ಗಂಡು ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಖ್ಯಾತಿಯ ನಟಿ ನಯನಾ

ಗಂಡು ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಖ್ಯಾತಿಯ ನಟಿ ನಯನಾ

ಬಿಗ್​ಬಾಸ್​ ಸೀಸನ್​ 6 ಕಂಟೆಸ್ಟೆಂಟ್​ ನಯನಾ ಇದೀಗ ತಮ್ಮ ಜೀವನದ ಅತ್ಯಮೂಲ್ಯ ಕ್ಷಣವನ್ನು ಅನುಭವಿಸುತ್ತಿದ್ದಾರೆ. ತಾಯಿತನ ಎನ್ನುವುದು ಹೆಣ್ಣಿನ ದೊಡ್ಡ ಸ್ಟೇಜ್​ ಹಾಗೂ ತುಂಬಾನೆ ಖುಷಿ ಕೊಡುವ ಟೈಮ್. ಈಗ ಈ ಸಂತಸ ಅನುಭವಿಸ್ತಿದ್ದಾರೆ ನಯನಾ. ಯಾಕಂದ್ರೆ, ನಯನಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

ನಯನಾ ಜೂನ್‌ 28ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಕೈ ಫೋಟೋವನ್ನೂ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಮಾಡಿರೋ ನಯನಾ,​ yes its a baby boy ಎಂದು ಬರೆದುಕೊಂಡಿದ್ದಾರೆ. ಫೋಟೋ ಪೋಸ್ಟ್ ಮಾಡ್ತಿದ್ದಂತೆ ಫ್ಯಾನ್​ಗಳಿಂದ ಲೈಕ್ಸ್​ ಹಾಗೂ ಕಮೆಂಟ್​ಗಳ ಸುರಿ ಮಳೆಯೇ ಹರಿದು ಬಂದಿದೆ. ನಯನ ಕುಟುಂಬಸ್ಥರು ಕುಟುಂಬದ ಹೊಸ ಸದಸ್ಯನನ್ನ ವೆಲ್‌ಕಮ್ ಮಾಡಿದ್ದಾರೆ.

5 ತಿಂಗಳ ಗರ್ಭಿಣಿಯಾಗಿದ್ದಾಗ, ನಯನ ಫೋಟೋಶೂಟ್​ ಮಾಡಿಸಿದ್ರು. ಜೊತೆಗೆ ಆ ಫೋಟೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದರು. ಮಾತ್ರವಲ್ಲ ಸ್ವೀಟ್​ ಲೈನ್ಸ್​ ಕೂಡಾ ಬರೆದಿದ್ದರು. ನಾನು ಮುಂಬರುವ ದಿನಗಳಿಗಾಗಿ ಕಾಯುತ್ತದ್ದೇನೆ.. pure joy of 5th month ಅಂತಾ ಬರೆದುಕೊಂಡಿದ್ದರು. ಬಹು ನಿರೀಕ್ಷೆಯಿಂದ ಕಾಯ್ತಾಯಿದ್ದ ಆ ದಿನ ಈಗ ಬಂದಿದೆ. ತನ್ನ ಗಂಡ ಚರಣ್‌ ಜೊತೆ ಅಮೆರಿಕಾದಲ್ಲಿ ನೆಲೆಸಿರೋ ನಯನಾ, ಅಲ್ಲಿಯೇ ಸೀಮಂತ ಕೂಡ ಮಾಡಿಕೊಂಡಿದ್ದರು. ಜೀವನದ ಪ್ರಮುಖ ಘಟ್ಟವನ್ನು ತಲುಪಿರೋ ನಯನಾ ಅವರು ಮುಂದೆನೂ ಹೀಗೆ ಖುಷಿಯಾಗಿರಲಿ ಎಂದು ಆಶಿಸೋಣ.

The post ಗಂಡು ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಖ್ಯಾತಿಯ ನಟಿ ನಯನಾ appeared first on News First Kannada.

Source: newsfirstlive.com

Source link