ಹೊಂಬಾಳೆ, ಪವನ್, ಪುನೀತ್ ಜೋಡಿ ಮಾಡಲಿದೆ ಕಮಾಲ್: ನಾಳೆ ಲಾಂಚ್ ಆಗಲಿದೆ ಸಿನಿಮಾ ಟೈಟಲ್

ಹೊಂಬಾಳೆ, ಪವನ್, ಪುನೀತ್ ಜೋಡಿ ಮಾಡಲಿದೆ ಕಮಾಲ್: ನಾಳೆ ಲಾಂಚ್ ಆಗಲಿದೆ ಸಿನಿಮಾ ಟೈಟಲ್

ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಜೋನೆ ಬೆಲ್ಲದಂತಹ ಸುದ್ದಿ.. ಯುವರತ್ನ ಸಿನಿಮಾ ಮುಗಿಸಿ ಜೇಮ್ಸ್ ಸಿನಿಮಾದ ಫೈಟಿಂಗ್ ದೃಶ್ಯಗಳಿಗಾಗಿ ಸಜ್ಜಾಗಿರುವ ದೊಡ್ಮನೆ ರಾಜರತ್ನ ಅಪ್ಪು ಅವರ ಹೊಸ ಸಿನಿಮಾದ ಹೊಸ ಸಮಾಚಾರ ಹೊರ ಬಿದ್ದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಲ್ಕನೇ ಬಾರಿಗೆ ಹೊಂಬಾಳೆ ಫಿಲಂಸ್ ಜೊತೆ ಸೇರಿ ಲೂಸಿಯ ಸಿನಿಮಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸಲು ಸಜ್ಜಾಗಿರುವ ಸಿನಿಮಾದ ಟೈಟಲ್ ಲಾಂಚ್ ಅತಿ ಶೀಘ್ರದಲ್ಲೇ ಆಗಲಿದೆ..
ಯೂಟರ್ನ್ ನಿರ್ದೇಶಕ ಪವನ್ ಅಪ್ಪು ಅವರಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋ ಅಧಿಕೃತ ಮಾಹಿತಿ ಹೊರ ಬಂದಿತ್ತಾದರೂ ಟೈಟಲ್ ಏನು ಅನ್ನೋದು ರಿವೀಲ್ ಆಗಿರಲಿಲ್ಲ. ಆದ್ರೆ ನಾಳೆ ಅಂದ್ರೆ ಜುಲೈ 1ನೇ ತಾರೀಖ್ ಬೆಳಗ್ಗೆ 11 ಗಂಟೆ 46 ನಿಮಿಷಕ್ಕೆ ಶೀರ್ಷಿಕೆ ಅನಾವರಣ ಮಾಡುವುದಾಗಿ ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ.

ಅಪ್ಪು ಅವರ ಮುಂದಿನ ಸಿನಿಮಾದ ಟೈಟಲ್ ಏನ್ ಇರಬಹುದು ಅನ್ನೋ ಕುತೂಹಲ ಈಗಾಗಲೇ ಪವರ್ ಫ್ಯಾನ್ಸ್​​ಗಳಲ್ಲಿ ಜೋರಾಗಿಯೇ ಶುರುವಾಗಿದೆ. ಇನ್ನು ಇದು ಪುನೀತ್ ರಾಜ್​ಕುಮಾರ್​ಗೆ 31 ನೇ ಸಿನಿಮಾವಾಗಿದ್ದಯ ಹೊಂಬಾಳೆ ಪ್ರೊಡಕ್ಷನ್​ನ ಒಂಭತ್ತನೇ ಸಿನಿಮಾವಾಗಿದೆ.

The post ಹೊಂಬಾಳೆ, ಪವನ್, ಪುನೀತ್ ಜೋಡಿ ಮಾಡಲಿದೆ ಕಮಾಲ್: ನಾಳೆ ಲಾಂಚ್ ಆಗಲಿದೆ ಸಿನಿಮಾ ಟೈಟಲ್ appeared first on News First Kannada.

Source: newsfirstlive.com

Source link