ಹಳ್ಳಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸೇವೆ: ಹೆಚ್ಚುವರಿ ₹19,401 ಕೋಟಿ ಹಣ ಬಿಡುಗಡೆಗೆ ಕ್ಯಾಬಿನೆಟ್ ಒಪ್ಪಿಗೆ

ಹಳ್ಳಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸೇವೆ: ಹೆಚ್ಚುವರಿ ₹19,401 ಕೋಟಿ ಹಣ ಬಿಡುಗಡೆಗೆ ಕ್ಯಾಬಿನೆಟ್ ಒಪ್ಪಿಗೆ

ನವದೆಹಲಿ: 16 ರಾಜ್ಯಗಳ ಹಳ್ಳಿಗಳಿಗೆ ಬ್ರಾಡ್​ಬ್ಯಾಂಡ್ ಸೇವೆ ಒದಗಿಸುವ ಭಾರತ್ ನೆಟ್ ಯೋಜನೆಗೆ ಇಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್​ನಲ್ಲಿ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಒಪ್ಪಿಗೆ ಸಿಕ್ಕಿದ್ದು ಹೆಚ್ಚುವರಿ 19,401 ಕೋಟಿ ರೂಗಳನ್ನ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ನಡೆಯುತ್ತಿದೆ.

ಈ ಕುರಿತು ಹೇಳಿಕೆ ನೀಡಿರುವ ಸಚಿವ ರವಿಶಂಕರ್ ಪ್ರಸಾದ್.. ಯೋಜನೆಯನ್ನ ಸಂಪೂರ್ಣ ವಿಸ್ತಾರ 29,430 ಕೋಟಿಗಳ ವೆಚ್ಚದ್ದಾಗಿದ್ದು 16 ರಾಜ್ಯಗಳ 3,60,000 ಹಳ್ಳಿಗಳಿಗೆ ಬ್ರಾಡ್ ಬಾಂಡ್ ಸೇವೆ ಸಿಗಲಿದೆ. ಇದರ ಗ್ಯಾಪ್ ಫಂಡಿಂಗ್​ಗೆ ಸರ್ಕಾರ 19,041 ಕೋಟಿ ಖರ್ಚು ಮಾಡುತ್ತಿದೆ ಎಂದಿದ್ದಾರೆ.

ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವವನ್ನೂ ಹೊಂದಲು ನಿರ್ಧರಿಸಲಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್ ತಿಂಗಳ 15 ನೇ ತಾರೀಖಿನಂದು ಈ ಯೋಜನೆ ಘೋಷಿಸಿದ್ದು.. 1,000 ದಿನಗಳಲ್ಲಿ 6 ಲಕ್ಷ ಗ್ರಾಮಗಳಿಗೆ ಬ್ರಾಡ್​ಬ್ಯಾಂಡ್ ಸೇವೆ ನೀಡಲಾಗುವುದು ಎಂದಿದ್ದರು. ಈವರೆಗೆ 2.5ಲಕ್ಷ ಗ್ರಾಮ ಪಂಚಾಯಿತಿಗಳ 1.56 ಲಕ್ಷ ಗ್ರಾಮಗಳಿಗೆ ಬ್ರಾಡ್​ಬ್ಯಾಂಡ್ ಸೇವೆ ಒದಗಿಸಲಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

The post ಹಳ್ಳಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸೇವೆ: ಹೆಚ್ಚುವರಿ ₹19,401 ಕೋಟಿ ಹಣ ಬಿಡುಗಡೆಗೆ ಕ್ಯಾಬಿನೆಟ್ ಒಪ್ಪಿಗೆ appeared first on News First Kannada.

Source: newsfirstlive.com

Source link