ಖೇಲ್​ ರತ್ನ ಪ್ರಶಸ್ತಿಗೆ ಆರ್​.ಅಶ್ವಿನ್, ಮಿಥಾಲಿ ಹೆಸರು ಶಿಫಾರಸು

ಖೇಲ್​ ರತ್ನ ಪ್ರಶಸ್ತಿಗೆ ಆರ್​.ಅಶ್ವಿನ್, ಮಿಥಾಲಿ ಹೆಸರು ಶಿಫಾರಸು

ಟೀಮ್​​ ಇಂಡಿಯಾ ಆಫ್ ಸ್ಪಿನ್ನರ್ ಆರ್.​ಅಶ್ವಿನ್​ ಮತ್ತು ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ​ ಮಿಥಾಲಿ ರಾಜ್​ ಹೆಸರನ್ನ ಬಿಸಿಸಿಐ, ರಾಜೀವ್​​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಹಾಗೆಯೇ ಅರ್ಜುನ ಪ್ರಶಸ್ತಿಗೆ ಶಿಖರ್ ​ಧವನ್, ಕೆ.ಎಲ್​.ರಾಹುಲ್​ ಮತ್ತು ಜಸ್ಪ್ರಿತ್​​ ಬುಮ್ರಾ ಹೆಸರುಗಳನ್ನೂ ಶಿಫಾರಸು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 34 ವರ್ಷದ ಅಶ್ವಿನ್​, 2010ರಲ್ಲಿ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ರು. ಇದುವರೆಗೂ 79 ಟೆಸ್ಟ್, 111 ಏಕದಿನ ಮತ್ತು 46 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಮಿಥಾಲಿ ರಾಜ್​, ಕ್ರಿಕೆಟ್​ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 38 ವರ್ಷದ ಮಿಥಾಲಿ 1999ರ ಜೂನ್ 26ರಂದು ಪದಾರ್ಪಣೆ ಮಾಡಿದ್ರು. ಆಗಸ್ಟ್ 29ರಂದು ಮಾಜಿ ಹಾಕಿ ಆಟಗಾರ ಧ್ಯಾನ್​ಚಂದ್​​ರ ಜನ್ಮದಿನದ ಪ್ರಯುಕ್ತ, ಈ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗುತ್ತದೆ. ಕ್ರಿಕೆಟ್​ ಹೊರತಾಗಿ ಹಾಕಿ, ಅಥ್ಲೀಟ್​ಗಳ ಹೆಸರುಗಳನ್ನ ಸಹ, ಆಯಾ ಸಂಸ್ಥೆಗಳು ನಾಮ ನಿರ್ದೇಶನ ಮಾಡಿವೆ.

The post ಖೇಲ್​ ರತ್ನ ಪ್ರಶಸ್ತಿಗೆ ಆರ್​.ಅಶ್ವಿನ್, ಮಿಥಾಲಿ ಹೆಸರು ಶಿಫಾರಸು appeared first on News First Kannada.

Source: newsfirstlive.com

Source link