ಫ್ಯಾನ್ಸ್​​ಗೆ ಭರಪೂರ ರಂಜನೆ.. ಗೋಲ್ಡನ್ ಸ್ಟಾರ್ ಬರ್ತ್​​ಡೇಗೆ ಬರ್ತಿರೋ ಗಿಫ್ಟ್​​​ಗಳಾವುವು ಗೊತ್ತಾ?

ಫ್ಯಾನ್ಸ್​​ಗೆ ಭರಪೂರ ರಂಜನೆ.. ಗೋಲ್ಡನ್ ಸ್ಟಾರ್ ಬರ್ತ್​​ಡೇಗೆ ಬರ್ತಿರೋ ಗಿಫ್ಟ್​​​ಗಳಾವುವು ಗೊತ್ತಾ?

ಈ ಬಾರಿ ನಾನು ಬರ್ತ್​ಡೇ ಆಚರಿಸಿಕೊಳ್ಳೋದಿಲ್ಲ ಅನ್ನೋದನ್ನ ಸೋಗಸಾದ ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್​. ಆದರೆ ಗೋಲ್ಡನ್ ಸ್ಟಾರ್​ ಬರ್ತ್​​​​​​​​​ಡೇಗೆ ಗಿಫ್ಟ್​​​​​​ಗಳಿಗೇನು ಕೊರತೆ ಇರೋದಿಲ್ಲ ಅನ್ನೋದನ್ನ ಹೇಳಿರಲಿಲ್ಲ. ನಟ ಗಣೇಶ್ ಅವರ 42ನೇ ಜನ್ಮದಿನದ ಸಂಭ್ರಮದಲ್ಲಿ ಅವರ ಅಭಿಮಾನಿಗಳಿಗೆ ಮೂರು ಸಿನಿಮಾಗಳು ಅರ್ಪಣೆಯಾಗಲಿದೆ.

ಹೌದು.. ಗಣೇಶ್ ಅವರ ಬರ್ತ್​ಡೇ ಪ್ರಯುಕ್ತ ಹೊಸ ಹೊಸ ಸಿನಿಮಾಗಳ ಟೀಸರ್ ಪೋಸ್ಟರ್ ಗಿಫ್ಟ್​​​​ಗಳು ಅಭಿಮಾನಿ ಅಂಗಳಕ್ಕೆ ತಲುಪಲಿದೆ. ಬರ್ತ್​ಡೇ ದಿನ ಗೋಲ್ಡನ್ ಫ್ಯಾನ್ಸ್​​​​ಗೆ ಗಣೇಶ್ ಸಿಗದಿದ್ದರೂ ಟೀಸರ್​​ ಮತ್ತು ಪೋಸ್ಟರ್ಸ್ ಮೂಲಕ ದರ್ಶನ ಕೊಡಲಿದ್ದಾರೆ.

ಮೊದಲನೇದಾಗಿ ಮೂರ್ ಮೂರ್ ಮೂರು ಹೀರೋಯಿನ್ ಜೊತೆಗೆ ಗಣೇಶ್​​​​​​ ಡ್ಯೂಯೆಟ್ ಹಾಡಿರೋ ತ್ರಿಬಲ್ ರೈಡಿಂಗ್ ಸಿನಿಮಾ ಟೀಸರ್ ಬರ್ತ್​​ಡೇ ಪ್ರಯುಕ್ತ ಲಾಂಚ್ ಆಗಲಿದೆ. ಮಹೇಶ್ ಗೌಡ ನಿರ್ದೇಶನದಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾ ಮೂಡಿ ಬಂದಿದೆ.

ಎರಡನೇದಾಗಿ ಗಣೇಶ್ ವಿಶೇಷ ಚೇತನರಾಗಿ ನಟಿಸಿರುವ ಸಿನಿಮಾ ಸಖತ್ ಚಿತ್ರತಂಡದಿಂದಲೂ ವಿಶೇಷ ಬರ್ತ್​ಡೇ ಟೀಸರ್ ಒಂದನ್ನ ಹೊರ ಬಿಡುವ ಪ್ಲಾನ್ ಇದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಸಖತ್ ಸಿನಿಮಾ ಮೂಡಿಬರುತ್ತಿದೆ.

ಇನ್ನೂ ಮೂರನೇದಾಗಿ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಮೋಷನ್ ಪೋಸ್ಟರ್ ಕೂಡ ಗೋಲ್ಡನ್ ತಾರೆಯ ಜನ್ಮ ಸುದಿನದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ಜುಲೈ 2ನೇ ತಾರೀಖ್ ಗಣೇಶ್ ಅವರ ಗೋಲ್ಡನ್ ಫ್ಯಾನ್ಸ್​​ಗೆ ಭರಪೂರ ರಂಜನೆಯ ಹಬ್ಬ.

The post ಫ್ಯಾನ್ಸ್​​ಗೆ ಭರಪೂರ ರಂಜನೆ.. ಗೋಲ್ಡನ್ ಸ್ಟಾರ್ ಬರ್ತ್​​ಡೇಗೆ ಬರ್ತಿರೋ ಗಿಫ್ಟ್​​​ಗಳಾವುವು ಗೊತ್ತಾ? appeared first on News First Kannada.

Source: newsfirstlive.com

Source link