ರಾಜ್ಯಪಾಲರನ್ನ ಭೇಟಿಯಾದ ಸಿಎಂ: ‘ಎಲ್ಲವನ್ನೂ ಗಮನಿಸುತ್ತಿದ್ದೇನೆ.. ಆಲಿಸುತ್ತಿದ್ದೇನೆ’ ಅಂದಿದ್ದೇಕೆ..?

ರಾಜ್ಯಪಾಲರನ್ನ ಭೇಟಿಯಾದ ಸಿಎಂ: ‘ಎಲ್ಲವನ್ನೂ ಗಮನಿಸುತ್ತಿದ್ದೇನೆ.. ಆಲಿಸುತ್ತಿದ್ದೇನೆ’ ಅಂದಿದ್ದೇಕೆ..?

ಬೆಂಗಳೂರು: ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಯಾದರು. ಭೇಟಿ ಬಳಿಕೆ ಮಾತನಾಡಿದ ಬಿಎಸ್​ವೈ.. ರಾಜ್ಯಪಾಲರಿಗೆ ಒಂದು ಕಣ್ಣಿನ ಆಪರೇಷನ್ ಆಗಿತ್ತು.. ಅವರ ಆರೋಗ್ಯ ವಿಚಾರಿಸಲು ರಾಜಭವನಕ್ಕೆ ಬಂದಿದ್ದೇನೆ. ಅವರ ಆರೋಗ್ಯ ವಿಚಾರಿಸಿದೆ.. ರಾಜ್ಯಪಾಲರು ಸಮಾಧಾನದಿಂದ ಮಾತಾಡಿದ್ರು. ರಾಜಕೀಯ ಮಾತುಕತೆ ಮಾತಾಡಿಲ್ಲ ಎಂದಿದ್ದಾರೆ.

blank

2 ವರ್ಷದ ನಂತರ ಮತ್ತೆ ಬಿಜೆಪಿ ಗೆಲ್ಲಬೇಕು. ಅವರು ಕೆಲವು ಸಲಹೆ ಕೊಟ್ಟಿದ್ದಾರೆ. ಅದೇ ನಮ್ಮ ತೀರ್ಮಾನ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ.. ನಾನು ಎಲ್ಲವನ್ನೂ ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದೇನೆ. ಎಲ್ಲರ ಮಾತುಗಳನ್ನೂ ನಾನು ಆಲಿಸುತ್ತಿದ್ದೇನೆ.. ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಲ್ಲ.. ಎರಡು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರಬೇಕು.. 130ಸ್ಥಾನ ಗೆಲ್ಲುವ ಸಂಕಲ್ಪ ಇದೆ. ಹೀಗಾಗಿ 10-12 ದಿನ ಪ್ರವಾಸ ಆರಂಭಿಸುತ್ತೇನೆ ಎಂದರು. ಇನ್ನು ನಾಯಕತ್ವ ಬದಲಾವಣೆಯ ವಿಚಾರಕ್ಕೆ ಪ್ರತಿಕ್ರಿಯೆ ನೀಡದೇ ಕೈಮುಗಿದು ಹೊರಟುಹೋದರು.

The post ರಾಜ್ಯಪಾಲರನ್ನ ಭೇಟಿಯಾದ ಸಿಎಂ: ‘ಎಲ್ಲವನ್ನೂ ಗಮನಿಸುತ್ತಿದ್ದೇನೆ.. ಆಲಿಸುತ್ತಿದ್ದೇನೆ’ ಅಂದಿದ್ದೇಕೆ..? appeared first on News First Kannada.

Source: newsfirstlive.com

Source link