ಮತ್ತೆ ಬರ್ತಿದೆ ಡ್ಯಾನ್ಸ್ ಡ್ಯಾನ್ಸ್‌ ರಿಯಾಲಿಟಿ ಶೋ- ಯಾವಾಗ ಪ್ರಾರಂಭ..?

ಮತ್ತೆ ಬರ್ತಿದೆ ಡ್ಯಾನ್ಸ್ ಡ್ಯಾನ್ಸ್‌ ರಿಯಾಲಿಟಿ ಶೋ- ಯಾವಾಗ ಪ್ರಾರಂಭ..?

ರಿಯಾಲಿಟಿ ಶೋಗಳ ಫಾರ್ಮ್ಯಾಟ್‌ನಲ್ಲಿ ಕಿಕ್ ಕೊಡೋದು ಅಂದ್ರೆ ಅದು ಡ್ಯಾನ್ಸಿಂಗ್‌ ರಿಯಾಲಿಟಿ ಶೋ. ಸದ್ಯ ಡಿಕೆಡಿ ಪ್ರಸಾರವಾಗ್ತಿದೆ. ಸದ್ಯದಲ್ಲಿಯೇ ಇನ್ನೊಂದು ಡ್ಯಾನ್ಸಿಂಗ್ ರಿಯಾಲಿಟಿ ಶೋ ಲಾಂಚ್ ಆಗ್ಲಿದೆ. ಅದೇ ಡ್ಯಾನ್ಸ್ ಡ್ಸಾನ್ಸ್‌.

ಹೊಸತನವನ್ನ ಹುಟ್ಟು ಹಾಕಿದ ಶೋ ಅಂದ್ರೆ ಅದು ಡ್ಯಾನ್ಸ್‌ ಡ್ಯಾನ್ಸ್‌ ರಿಯಾಲಿಟಿ ಶೋ. ಡ್ಯಾನ್ಸಿಂಗ್ ಕಾರ್ಯಕ್ರಮ ಇನ್‌ಡೋರ್‌ ಅಲ್ಲದೆ ಔಟ್‌ಡೋರ್‌ನಲ್ಲೂ ಮಾಡಲಾಗಿತ್ತು. ಜೊತೆಗೆ 2016ರಲ್ಲಿ ಥೈಲ್ಯಾಂಡ್‌ನ ರಮಣೀಯ ತಾಣಗಳಲ್ಲೂ ಡ್ಯಾನ್ಸ್‌ ಡ್ಯಾನ್ಸ್‌ ಸ್ಪರ್ಧಿಗಳು ಹೆಜ್ಜೆ ಹಾಕಿದ್ದಾರೆ. ವಿದೇಶದಲ್ಲೂ ಕೂಡ ಈ ಕಾಂಪಿಟೇಶನ್‌ ನಡೆದಿತ್ತು. ಹೀಗೇ ಡ್ಯಾನ್ಸಿಂಗ್‌ ರಿಯಾಲಿಟಿ ಶೋನಲ್ಲಿ ತನ್ನದೇ ಆದ ಛಾಪು ಮೂಡಿಸಿರೋ ಡ್ಯಾನ್ಸ್ ಡ್ಯಾನ್ಸ್‌ ಮತ್ತೆ ಬರ್ತಿದೆ. ಸದ್ಯದಲ್ಲಿಯೇ ಸ್ಟಾರ್ ಸುವರ್ಣದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್‌ ಕೂಡ ನಡೆದಿತ್ತು. ಹಲವು ಪ್ರತಿಭೆಗಳಿಗೆ ಈ ವೇದಿಕೆ ಅವಕಾಶ ಕಲ್ಪಿಸಿತ್ತು.

ಜೂನಿಯರ್ಸ್ ಸೀನಿಯರ್ಸ್‌ಗಳಿಗೆ ಅವಕಾಶ ನೀಡಿರೋ ಡ್ಯಾನ್ಸ್ ಡ್ಯಾನ್ಸ್‌ನ ಹೊಸ ಸೀಸನ್‌ಗೆ ಆಡಿಷನ್ ನಡೆಯುತ್ತಿದೆ. ಬೆಂಗಳೂರಿನಲ್ಲಿ ಡ್ಯಾನ್ಸ್ ಡ್ಯಾನ್ಸ್ ಆಡಿಷನ್‌ ನಡೆದಿದೆ. ರಾಜ್ಯದ ಬೇರೆಡೆಯೂ ನಡೆಯಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಸದ್ಯದಲ್ಲಿಯೇ ಡ್ಯಾನ್ಸ್ ಡ್ಯಾನ್ಸ್‌ ರಿಯಾಲಿಟಿ ಶೋ ಆರಂಭವಾಗಲಿದೆ.

The post ಮತ್ತೆ ಬರ್ತಿದೆ ಡ್ಯಾನ್ಸ್ ಡ್ಯಾನ್ಸ್‌ ರಿಯಾಲಿಟಿ ಶೋ- ಯಾವಾಗ ಪ್ರಾರಂಭ..? appeared first on News First Kannada.

Source: newsfirstlive.com

Source link