ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿಕೊಟ್ಟ ಪಾಪಿ ತಂದೆ.. ಓರ್ವ ಮಗು ಸಾವು.. ಇಬ್ಬರು ಗಂಭೀರ

ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿಕೊಟ್ಟ ಪಾಪಿ ತಂದೆ.. ಓರ್ವ ಮಗು ಸಾವು.. ಇಬ್ಬರು ಗಂಭೀರ

ಮುಂಬೈ: ತಂದೆಯೇ ತನ್ನ ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ಇಲಿ ಪಾಷಾಣ ಮಿಕ್ಸ್ ಮಾಡಿ ಕೊಟ್ಟ ಅಮಾನವೀಯ ಕೃತ್ಯ ಮುಂಬೈನಲ್ಲಿ ನಡೆದಿದೆ. ದುರಂತದಲ್ಲಿ 5 ವರ್ಷದ ಪುತ್ರ ಅಲಿಷನ್ ಅಲಿ ಮೊಹಮ್ಮದ್ ಸಾವನ್ನಪ್ಪಿದ್ದು ಇನ್ನಿಬ್ಬರು ಮಕ್ಕಳಾದ 7 ವರ್ಷದ ಅಲಿನ ಮತ್ತು 2 ವರ್ಷದ ಅರ್ಮಾನ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಶುಕ್ರವಾರ ಮನೆಯಲ್ಲಿ ಯಾವುದೋ ವಿಚಾರಕ್ಕೆ ಕಿತ್ತಾಟ ನಡೆದ ಹಿನ್ನೆಲೆ ತಂದೆ ಇಂಥ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಆತನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ. ಮುಂಬೈನ ಮಂಖುರ್ದ್ ಸುಬುರ್ಬ್​​ನಲ್ಲಿ ಘಟನೆ ನಡೆದಿದೆ.

ಆರೋಪಿ ತಂದೆ ಮೊಹಮ್ಮದ್ ಅಲಿ ನೌಶಾದ್​​ನನ್ನ ಅರೆಸ್ಟ್ ಮಾಡಲಾಗಿದ್ದು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

The post ಮಕ್ಕಳಿಗೆ ಐಸ್​ಕ್ರೀಮ್​ನಲ್ಲಿ ವಿಷ ಬೆರೆಸಿಕೊಟ್ಟ ಪಾಪಿ ತಂದೆ.. ಓರ್ವ ಮಗು ಸಾವು.. ಇಬ್ಬರು ಗಂಭೀರ appeared first on News First Kannada.

Source: newsfirstlive.com

Source link