ರೇಖಾ ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಜೊತೆಯಲ್ಲಿದ್ದು ದಾಳ ಉರುಳಿಸಿದ್ಳಾ ಮಾಲಾ?

ರೇಖಾ ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಜೊತೆಯಲ್ಲಿದ್ದು ದಾಳ ಉರುಳಿಸಿದ್ಳಾ ಮಾಲಾ?

ಸಿನಿಮಾ ಕಾದಂಬರಿಗಳಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿರುವ ಮಾಜಿ ಕಾರ್ಪೋರೇಟರ್ ರೇಖಾ ಕದೀರೇಶ್ ಹತ್ಯೆ ಪ್ರಕರಣ ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಕದಿರೇಶ್ ಸಹೋದರಿ ಮಾಲಾ ಮಾತ್ರವಲ್ಲದೇ ಆಕೆಯ ಪುತ್ರ ಅರುಳ್ ನೆರಳು ಕೂಡ ರೇಖಾ ಹತ್ಯೆಯಲ್ಲಿ ಕಾಣ್ತಿದೆ. ಈ ಪಾತಕ ಪ್ರಪಂಚದಲ್ಲಿ ಯಾವುದೋ ಗಲ್ಲಿಯಲ್ಲಿ ಕೂತು ಹಬ್ಬಿಸುವ ವದಂತಿಯೊಂದು ಮುಂದೆ ಯಾವ ರೀತಿಯಲ್ಲಿ ದೊಡ್ಡ ಮಟ್ಟಗಿನ ರಕ್ತದೋಕುಳಿಗೆ ಕಾರಣವಾಗುತ್ತೆ ಎಂಬುದಕ್ಕೆ ಈ ರೇಖಾ ಕದಿರೇಶ್ ಹತ್ಯೆಯೇ ಸಾಕ್ಷಿ.

ಹೌದು. ರೇಖಾ ಹತ್ಯೆಯ ಅಸಲಿಯತ್ತು ಗೊತ್ತಾಬ್ಕೇದಾದ್ರೆ ಈ ಚಿಕ್ಕ ಫ್ಲಾಶ್ ಬಾಕ್ ನೋಡ್ಲೇಬೇಕು. ಅದು ಕದನಗಳ ಕೋಟೆ ಕಾಟನ್​​​ಪೇಟೆ. ಬರೀ ರಕ್ತರಂಜಿತ ಕಥೆಗಳೇ ತೆರೆದುಕೊಳ್ಳುವ ಕಾಟನ್ ಪೇಟೆಯ ನೆಲಕ್ಕೆ ಎಂದೂ ಅಳಿಸಲಾಗದ ನೆತ್ತರಿನ ಕಲೆ ಅಂಟಿದೆ. ಈ ಕಾಟನ್​ಪೇಟೆ ಎನ್ನುವುದೇ ಒಂದು ರೌಡಿಗಳ ಹಾಲುಗೊಂಪೆ. ಈ ನೆಲ ಎಂದೂ ಅಳಿಸಲಾಗದಷ್ಟು ನೆತ್ತರು ಕುಡಿದಿದೆ. ಆದ್ರೂ ನೆತ್ತರಿನ ದಾಹ ಮಾತ್ರ ಕಡ್ಮೆಯಾಗಿಲ್ಲ. ಇಲ್ಲಿ ಪದೇ ಪದೇ ರಕ್ತ ಹರಿಯುತ್ತಲ್ಲೇ ಇರುತ್ತೆ. ಇದೇ ಕಾಟನ್​​​​ಪೇಟೆಯಲ್ಲಿ ಕಳ್ಳ ಬಟ್ಟಿ ಸಾರಾಯಿ, ಗಾಂಜಾ ವ್ಯಹಾರದಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡಿದ್ದವನೇ ಈ ಕದಿರೇಶ್. ಪುರಾತನ ಪಾತಕಿ ಬೆಕ್ಕಿನ ಕಣ್ಣು ರಾಜೇಂದ್ರನ ಬೆಂಬಲದೊಂದಿಗೆ ಈ ಕದಿರೇಶ್ ತನ್ನ ಅಕ್ರಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದ. ಅದಕ್ಕು ಮೊದಲು ಬೆಕ್ಕಿನ ಕಣ್ಣು ರಾಜೇಂದ್ರನ ಗ್ಯಾಂಗ್​ನಲ್ಲಿ ಕದಿರೇಶ್ ಒಬ್ಬನೇ ಕಾಟನ್​​ಪೇಟೆಯಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದ ಹೊತ್ತಲ್ಲೇ ಕದಿರೇಶ್ ಅದೇ ಕಾಟನ್​​ಪೇಟೆಯಲ್ಲಿ ಹೆಣವಾಗಿ ಹೋಗಿದ್ದ.

ಬೆಂಗಳೂರು ಅಂಡರ್ ವರ್ಲ್ಡ್​​​ನಲ್ಲಿ ಭಾರೀ ಸಂಚಲನ ಮೂಡಿಸಿದ್ದ, 2018ರಲ್ಲಿ ನಡೆದ ಈ ಕದಿರೇಶ್ ಹತ್ಯೆ ಪ್ರಕರಣ ರಾಜಕೀಯ ರಂಗದಲ್ಲೂ ಭಾರೀ ಸದ್ದು ಮಾಡಿತ್ತು. ಕದಿರೇಶ್ ಕುಟುಂಬದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇವು ಕದಿರೇಶ್ ಸಹೋದರಿ ಮಾಲಾ ಪುತ್ರ ಅರುಳ್ ಕೈಗೂ ನೆತ್ತರು ಅಂಟಲು ಕಾರಣವಾಯ್ತು.

ಕದಿರೇಶ್ ಮಾಡಿದ ಅಕ್ರಮ ಕೃತ್ಯಗಳೇ ಅಂದು ಕದಿರೇಶ್​​ನನ್ನು ಬಲಿ ಪಡೆದುಕೊಂಡಿದ್ದು ಒಂದು ಮಾತಾದಾರೆ.. ರಾಜಕೀಯ ವೈರತ್ವಕ್ಕೆ, ಕುಟುಂಬದ ಕಲಹಕ್ಕೆ ಕದಿರೇಶ್ ಹತ್ಯೆ ನಡೆಯಿತು ಎನ್ನುವುದು ಮತ್ತೊಂದು ಮಾತು. ಕದಿರೇಶ್ ಹತ್ಯೆಯಾದ ನಂತರ, ಆತನ ಎರಡನೇ ಹೆಂಡತಿ ರೇಖಾ ಕದಿರೇಷ್ ಕುಟುಂಬದೊಂದಿಗೆ ಅಂತರ ಕಾಯ್ದುಕೊಂಡಿದ್ಳು. ಕದಿರೇಶ್​​ನ ಎಲ್ಲಾ ಆಸ್ತಿಯನ್ನು ತಾನೊಬ್ಬಳೇ ಅನುಭವಿಸುತ್ತಿದ್ಳು. ಇದು ಕದಿರೇಷ್ ತಂಗಿ ಮಾಲ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಅಷ್ಟೇ ಅಲ್ಲ, ಛಲವಾದಿಪಾಳ್ಯದಲ್ಲಿ ರೇಖಾ ಕದಿರೇಷ್ ರಾಜಕೀಯವಾಗಿ ತುಂಬಾ ಬೆಳೆದು ಬಿಟ್ಟಿದ್ಳು. ಇದ್ರಿಂದ ತನ್ನ ಮಗಳು ಛಲವಾದಿಪಾಳ್ಯದ ಚುಕ್ಕಾಣಿ ಹಿಡಿಯಲು ರೇಖಾ ಅಡ್ಡ ಬರ್ತಾಳೆನ್ನುವುದು ಮಾಲಾಗೆ ಕನ್ಫರ್ಮ್ ಆಗಿತ್ತು. ರೇಖಾಳ ಕಥೆ ಮುಗಿಸಿದ್ರೆ ಮಗಳ ರಾಜಕೀಯ ಭವಿಷ್ಯಕ್ಕೆ ರಹದಾರಿ ನಿರ್ಮಾಣವಾಗುತ್ತೆ ಎಂದುಕೊಂಡ ಮಾಲಾ ತನ್ನ ಮಗನ ಜೊತೆ ಸೇರಿ ರೇಖಾ ಹತ್ಯೆಗೆ ಸ್ಕೆಚ್ ಹೆಣೆದಿದ್ಳು ಎನ್ನಲಾಗಿದೆ.

ರೇಖಾ ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಮಾಲಾ-ಅರುಳ್
ಜೊತೆಯಲ್ಲಿದ್ದು ಅತ್ತಿಗೆ ರೇಖಾಳ ಉರುಳಿಸಿದ್ಳಾ ಮಾಲಾ?

blank

ರೇಖಾ ಹತ್ಯೆಗೆ ಪ್ಲಾನ್ ನಡೆದಿದ್ದು ಒಂದೆರಡು ದಿನಗಳಿಂದಲ್ಲ . 4-6 ತಿಂಗಳಿನಿಂದಲೇ ರೇಖಾ ಹತ್ಯೆಗೆ ಪ್ಲಾನ್ ನಡೆದಿತ್ತು ಎನ್ನವುದು ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದ ವಿಷಯ. ರೇಖಾ ಹತ್ಯೆ ಮಾಡಲು ಮಾಲಾ ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿದ್ಳು. ಮಗನನ್ನು ಮುಂದಿಟ್ಟುಕೊಂಡು ಮಗ್ಗುಲಲ್ಲೇ ಇದ್ದು ಹತ್ಯೆಗೆ ಸ್ಕೆಚ್ ಸಿದ್ದಪಡಿಸಿದ್ದಳು ಎನ್ನಲಾಗಿದೆ. ಹೀಗಾಗಿ ತಾನೂ ಕೂಡ ಫೀಲ್ಡ್ ಗೆ ಇಳಿದು ರೇಖಾ ಶತ್ರುಳನ್ನೆಲ್ಲಾ ಒಗ್ಗೂಡಿಸಿದ್ದಾಳೆ. ತನ್ನ ಮಗನನ್ನು ಫೀಲ್ಡ್ ಗೆ ಬಿಟ್ಟು, ತನಗಿದ್ದ ನೆಟ್ ವರ್ಕ್ ಬಳಸಿ ರೇಖಾ ಕದಿರೇಷ್ ಶತ್ರುಗಳ ಬಗ್ಗೆ ಇನ್ಫರ್ಮೇಷನ್ ಕಲೆ ಹಾಕಿದ್ದಾಳೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಹೌದು. ಶತ್ರುವಿನ ಶತ್ರು ಮಿತ್ರ ಎಂಬ ಮಾತನ್ನು ಈ ಮಾಲ ಚೆನ್ನಾಗಿ ಅರಗಿಸಿಕೊಂಡಿದ್ಳು. ರೇಖಾಳನ್ನು ಮುಗಿಸಲೇ ಬೇಕೆಂದು ಹತ್ಯೆಯ ನಕ್ಷೆ ಸಿದ್ದ ಪಡಿಸಿ ಓಡಾಡುತ್ತಿದ್ದ ಮಾಲಾ ಮೊದ್ಲು ರೇಖಾಗೆ ಯಾರೆಲ್ಲಾ ಶತ್ರುಗಳಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕಿದ್ದಾಳೆ. ಈ ವೇಳೆ ಮಾಲ ಕಣ್ಣಿಗೆ ಬಿದ್ದವರೇ ಈ ಪೀಟರ್, ಸೂರ್ಯ, ಸ್ಟೀಫನ್.

ರೇಖಾ ಕದಿರೇಷ್ ಹತ್ಯೆ ಮಾಡಿದ ಸೂರ್ಯ, ಪೀಟರ್, ಸ್ಟೀಫನ್ ಬೇರೆ ಯಾರು ಅಲ್ಲ.. ರೇಖಾ ಹಾಗೂ ಆಕೆಯ ಗಂಡ ಕದಿರೇಷ್ ಮನೆಯಂಗಳದಲ್ಲಿಯೇ ಆಡಿ ಬೆಳೆದವರು. ಆರಂಭದಲ್ಲಿ ಕದಿರೇಷ್ ಜೊತೆ ಸೇರಿ ಒಟ್ಟೊಟ್ಟಿಗೆ ಕೃತ್ಯ ಎಸಗಿ ಒಟ್ಟೊಟ್ಟಿಗೆ ಜೈಲಿನಲ್ಲಿ ಮುದ್ದೆ ಮುರಿದು ಬಂದವರು. ಜೋಪಡಿ ರಾಜೇಂದ್ರನ ಕೊಲೆಯಲ್ಲಿ ಕದಿರೇಷ್ ಜೊತೆ ಪೀಟರ್ ಕೂಡ ಜೈಲುವಾಸ ಅನುಭವಿಸಿದ್ರೆ, ಕದಿರೇಶ್ ಹತ್ಯೆಗೆ ಪ್ರತೀಕಾರವಾಗಿ ನಡೆದ ಶೋಭನ್ ಕೊಲೆಯಲ್ಲಿ ಸೂರ್ಯ ಕೂಡ ಜೈಲಿನಲ್ಲಿ ಮುದ್ದೆ ಮುರಿದು ಬಂದಿದ್ದ.

ಆದ್ರೆ ಟೆಂಡರ್ ವಿಚಾರವಾಗಿ ಪೀಟರ್ ರೇಖಾ ದುಷ್ಮನ್​​​ಗಿರಿ ಕಟ್ಟಿಕೊಂಡಿದ್ದು, ಜೈಲಿನಲ್ಲಿದ್ದಾಗ ಬೇಲ್ ಕೊಡಿಸಿದೆ ದೂರ ಇಟ್ಟ ಕಾರಣಕ್ಕೆ ಸೂರ್ಯನಿಗೆ ರೇಖಾಳ ಮೇಲೆ ವೈರತ್ವ ಹುಟ್ಟಿಕೊಂಡಿದ್ದು, ಸ್ಟೀಫನ್​​​ನನ್ನು ರೇಖಾ ಸೈಡ್ ಲೈನ್ ಮಾಡಿದ್ದು, ಹೀಗೆ ರೇಖಾ ಶತ್ರುಗಳ ಒಂದೊಂದೆ ರಹಸ್ಯಗಳು ಮಾಲಾ ಕೈಸೇರಿತ್ತು. ಇದನ್ನೇ ಮುಂದಿಟ್ಟುಕೊಂಡು ಮಾಲಾ ಆರೋಪಿಗಳ ಬ್ರೈನ್ ವಾಶ್ ಮಾಡಿದ್ದಾಳೆ ಎನ್ನಲಾಗಿದೆ. ಆದ್ರೆ ಮಾಲಾ ಮಾಡಿದ ಈ ಪ್ಲಾನ್ ಆರೋಪಿಗಳನ್ನು ಕೆರಳಿಸಿತ್ತಾದ್ರೂ, ಮಚ್ಚು ಕೈಗೆತ್ತಿಕೊಳ್ಳುವಷ್ಟರ ಮಟ್ಟಿಗೆ ಹೋಗಿರ್ಲಿಲ್ಲ. ಆದ್ರೆ ಇದೇ ಸಂದರ್ಭದಲ್ಲಿ ಮಾಲಾ ತನ್ನ ಮಗನ ಮೂಲಕ ಮತ್ತೊಂದು ರಣ ತಂತ್ರ ಹೂಡಿದ್ದಾಳೆ ಎನ್ನಲಾಗಿದೆ.

ಮಗನ ಮೂಲಕ ವದಂತಿ ಹಬ್ಬಿಸಿದ್ದ ಮಾಲಾ
ಮಾಲಾ ಮಾತಿಗೆ ಮರುಳಾದ್ರಾ ಆರೋಪಿಗಳು?

blank

ಇಲ್ಲೇ ನೋಡಿ.. ಈ ಪೀಟರ್, ಸೂರ್ಯ, ಸ್ಟೀಫನ್ ರೇಖಾ ಮೇಲೆ ಬೀಸಲು ಮಚ್ಚು ಕೈಗೆತ್ತಿಕೊಂಡಿದ್ದು. ಹೌದು.. ಕದಿರೇಶ್​ ಶಿಷ್ಯಂದಿರಾಗಿದ್ದ ಪೀಟರ್, ಸೂರ್ಯ, ಸ್ಟೀಫನ್ ತಮ್ಮ ಬಾಸ್ ಗಾಗಿ ಹಲವು ಬಾರಿ ಕೇಸ್ ಗಳನ್ನು ಮೈಮೇಲೆ ಎಳೆದುಕೊಂಡಿದ್ರು. ಇವೆಲ್ಲವು ರೌಡಿಶೀಟರ್ ಆಗಿದ್ದ ಮಾಲಾಗೆ ಗೊತ್ತಿತ್ತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಗನ ಮುಖಾಂತರ ಮಾಲಾ ಮತ್ತೊಂದು ದಾಳ ಉರುಳಿಸಿದ್ದಾಳೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲ್ಸ ಮಾಡಿದ್ದಾಳೆ. ಕದಿರೇಶ್​​ನನ್ನು ಕೊಲ್ಲಿಸಿದ್ದು ರೇಖಾನೇ ಎಂದು ಮಗನ ಮೂಲಕ ವದಂತಿ ಹಬ್ಬಿಸಿದ್ದಾಳೆ. ಇದೇ ವಿಷಯವನ್ನು ಆರೋಪಿಗಳ ಕಿವಿಯಲ್ಲಿ ಒತ್ತಿ ಒತ್ತಿ ಹೇಳಿದ್ದಾಳೆ. ಇವು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ. ಅದಾಗ್ಲೆ ರೇಖಾ ವಿರುದ್ಧ ಕೋಪದಿಂದ ಕುದಿಯುತ್ತಿದ್ದ ಇವರ ದ್ವೇಷ ಹೆಚ್ಚಾಗೋದಕ್ಕೆ ಶುರು ಆಗಿತ್ತು.

ರೇಖಾ ಶತ್ರುಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಈ ಮಾಲಾ ಗುಪ್ತವಾಗಿ ಕತ್ತಲ ಕೋಣೆಯಲ್ಲಿ ಕೂತು ಮೀಟಿಂಗ್ ಮಾಡಿದ್ದಾಳೆ. ರೇಖಾ ಶತ್ರುಗಳ ಸಮ್ಮುಖದಲ್ಲೇ ಕೂತು ಹತ್ಯೆಗೆ ಪ್ಲಾನ್ ಮಾಡಿದ್ದಾಳೆ. ಇದೇ ಸಂದರ್ಭದಲ್ಲಿ ಆರೋಪಿಗಳಿಗೆ ಮಾಲಾ ಭರ್ಜರಿ ಆಫರ್ ಕೂಡ ನೀಡಿದ್ದಾಳೆ ಎನ್ನಲಾಗಿದೆ. ರೇಖಾಳನ್ನು ಕೊಂದವರ ಮನೆಯ ಜವಾಬ್ದಾರಿ ನೋಡ್ಕೊಳ್ಳುವುದಾಗಿಯೂ, ಜೈಲಿಗೆ ಹೋದ್ರೆ ಜಾಮೀನು ಮಾತ್ರವಲ್ಲದೇ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ನುಗ್ಗಿಸದಂತೆ ವ್ಯವಸ್ಥೆ ಮಾಡುವುದಾಗಿಯೂ ಆಫರ್ ಕೊಟ್ಟಿದ್ಳು. ಅಲ್ಲದೆ ಹಣಕಾಸಿನ ಆಮಿಷವೊಡಿದ್ದಳು ಎನ್ನುವ ಮಾತುಗಳು ಕೇಳಿ ಬಂದಿದ್ದು, ಪೊಲೀಸರು ಈ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಒಂದು ಕಡೆ ಹಣದ ದಾಹ, ಮತ್ತೊಂದು ಕಡೆ ಕದಿರೇಶ್​​ ಮೇಲಿನ ಮೋಹ, ಮಗೊಂದು ಕಡೆ ಸೈಡ್ ಲೈನ್ ಮಾಡಿದ ವೈರತ್ವ ..ಇವೆಲ್ಲವು ಆರೋಪಿಗಳಿಗೆ ರೇಖಾಳನ್ನು ಕೊಲ್ಲದೇ ಮತ್ತೊಂದು ದಾರಿ ಇಲ್ಲ ಎಂಬಂತ್ತಾಗಿತ್ತು. ರೇಖಾ ವಿರುದ್ಧ ರೌಂಡ್ಸ್ ಶುರು ಮಾಡಿದ ಹಂತಕರು ಜೂನ್ 24 ರಂದು ಕಥೆ ಮುಗಿಸಿದ್ರು. ಜನರ ಕಣ್ಣೆದುರೇ  ಭೀಕರ, ಭಯನಾಕ, ಭೀಭತ್ಸವಾಗಿ ರೇಖಾರನ್ನು ಹತ್ಯೆ ಮಾಡಿದ್ರು. ಅಂದು ಎಲ್ಲವು ಮಾಲಾ ಇಶಾರೆಯಂತೆ ನಡೆದಿತ್ತು ಎನ್ನಲಾಗಿದೆ. ಕೃತ್ಯ ಎಸಗಿದ ನಂತರ ಹಂಕತರು ಆಟೋದ ಮೂಲಕವೇ ಕ್ಷಣಾರ್ಧಲ್ಲಿ ಎಸ್ಕೇಪ್ ಆಗಿದ್ರು. ಆದ್ರೆ ಸಿಸಿ ಕ್ಯಾಮೆರಾ ತಿರುಗಿಸಿದ್ರೂ ಹಂತಕರ ಅಟ್ಟಾಹಾಸ ಅದ್ಯಾರದ್ದೋ ಮೊಬೈಲ್ ನಲ್ಲಿ ಗುಟ್ಟಾಗಿ ಸೆರೆಯಾಗಿತ್ತು. ಚುರುಕಿನ ಕಾರ್ಯಾಚರಣೆಯ ಫಲವಾಗಿ ರೇಖಾ ಅಂತ್ಯಕ್ರಿಯೆ ನಡೆಯುವ ಮೊದಲೇ ಪೊಲೀಸರು ಆರೋಪಿಗಳನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗಿಸಿದ್ರು.

ಅರುಳ್ ಹಬ್ಬಿಸಿದ್ದ ವಿಚಾರವೇ ದ್ವೇಷವೆಂಬ ಹುತ್ತಾ ಬೆಳೆಯೋದಕ್ಕೆ ಶುರು ಆಗಿದ್ದು, ಬೆಳೆದು ಹೆಮ್ಮರವಾಗಿ ರೇಖಾಳ ವಿರುದ್ದ ಪಿತೂರಿ ಮಾಡಿ, ಸ್ಕೆಚ್ ಹಾಕಿ ನಂತರ ಕೊಲೆ ಮಾಡಲಾಗಿದೆ. ಇನ್ನು ಮಾಜಿ ಕಾರ್ಪೋರೇಟರ್​ ಕೊಲೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರ ತಂಡ ನಡೆಸುತ್ತಿರೋ ಇನ್ವೇಷ್ಟಿಗೇಷನ್​, ಮುಂದೆ ಯಾವ ದಿಕ್ಕಿನತ್ತ ಸಾಗುತ್ತೆ ಅನ್ನೋದನ್ನ ಕಾದುನೋಡಬೇಕು.

 

The post ರೇಖಾ ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಜೊತೆಯಲ್ಲಿದ್ದು ದಾಳ ಉರುಳಿಸಿದ್ಳಾ ಮಾಲಾ? appeared first on News First Kannada.

Source: newsfirstlive.com

Source link