ಸ್ವಲ್ಪ ಪ್ರೀತಿ.. ಸ್ವಲ್ಪ ಮುನಿಸು; ಅರವಿಂದ್ ವರ್ತನೆಗೆ ದಿವ್ಯಾ ಉರುಡುಗ ಭಾವುಕ

ಸ್ವಲ್ಪ ಪ್ರೀತಿ.. ಸ್ವಲ್ಪ ಮುನಿಸು; ಅರವಿಂದ್ ವರ್ತನೆಗೆ ದಿವ್ಯಾ ಉರುಡುಗ ಭಾವುಕ

ದಿವ್ಯಾ ಉರುಡುಗ ನಿನ್ನೆ ಯಾಕೋ ತುಂಬಾ ಬೇಸರಗೊಂಡಿದ್ದರು. ಕೇವಲ ಬೇಸರ ಮಾತ್ರವಲ್ಲ, ಕಣ್ಣೀರಿಟ್ಟಿದ್ದರು ಕೂಡ. ಇದಕ್ಕೆ ಕಾರಣ ಆ ಒಂದು ಟಾಸ್ಕ್‌.. ಬಿಗ್‌ಬಾಸ್​ ನೀಡಿದ ಥರಾಥರಾ ಈ ಎತ್ತರ ಟಾಸ್ಕ್​ನಲ್ಲಿ ಮೊದಲ ಸುತ್ತನ್ನು ಗೆದ್ದಿದ್ದ ಅರವಿಂದ ನೇತೃತ್ವದ ತಂಡ ಎರಡನೇ ಸುತ್ತಲ್ಲಿ ಟೈ ಆಯಿತು. ಇದು ಕ್ಯಾಪ್ಟನ್​ ಅರವಿಂದ ಮುನಿಸಿಗೆ ಕಾರಣವಾಯಿತು. ಆತ್ತ ಅರವಿಂದ ವರ್ತನೆಗೆ ದಿವ್ಯಾ ಉರುಡುಗ ಎಮೋಷನಲ್‌​ ಆದರು.

blank

ನಿನ್ನೆ ನಡೆದ ಟಾಸ್ಕ್​ನಲ್ಲಿ ಅರವಿಂದ ಟಾಸ್ಕ್​ ಪ್ರಾಪರ್ಟಿ ತರಲು ಹೋಗಿ ಸ್ಟೋರ್​ ರೂಂನಲ್ಲಿಯೇ ಸಿಕ್ಕಾಕಿಕೊಳ್ಳುತ್ತಾರೆ. ಇದರಿಂದ ಟಾಸ್ಕ್​ ಟೈ ಆಗುತ್ತದೆ. ನಂತರ ಹೊರ ಬಂದ ಅರವಿಂದ ತಂಡದ ಸದಸ್ಯರಿಗೆ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಏನೇ ಸಮಾಜಾಯಿಷಿ ಕೊಟ್ಟರು, ಅವರ ಕೋಪ ಮಾತ್ರ ತಣ್ಣಗಾಗೋದಿಲ್ಲ. ಇತ್ತ ಅವರನ್ನು ಸಮಾಧಾನ ಮಾಡಲು ಬಂದ ದಿವ್ಯಾ ಅವರು ಭಾವುಕರಾಗಿ ಕಣ್ಣೀರಿಡುತ್ತಾರೆ.
ಕೊಂಚ ಅಸಮಾಧಾನದಲ್ಲಿ ಇದ್ದ ಅರವಿಂದ, ದಿವ್ಯಾ ಅವರನ್ನು ಕಂಡು ಕರಗಿಹೋಗುತ್ತಾರೆ. ನಂತರ ದಿವ್ಯಾ ಅವರನ್ನು ಸಮಾಧಾನ ಪಡಿಸಿ, ತಂಡದ ಸದಸ್ಯರಿಗೆ ಜೋಶ್​ ತುಂಬುತ್ತಾರೆ. ಕೆ.ಪಿ.ಅರವಿಂದ್‌ ತುಸು ಮುನಿಸು, ತುಸು ಪ್ರೀತಿ ಬೆರೆತ ಮಾತಿನಿಂದ ದಿವ್ಯಾ ಉರುಡುಗ ನಿರಾಳರಾಗ್ತಾರೆ.

The post ಸ್ವಲ್ಪ ಪ್ರೀತಿ.. ಸ್ವಲ್ಪ ಮುನಿಸು; ಅರವಿಂದ್ ವರ್ತನೆಗೆ ದಿವ್ಯಾ ಉರುಡುಗ ಭಾವುಕ appeared first on News First Kannada.

Source: newsfirstlive.com

Source link