ಆಲ್ಫಾನೇ ಆಗ್ಲಿ, ಡೆಲ್ಟಾನೇ ಆಗ್ಲಿ.. ಕೊವ್ಯಾಕ್ಸಿನ್ ಎರಡಕ್ಕೂ ರಾಮಬಾಣ ಅಂತಿದೆ ಅಮೆರಿಕಾ

ಆಲ್ಫಾನೇ ಆಗ್ಲಿ, ಡೆಲ್ಟಾನೇ ಆಗ್ಲಿ.. ಕೊವ್ಯಾಕ್ಸಿನ್ ಎರಡಕ್ಕೂ ರಾಮಬಾಣ ಅಂತಿದೆ ಅಮೆರಿಕಾ

ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಭಾರತದ ಕೊವ್ಯಾಕ್ಸಿನ್ ಆಲ್ಫಾ ಮತ್ತು ಡೆಲ್ಟಾ ಎರಡೂ ಕೊರೊನಾ ವೈರಸ್ ವೇರಿಯಂಟ್​ಗಳನ್ನ ತಟಸ್ಥಗೊಳಿಸಿದೆ ಎಂದು ಯುಎಸ್​ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಹೆಲ್ತ್ ಹೇಳಿದೆ.

ಕೋವ್ಯಾಕ್ಸಿನ್ ಪಡೆದಿದ್ದ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಲಸಿಕೆ ಪಡೆದ ವ್ಯಕ್ತಿಗಳ ಬ್ಲಡ್ ಸೀರಮ್ ಪಡೆದು ಸಂಶೋಧನೆ ನಡೆಸಿದ ವೇಳೆ ಕೊವ್ಯಾಕ್ಸಿನ್ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕೊವ್ಯಾಕ್ಸಿನ್​ ಲಸಿಕೆಯನ್ನ ಪಡೆದ ಮೇಲೆ ಉತ್ಪತ್ತಿಯಾಗುವ ಌಂಟಿಬಾಡೀಸ್​ಗಳು ಆಲ್ಫಾ ಮತ್ತು ಡೆಲ್ಟಾ ಎರಡೂ ಬಗೆಯ ಕೊರೊನಾ ವೈರಸ್ ವೇರಿಯಂಟ್​ಗಳು ನಿಯಂತ್ರಿಸುತ್ತದೆ ಎಂದು ಗೊತ್ತಾಗಿದೆ. B.1.1.7 (ಆಲ್ಫಾ) ಹಾಗೂ B.1.617 (ಡೆಲ್ಟಾ) ಸಾರ್ಸ್ ಕೋವ್-2ನ ಎರಡು ರೂಪಾಂತರಿ ವೈರಸ್​ಗಳಾಗಿವೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ ಎಂದು ಯುಎಸ್​ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಹೆಲ್ತ್ ಹೇಳಿದೆ.

The post ಆಲ್ಫಾನೇ ಆಗ್ಲಿ, ಡೆಲ್ಟಾನೇ ಆಗ್ಲಿ.. ಕೊವ್ಯಾಕ್ಸಿನ್ ಎರಡಕ್ಕೂ ರಾಮಬಾಣ ಅಂತಿದೆ ಅಮೆರಿಕಾ appeared first on News First Kannada.

Source: newsfirstlive.com

Source link