‘ಯಡಿಯೂರು ಶ್ರೀಸಿದ್ಧಲಿಂಗೇಶ್ವರ’ ಧಾರವಾಹಿ ತಂಡದಿಂದ ಸರ್ಪ್ರೈಸ್​​ ನ್ಯೂಸ್​

‘ಯಡಿಯೂರು ಶ್ರೀಸಿದ್ಧಲಿಂಗೇಶ್ವರ’ ಧಾರವಾಹಿ ತಂಡದಿಂದ ಸರ್ಪ್ರೈಸ್​​ ನ್ಯೂಸ್​

ಯಡಿಯೂರು ಶ್ರೀಸಿದ್ಧಲಿಂಗೇಶ್ವರ.. ನಮ್ಮ ನಾಡಿನ ಶರಣರ ಜೀವನಾಧಾರಿತ ಧಾರವಾಹಿ. 100ಕ್ಕೂ ಹೆಚ್ಚು ಎಪಿಸೋಡ್​ಗಳನ್ನ ಕಂಪ್ಲೀಟ್ ಮಾಡಿ ಜನರ ಮನಸ್ಸು ಗೆದ್ದಿತ್ತು. ಆದ್ರೆ, ಕೊರೊನಾ ಕಾರಣದಿಂದ ಸೀರಿಯಲ್ ಪ್ರಸಾರವೇ ಸ್ಥಗಿತವಾಗಿತ್ತು.

‘ಯಡಿಯೂರು ಶ್ರೀಸಿದ್ಧಲಿಂಗೇಶ್ವರ’ ಧಾರವಾಹಿ ತಂಡದಿಂದ ಸರ್ಪ್ರೈಸಿಂಗ್ ನ್ಯೂಸ್​

ಜನ ಮೆಚ್ಚುಗೆ ಪಡೆದ ಈ ಧಾರವಾಹಿಯಲ್ಲಿ ಬಿಗ್​ಬಾಸ್​ ಖ್ಯಾತಿಯ ಹರೀಶ್​ ರಾಜ್​ ಹಾಗೂ ಕಾಮಿಡಿ ಕಿಲಾಡಿಗಳು ನಯನಾ ಪ್ರಮುಖ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಶಿವನ ಪಾತ್ರದಲ್ಲಿ ವಿನಯ್‌ ಗೌಡ ಅಭಿನಯಿಸಿದ್ದರು. ಇವರು ಸೀರಿಯಲ್ ತ್ಯಜಿಸಿದ್ಮೇಲೆ ಈ ಪಾತ್ರಕ್ಕೆ ಆರ್ಯನ್ ಸೂರ್ಯ ಬಣ್ಣ ಹಚ್ಚಿದ್ದಾರೆ. ಪಾರ್ವತಿ ಪಾತ್ರದಲ್ಲಿ ಜ್ಯೋತಿ ರೈ ಅಭಿನಯಿಸಿದ್ದಾರೆ.

ಶರಣರ ಧಾರವಾಹಿಗೆ ಅಡಿಕ್ಟ್ ಆಗಿದ್ದವರು ಕೊಂಚ ಬೇಸರಗೊಂಡಿದ್ದರು. ಕೊರೊನಾದಿಂದ ಶೂಟಿಂಗ್‌ ನಡೆಸಲು ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಪ್ರಸಾರ ಸ್ಥಗಿತಗೊಂಡಿತ್ತು. ಎಪಿಸೋಡ್‌ಗಳು ಬ್ಯಾಂಕಿಂಗ್‌ ಇಲ್ಲದಿರೋ ಕಾರಣ ಪ್ರಸಾರ ನಿಂತಿತ್ತು. ಈಗ ಸಿಹಿ ಸುದ್ದಿಯೊಂದು ಹೊರಬಂದಿದೆ. ಅದೇನಂದ್ರೆ, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿ ಜುಲೈ 5ರಿಂದ ಹೊಸ ಸಂಚಿಕೆಗಳೊಂದಿಗೆ ಪ್ರಸಾರವಾಗಲಿದೆ.

ಈ ಧಾರವಾಹಿಯನ್ನ ನಿರ್ದೇಶನ ಮಾಡಿರೋದು ನಟ ಕಮ್ ನಿರ್ದೇಶಕ ನವೀನ್‌ ಕೃಷ್ಣ. ಇವರ ಪುತ್ರನೇ ಸಿದ್ಧಲಿಂಗೇಶ್ವರ ಪಾತ್ರ ಮಾಡ್ತಿರೋದು. ಮಲ್ಲಿಕಾರ್ಜುನ ಪಾತ್ರದಲ್ಲಿ ಹರೀಶ್‌ ರಾಜ್‌ ಕಾಣಿಸಿಕೊಂಡಿದ್ದಾರೆ. ನಮ್ಮ ನೆಲದ ಕಥೆಗಳು ಧಾರವಾಹಿಗಳಾಗಿ ಮೂಡಿಬಂದಿರೋದು ವಿರಳ. ಅದರಲ್ಲಿ ಈ ಸೀರಿಯಲ್‌ ಕೂಡ ಒಂದು. ಇದೇ ಕಾರಣಕ್ಕೆ ಜನ ಮೆಚ್ಚುಗೆ ಪಡೆದಿದ್ದ ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಧಾರವಾಹಿ ಜುಲೈ 5 ರಿಂದ ಮತ್ತೆ ಪ್ರಸಾರ ಆರಂಭಿಸಲಿದೆ.

The post ‘ಯಡಿಯೂರು ಶ್ರೀಸಿದ್ಧಲಿಂಗೇಶ್ವರ’ ಧಾರವಾಹಿ ತಂಡದಿಂದ ಸರ್ಪ್ರೈಸ್​​ ನ್ಯೂಸ್​ appeared first on News First Kannada.

Source: newsfirstlive.com

Source link