ಸಿಎಂ ಬದಲಾವಣೆ ಪಕ್ಕ.. ನನ್ನ ಬಳಿ ಖಚಿತ ಮಾಹಿತಿಯಿದೆ -ಕೋಳಿವಾಡ

ಸಿಎಂ ಬದಲಾವಣೆ ಪಕ್ಕ.. ನನ್ನ ಬಳಿ ಖಚಿತ ಮಾಹಿತಿಯಿದೆ -ಕೋಳಿವಾಡ

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಕೆಳಗೆ ಇಳೀತಾರೆ. ಆರ್​​ಎಸ್​ಎಸ್​ ನವರಿಗೆ ಅಸಮಾಧಾನವಿದೆ. ಹಾಗಾಗಿ ಶೀಘ್ರದಲ್ಲೇ ಅವರು ಸಿಎಂ ಸ್ಥಾನದಿಂದ ಕೆಳಗಿಳಿತಾರೆ ಅಂತ ಕೆಪಿಸಿಸಿ ಶಿಸ್ತು ಸಮಿತಿ ಸದಸ್ಯ ಕೆ.ಬಿ ಕೋಳಿವಾಡ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ನನ್ನ ಬಳಿ ಖಚಿತ ಮಾಹಿತಿಯಿದೆ. ಅದರ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ. ಯತ್ನಾಳ್ ಮೇಲೆ ಯಾವುದೇ ಕ್ರಮ ಯಾಕೆ ತೆಗೆದುಕೊಂಡಿಲ್ಲ? ಸಿಎಂ ಬದಲಾವಣೆ ಪಕ್ಕ ಎಂದು ಹೇಳಿದ್ರು.

ಕಾಂಗ್ರೆಸ್​​ನಲ್ಲಿ ಮುಂದಿನ ಮುಖ್ಯಮಂತ್ರಿ ಹೇಳಿಕೆ ವಿವಾದದ ಹಿನ್ನಲೆ ಕೋಳಿವಾಡ ಇಂದು ಸುದ್ದಿಗೋಷ್ಟಿ ನಡೆಸಿ ಮಾತಣಾಡಿದ್ರು. ಮುಂದಿನ ಮುಖ್ಯಮಂತ್ರಿ ಹೇಳಿಕೆಗಳು ಸರಿಯಲ್ಲ. ನಾಯಕರೆಲ್ಲ ಒಗ್ಗೂಡಿ ಹೋದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದರು. ಮಾಧ್ಯಮಗಳಲ್ಲಿ ದಲಿತ ಮುಖ್ಯಮಂತ್ರಿ, ಮೂರನೇ ಬಣ ಅಂತ ಬರ್ತಿರೋದೆಲ್ಲ ಸುಳ್ಳು. ಪರಮೇಶ್ವರ್, ಹರಿಪ್ರಸಾದ್, ಮುನಿಯಪ್ಪ ಅವರೆಲ್ಲ ಅಪ್ಪಟ ಕಾಂಗ್ರೆಸ್ಸಿಗರು. ಅವರೆಲ್ಲ ಎಂದೂ‌ ಪಕ್ಷ ವಿರೋಧಿ ಕೆಲಸ ಮಾಡುವವರಲ್ಲ. ಅವರು ಪಕ್ಷದ ಹಿತದೃಷ್ಟಿಯಿಂದ ದೆಹಲಿಗೆ ಹೋಗಿದ್ದಾರೆ ಅಂತ ಹೇಳಿದ್ರು.

ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ 15 ಜನ ಅರ್ಹರಿದ್ದಾರೆ
ಕೆಪಿಸಿಸಿಯಲ್ಲಿ ಸಮನ್ವಯತೆ ಇದೆ. ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಮಧ್ಯೆ ಸಮನ್ವಯ ಇದೆ. ನಿನ್ನೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದು ಖುಷಿ ನೀಡಿದೆ, ಪಕ್ಷಕ್ಕೆ ಒಳಿತಾಗಿದೆ. ಪಕ್ಷ ಕಟ್ಟುವ ಬಗ್ಗೆ ಇಬ್ಬರು ಮಾತನಾಡಿದ್ದಾರೆ. ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕೆ 15 ಜನ ಅರ್ಹರಿದ್ದಾರೆ. ಆದ್ರೆ ಅದರ ಬಗ್ಗೆ ಚರ್ಚೆ ಬೇಡ. ರಾಜ್ಯ ಸರ್ಕಾರ ಕೊರೊನಾ ಎದುರಿಸವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಸರ್ಕಾರ ತಾಂಡವಾಡುತ್ತಿದೆ ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ರು.

 

The post ಸಿಎಂ ಬದಲಾವಣೆ ಪಕ್ಕ.. ನನ್ನ ಬಳಿ ಖಚಿತ ಮಾಹಿತಿಯಿದೆ -ಕೋಳಿವಾಡ appeared first on News First Kannada.

Source: newsfirstlive.com

Source link