5 ಮಂದಿ ಸ್ಪಿನ್ನರ್ಸ್​, 2 ಸ್ಲಾಟ್, ಯಾರು ಇನ್- ಯಾರು ಔಟ್..?

5 ಮಂದಿ ಸ್ಪಿನ್ನರ್ಸ್​, 2 ಸ್ಲಾಟ್, ಯಾರು ಇನ್- ಯಾರು ಔಟ್..?

ಶ್ರೀಲಂಕಾ ಪ್ರವಾಸದಲ್ಲಿ ನಾಯಕ ಶಿಖರ್​ ಧವನ್​, ಕೋಚ್​ ರಾಹುಲ್​ ದ್ರಾವಿಡ್​​ ಇಬ್ಬರಿಗೆ ದೊಡ್ಡ ತಲೆನೋವು ತಂದಿರೋದು ಅಂದ್ರೆ, ಅದು ಸ್ಪಿನ್ನರ್​​ಗಳ ಆಯ್ಕೆ. ಶ್ರೀಲಂಕಾ ವಿರುದ್ಧದ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಗೆ 20 ಜನರನ್ನ ಆಯ್ಕೆ ಮಾಡಿ, ಸೆಲೆಕ್ಷನ್​ ಕಮಿಟಿ ಕೈ ತೊಳೆದುಕೊಂಡಿದೆ. ಆದ್ರೀಗ ಪೀಕಲಾಟಕ್ಕೆ ಸಿಲುಕಿರೋದು, ಸಾರಥ್ಯ ವಹಿಸಿಕೊಂಡಿರುವ ಶಿಖರ್​ ಧವನ್​ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​..! ಅದರಲ್ಲೂ ಸ್ಪಿನ್​ ಕೋಟಾದಲ್ಲಿ ಸ್ಥಾನಕ್ಕಿರುವ ಫೈಟ್​​, ತಲೆನೋವಿಗೆ ಕಾರಣವಾಗಿದೆ.

ಇದು ನಾಯಕನಿಗೆ ದೊಡ್ಡ ತಲೆನೋವಾಗಲಿದೆ. ಈ ಮಾತನ್ನ ಹೇಳಿದ್ದು ಮಾಜಿ ಕ್ರಿಕೆಟಿಗ ಹಾಲಿ ವಿಶ್ಲೇಷಕ ಆಕಾಶ್​ ಚೋಪ್ರಾ. ಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾವನ್ನ ಪ್ರಕಟಿಸಿದ ದಿನ ತಂಡದ ಬಗ್ಗೆ ಮಾತನಾಡಿದ್ದ ಚೋಪ್ರಾ, ಸ್ಪಿನ್ನರ್​​ಗಳ ಆಯ್ಕೆ ನಾಯಕನಿಗೆ ತಲೆನೋವಾಗಲಿದೆ ಅಂದಿದ್ರು. ಅದು ನಿಜ ಕೂಡ, ಇರೋ 6 ಆಟಗಾರರ ಪೈಕಿ ಕೇವಲ ಇಬ್ಬರನ್ನ ಆಯ್ಕೆ ಮಾಡಿಕೊಳ್ಳಬೇಕಂದ್ರೆ, ಅದು ಸುಲಭದ ಮಾತಲ್ಲ.

blank

ಒಂದು ಸ್ಥಾನಕ್ಕೆ ಯುಜುವೇಂದ್ರ ಚಹಲ್​ ಫಿಕ್ಸ್​​?
ಹಲವು ವರ್ಷಗಳಿಂದ ಸೀಮಿತ ಓವರ್​ಗಳ ತಂಡದ ಖಾಯಂ ಸದಸ್ಯನಾಗಿರುವ ಯುಜುವೇಂದ್ರ ಚಹಲ್​, ಶ್ರೀಲಂಕಾ ಪ್ರವಾಸದಲ್ಲೂ ಪ್ಲೇಯಿಂಗ್​-XIನಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಖಚಿತ. ವೈಟ್​ ಬಾಲ್​ ಫಾರ್ಮಾಟ್​​​ನಲ್ಲಿ ಆಡಿದ ಅನುಭವ ಹಾಗೂ ಸಾಧಿಸಿರುವ ಯಶಸ್ಸು ಚಹಲ್​ಗೆ ಕೈ ಹಿಡಿಯಲಿದೆ ಎನ್ನಲಾಗ್ತಿದೆ. ಆದರೂ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ವಿಕೆಟ್​ಗಾಗಿ ಹುಡುಕಾಟ ನಡೆಸಿರೋದು, ಚಹಲ್​ಗೆ ಹಿನ್ನಡೆಯಾಗಿದೆ. ಹೀಗಾಗಿ ಚಹಲ್​ ಆಯ್ಕೆಯ ನಿರ್ಧಾರವೂ ಕುತೂಹಲ ಮೂಡಿಸಿದೆ.

blank

ಇನ್ನೊಂದು ಸ್ಥಾನಕ್ಕೆ ಕುಲ್​ದೀಪ್​ ಟಫ್​ ಕಾಂಪಿಟೇಟರ್​!
ಒಂದು ಸ್ಥಾನದಲ್ಲಿ ಚಹಲ್​, ಕನ್​ಫರ್ಮ್​ ಅಂತಿದ್ದಂತೆ ಇನ್ನೊಂದು ಸ್ಥಾನದ ಪೈಪೋಟಿ ತೀವ್ರಗೊಂಡಿದೆ. ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವ ಕುಲ್​ದೀಪ್​ ಯಾದವ್​ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಶ್ರೀಲಂಕಾದಲ್ಲಿ ಆಡಿರುವ ಅನುಭವ ಹೊಂದಿರೋದು, ಸೀಮಿತ ಓವರ್​​ಗಳ ಮಾಡಿರುವ ಟ್ರ್ಯಾಕ್​ ರೆಕಾರ್ಡ್​​ ಕುಲ್​ದೀಪ್​ಗೆ ಪ್ಲಸ್​​ ಪಾಯಿಂಟ್​ ಆಗಿದೆ. ಆದ್ರೆ, ಇತ್ತೀಚಿನ ದಿನಗಳ ಪ್ರದರ್ಶನ ನೀರಸವಾಗಿರೋದು ಕುಲ್​ದೀಪ್​ ಆಯ್ಕೆಗೆ ತೂಗುಗತ್ತಿಯಾಗಿದೆ.

blank

ಕೃನಾಲ್​ ಪಾಂಡ್ಯಾಗೆ ಸಿಗುತ್ತಾ ಚಾನ್ಸ್​​?
ಸ್ಪಿನ್​ ಕೋಟಾದಲ್ಲಿ ಸ್ಥಾನಕ್ಕಿರುವ ಪೈಪೋಟಿಯನ್ನ ಕೃನಾಲ್​ ಪಾಂಡ್ಯ ಹೆಚ್ಚಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್​ ಎದುರಿನ ಸರಣಿಯಲ್ಲಿ ಭರವಸೆಯ ಆಟವಾಡಿರುವ ಕೃನಾಲ್​, ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲರು. ಲೋಯರ್​ ಆರ್ಡರ್​​ನಲ್ಲಿ ಸ್ಪೋಟಕ ಬ್ಯಾಟಿಂಗ್​ ನಡೆಸಬಲ್ಲ ಸಾಮರ್ಥ್ಯವೇ ಕೃನಾಲ್​ಗಿರುವ ಪ್ಲಸ್​​ ಪಾಯಿಂಟ್​ ಆಗಿದೆ.

ಅವಕಾಶದ ನಿರೀಕ್ಷೆಯಲ್ಲಿ ಮಿಸ್ಟರಿ ಸ್ಪಿನ್ನರ್​​!
ಕಳೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​​ ವಿರುದ್ಧದ ಸರಣಿಗೆ ಆಯ್ಕೆಯಾದ್ರೂ, ಇಂಜುರಿ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ನತದೃಷ್ಟ ವರುಣ್​ ಚಕ್ರವರ್ತಿಗೆ ಮತ್ತೆ ಅವಕಾಶದ ಬಾಗಿಲು ತೆರೆದಿದೆ. ಯಾವುದೇ ಅಡ್ಡಿ-ಆತಂಕಗಳಿಲ್ಲದೇ ಈ ಬಾರಿ ಮಿಸ್ಟರಿ ಸ್ಪಿನ್ನರ್ ಶ್ರೀಲಂಕಾವನ್ನೂ ತಲುಪಿದ್ದಾರೆ. ಆದ್ರೆ, ಆಡುವ ಬಳಗದಲ್ಲಿ ಸ್ಥಾನ ಸಿಗುತ್ತಾ ಅನ್ನೋದೇ ಈಗ ಪ್ರಶ್ನೆಯಾಗಿದೆ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವವಿರುವವರ ಜೊತೆ ವರುಣ್​ ಫೈಟ್​ ನಡೆಸಬೇಕಾಗಿದೆ.

blank

ಪದಾರ್ಪಣೆ ಕನಸಲ್ಲಿ ಕನ್ನಡಿಗ ಗೌತಮ್​..!
ವೃತ್ತಿ ಜೀವನದಲ್ಲಿ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕನ್ನಡಿಗ ಕೃಷ್ಣಪ್ಪ ಗೌತಮ್​ ಪದಾರ್ಪಣೆ ಮಾಡುವ ಕನಸಿನಲ್ಲಿದ್ದಾರೆ. ದೇಶಿ ಕ್ರಿಕೆಟ್​​ನಲ್ಲಿ ಮಿಂಚು ಹರಿಸಿರುವ ಗೌತಮ್​, ಐಪಿಎಲ್​ನಲ್ಲೂ ಉತ್ತಮ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ದುಬಾರಿ ಬೆಲೆಗೆ ಬಿಕರಿಯಾದ್ರೂ ಈ ಆವೃತ್ತಿ ಐಪಿಎಲ್​ನಲ್ಲಿ ಒಂದೇ ಒಂದು ಪಂದ್ಯವನ್ನಾಡುವ ಭಾಗ್ಯ ಗೌತಮ್​ಗೆ ದೊರೆಯಲಿಲ್ಲ. ಇದೀಗ ಲಂಕಾ ಪ್ರವಾಸದಲ್ಲಾದ್ರೂ ಅವಕಾಶ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಇವರಷ್ಟೇ ಅಲ್ಲ..! ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಗೂಗ್ಲಿ ಬೌಲಿಂಗ್​ನಿಂದಲೇ ಗಮನ ಸೆಳೆದ ರಾಹುಲ್​ ಚಹರ್​ ಕೂಡ ಪ್ಲೇಯಿಂಗ್​ ಇಲೆವೆನ್​ ಸ್ಥಾನಕ್ಕೆ ಪ್ರಬಲ ಪೈಪೋಟಿಯನ್ನ ಒಡ್ಡಿದ್ದಾರೆ. ಈಗಾಗಲೇ 3 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಅನುಭವವೂ ಚಹರ್​ಗಿದೆ. ಹೀಗಾಗಿ ರಾಹುಲ್​ ಚಹರ್​ರನ್ನೂ ಟೀಮ್​ ಮ್ಯಾನೇಜ್​ಮೆಂಟ್​​ ಕಡೆಗಣಿಸುವಂತಿಲ್ಲ.

ಒಟ್ಟಿನಲ್ಲಿ.. ಇರೋ 2 ಸ್ಲಾಟ್​ಗೆ 6 ಆಟಗಾರರ ನಡುವೆ ತೀವ್ರ ಪೈಪೋಟಿ ಇರೋದಂತೂ ಸ್ಪಷ್ಟವಾಗಿದೆ. ಹೀಗಾಗಿ ಯಾವ ಮಾನದಂಡದಲ್ಲಿ ಪ್ಲೇಯಿಂಗ್​ ಇಲೆವೆನ್​ಗೆ ಯಾರನ್ನ ಆಯ್ಕೆ ಮಾಡಲಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

The post 5 ಮಂದಿ ಸ್ಪಿನ್ನರ್ಸ್​, 2 ಸ್ಲಾಟ್, ಯಾರು ಇನ್- ಯಾರು ಔಟ್..? appeared first on News First Kannada.

Source: newsfirstlive.com

Source link