ಕನ್ನಡಿಗ ಕೆಎಲ್ ರಾಹುಲ್​ಗೆ ಅರ್ಜುನ್ ಅವಾರ್ಡ್​ ನೀಡಲು BCCI ಶಿಫಾರಸು

ಕನ್ನಡಿಗ ಕೆಎಲ್ ರಾಹುಲ್​ಗೆ ಅರ್ಜುನ್ ಅವಾರ್ಡ್​ ನೀಡಲು BCCI ಶಿಫಾರಸು

ನವದೆಹಲಿ: ಆಫ್ ಸ್ಪಿನ್ನರ್ ಆರ್​.ಅಶ್ಚಿನ್ ಮತ್ತು ಮಹಿಳಾ ಕ್ರಿಕೆಟ್​​ ತಂಡದ ದಂತಕತೆ ಮಿತಾಲಿ ರಾಜ್​​ಗೆ ಪ್ರತಿಷ್ಠಿತ ಖೇಲ್​ ರತ್ನ ಪ್ರಶಸ್ತಿ ನೀಡುವಂತೆ ಬೋರ್ಡ್​ ಆಫ್​ ಕಂಟ್ರೋಲ್​ ಫಾರ್​ ಕ್ರಿಕೆಟ್​ ಇನ್ ಇಂಡಿಯಾ (ಬಿಸಿಸಿಐ) ಭಾರತ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜೊತೆಗೆ ಶಿಖರ್ ಧವನ್, ಕೆಎಲ್ ರಾಹುಲ್ ಮತ್ತು ಬೂಮ್ರಾಗೆ ಅರ್ಜುನ್ ಪ್ರಶಸ್ತಿಗೆ ನಾಮಿನೇಟ್ ಮಾಡಿದೆ.

blank

ಸುದೀರ್ಘ ಚರ್ಚೆ ಬಳಿಕ ಆರ್​.ಅಶ್ವಿನ್ ಹಾಗೂ ಮಿಥಾಲಿ ರಾಜ್ ಹೆಸರನ್ನ ಖೇಲ್​ ರತ್ನಕ್ಕೆ ಆಯ್ಕೆ ಮಾಡಿದ್ದೇವೆ. ಅದೇ ರೀತಿ ಧವನ್, ರಾಹುಲ್ ಹಾಗೂ ಬುಮ್ರಾ ಹೆಸರನ್ನೂ ಸಹ ಆಯ್ಕೆ ಮಾಡಲಾಗಿದೆ ಅಂತಾ ಬಿಸಿಸಿಐ ಹೇಳಿದೆ.

blank

ಇತ್ತೀಚೆಗಷ್ಟೇ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯವು ‘ನ್ಯಾಷನಲ್ ಸ್ಪೋರ್ಟ್ಸ್​ ಅವಾರ್ಡ್​ -2021’ ಗೆ ಕ್ರೀಡಾಪಟುಗಳ ಹೆಸರನ್ನ ಸೂಚಿಸಲು ತಿಳಿಸಿತ್ತು. ಅದರಂತೆ ಹೆಸರನ್ನ ಸೂಚಿಸಲು ಜೂನ್ 21 ಕೊನೆಯ ದಿನವಾಗಿತ್ತು. ಆದರೆ ಇದೀಗ ಮತ್ತೆ ಕೇಂದ್ರ ಸರ್ಕಾರ ಕ್ರೀಡಾಪಟುಗಳನ್ನ ಹೆಸರನ್ನ ಸೂಚಿಸಲು ದಿನವನ್ನು ವಿಸ್ತರಿಸಿದೆ.

The post ಕನ್ನಡಿಗ ಕೆಎಲ್ ರಾಹುಲ್​ಗೆ ಅರ್ಜುನ್ ಅವಾರ್ಡ್​ ನೀಡಲು BCCI ಶಿಫಾರಸು appeared first on News First Kannada.

Source: newsfirstlive.com

Source link