ರನ್​ಜಿತ್ ಸಿಂಗ್ ಆಡಿದ 5 ಪಂದ್ಯಗಳಿಂದ 7 ವಿಕೆಟ್ ಉರುಳಿಸಿ 8.81ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ರೆ, ಸ್ಪಿನ್ನರ್ ಸಾಯಿ ಕಿಶೋರ್ ಆಡಿರುವ 8 ಪಂದ್ಯಗಳಿಂದ 8 ವಿಕೆಟ್ ಉರುಳಿಸಿ 4.82ರ ಏಕಾನಮಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಪೈಕಿ 16 ರನ್​ ನೀಡಿ 2 ವಿಕೆಟ್ ಉರುಳಿಸಿರೋದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ.

ಇಷ್ಟೆಲ್ಲಾ ಪ್ರದರ್ಶನ ನೀಡಿರುವ ಈ ಯುವ ಆಟಗಾರರು, ಲಂಕಾಗೆ ನೆಟ್ ಬೌಲರ್​ಗಳಾಗಿ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಈ ಯಂಗ್ ಟ್ಯಾಲೆಂಟೆಡ್ ಪ್ಲೇಯರ್ಸ್​ಗೆ ಜಸ್ಟ್​ ಪ್ರವಾಸವಾಗಿ ಮಾತ್ರವೇ ಉಳಿಯಲಿದೆ. ಇದಕ್ಕೆ ಕಾರಣ ಜಂಬೋ ಸ್ಕ್ವಾಡ್​.

blank

ಟೀಮ್ ಇಂಡಿಯಾಗೆ ನೆಟ್ ಬೌಲರ್ಸ್ ಅಗತ್ಯತೆ ಇತ್ತಾ​​..?
ಸದ್ಯ ಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ನೆಟ್ ಬೌಲರ್​ಗಳ ಅಗತ್ಯತೆ ಇದೆಯಾ..? ನಿಜಕ್ಕೂ ಹೇಳಬೇಕೆಂದರೆ ಶಿಖರ್ ಪಡೆಗೆ ನೆಟ್​ ಬೌಲರ್​ಗಳ ಅಗತ್ಯತೆ ಇಲ್ಲವಾಗಿದೆ. ಯಾಕಂದ್ರೆ ಈಗಾಗಲೇ 20 ಮಂದಿ ತಂಡದಲ್ಲಿ, ಆರು ಮಂದಿ ಸ್ಪಿನ್ನರ್​​ಗಳು ಇದ್ದಾರೆ. 5 ವೇಗಿಗಳ ಉಪಸ್ಥಿತಿಯೂ ಇದೆ. ಸದ್ಯ ಕೋಚ್​ ರಾಹುಲ್ ದ್ರಾವಿಡ್ ಹೇಳಿದಂತೆ ಒಂದಿಬ್ಬರು ಬಿಟ್ಟರೆ, ಉಳಿದೆಲ್ಲಾ ಆಟಗಾರರಿಗೆ ಅವಕಾಶ ಸಿಗೋದು ಕಷ್ಟ.

ಇನ್ನೂ ಇವರಿಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಅವಕಾಶನೂ ಸಿಗಲ್ಲ. ತಂಡದಲ್ಲಿರುವ ಬೌಲರ್​ಗಳಲ್ಲಿ ಮೂರ್ನಾಲ್ಕು ಮಂದಿ ಇಂಜುರಿಗೆ ತುತ್ತಾದರೂ, ಬೆಂಚ್ ಕಾಯ್ತಿದ್ದ ಆಟಗಾರರಿಗೆ ಚಾನ್ಸ್​ ಸಿಗೋದು ಕನ್ಫರ್ಮ್. ಹಾಗಾಗಿ ನೆಟ್​ ಬೌಲರ್​ಗಳಿಗೆ ಸಿಗುವ ಅನುಕೂಲ, ಕೋಚ್​ ರಾಹುಲ್ ದ್ರಾವಿಡ್​ ಜೊತೆಯಲ್ಲಿದ್ದು ಕಲಿಯೋದಷ್ಟೇ. ಅದೇನೇ ಇರಲಿ, 13 ದಿನಗಳ ಕಿರು ಪ್ರವಾಸಕ್ಕೆ ಜಂಬೋ ತಂಡವನ್ನ ಕಳುಹಿಸಿಕೊಡುವ ಅಗತ್ಯ ಇತ್ತಾ ಅನ್ನೋದನ್ನ, ಬಿಸಿಸಿಐ ಮನವರಿಕೆ ಮಾಡಿಕೊಳ್ಳಬೇಕಿದೆ.

The post ಐವರು ನೆಟ್ ಬೌಲರ್​ಗಳಿಗೆ ಮಣೆ ಹಾಕಿರುವ ಬಿಸಿಸಿಐ -ದುಂದುವೆಚ್ಚ ಸರಿನಾ? appeared first on News First Kannada.

Source: newsfirstlive.com

Source link