ಕೆಜಿಎಫ್ ಹಿಂದಿ ಡಿಸ್ಟ್ರೂಬ್ಯೂಟರ್ ಈಗ ‘ಬಾಕ್ಸರ್’

ಕೆಜಿಎಫ್ ಹಿಂದಿ ಡಿಸ್ಟ್ರೂಬ್ಯೂಟರ್ ಈಗ ‘ಬಾಕ್ಸರ್’

ಬಾಲಿವುಡ್​​ ಸಿನಿ ಜಗತ್ತಿನ ಬಹುಮುಖ ಪ್ರತಿಭೆ ಫರಾನ್ ಅಖ್ತರ್ ಈಗ ಬಾಕ್ಸಾರ್ ಆಗಿದ್ದಾರೆ. ಆದ್ರೆ ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ. ಈ ಹಿಂದೆ ಕ್ರೀಡೆಗೆ ಸಂಬಂಧ ಪಟ್ಟಿದ್ದ ‘‘ಬಾಗ್ ಮಿಲ್ಖಾ ಬಾಗ್’’ ಸಿನಿಮಾ ಮಾಡಿ ಚಿತ್ರಪ್ರೇಮಿಗಳ ಮನ ಗೆದ್ದಿದ್ದ ಫರಾನ್ ಅಖ್ತರ್ ಈ ಬಾರಿ ಬಾಕ್ಸಾರ್ ಆಗಿದ್ದಾರೆ. ಬಾಕ್ಸಾರ್ ಗ್ಲೌಸ್ ಹಾಕಿಕೊಂಡು ಬಿಟೌನ್​​ನಲ್ಲಿ ‘‘ತೂಫಾನ್’’ ಎಬ್ಬಿಸಿದ್ದಾರೆ.

‘‘ತೂಫಾನ್’’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ. 47 ವರ್ಷದ ಫರಾನ್ ಅಖ್ತರ್ ತಮ್ಮ ಪಾತ್ರಕ್ಕಾಗಿ ಬೇಜಾನ್ ಕಸರತ್ತು ಮಾಡಿದ್ದಾರೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ಕಲ್ಪನೆಯಲ್ಲಿ ತೂಫಾನ್ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ.

ಫರಾನ್ ಅಖ್ತರ್ ನಟನೆಯ ತೂಫಾನ್ ಸಿನಿಮಾ ಥಿಯೇಟರ್​​​ಗೆ ಬರದೆ ಓಟಿಟಿ ಫ್ಲಾಟ್ ಫಾರ್ಮ್ ಅಮೇಜಾನ್ ಪ್ರೈಂನಲ್ಲಿ ಜುಲೈ 16ನೇ ತಾರೀಖ್​​ನಿಂದ ನೋಡಲು ಸಿಗಲಿದೆ. ತೂಫಾನ್ ಟ್ರೈಲರ್​​​ಗೆ ನೋಡುಗರ ಮೆಚ್ಚುಗೆ ಸಿಗುತ್ತಿದೆ.

The post ಕೆಜಿಎಫ್ ಹಿಂದಿ ಡಿಸ್ಟ್ರೂಬ್ಯೂಟರ್ ಈಗ ‘ಬಾಕ್ಸರ್’ appeared first on News First Kannada.

Source: newsfirstlive.com

Source link