ಮೈಸೂರಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ‘ರಾಜಕೀಯದ ಹುಲಿ’ ಎಂದು ಘೋಷಣೆ

ಮೈಸೂರಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ‘ರಾಜಕೀಯದ ಹುಲಿ’ ಎಂದು ಘೋಷಣೆ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳಿದ್ದು ಕೊಲಂಬಿಯ ಸರ್ಕಲ್‌ ಬಳಿ ಸಿದ್ದರಾಮಯ್ಯಗೆ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. ಎರಡು ತಿಂಗಳ ಬಳಿಕ ತವರಿಗೆ ತೆರಳಿರುವ ಸಿದ್ದರಾಮಯ್ಯ ಇಂದು ಮತ್ತು ನಾಳೆ ಪ್ರವಾಸ ಹಮ್ಮಿಕೊಂಡಿದ್ದಾರೆ.

ಇನ್ನು ಸಿದ್ದರಾಮಯ್ಯ ಮೈಸೂರಿಗೆ ಬಂದಿಳಿಯುತ್ತಲೇ ಈ ಹಿಂದೆ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದ ಅಭಿಮಾನಿಗಳು ಈ ಬಾರಿ ಕರ್ನಾಟಕದ ರಾಜಕೀಯ ಹುಲಿ, ಚಾಮುಂಡೇಶ್ವರಿ ವರಪುತ್ರ ಎಂದು ಘೋಷಣೆ ಕೂಗಿದ್ದಾರೆ.

ಕೆಲವು ದಿನಗಳ ಹಿಂದೆ ಮುಂದಿನ ಸಿಎ ಎಂದು ಘೋಷಣೆ ಕೂಗದಂತೆ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಅಭಿಮಾನಿಗಳು ಆ ಘೋಷಣೆ ಕೂಗಲು ಹಿಂದೇಟು ಹಾಕಿದ್ದಾರೆ. ರಾಜಕೀಯ ಹುಲಿ, ರಾಜ್ಯದ ಹುಲಿ ಮೈಸೂರು ಹುಲಿ ಘೋಷಣೆಗೆ ಅಭಿಮಾನಿಗಳ ಘೋಷಣೆ ಸೀಮಿತವಾಗಿದೆ.

The post ಮೈಸೂರಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ‘ರಾಜಕೀಯದ ಹುಲಿ’ ಎಂದು ಘೋಷಣೆ appeared first on News First Kannada.

Source: newsfirstlive.com

Source link