ಅಂತರ್ ನಿಗಮ ವರ್ಗಾವಣೆಗೆ KSRTC ಗ್ರೀನ್​ಸಿಗ್ನಲ್

ಅಂತರ್ ನಿಗಮ ವರ್ಗಾವಣೆಗೆ KSRTC ಗ್ರೀನ್​ಸಿಗ್ನಲ್

ಬೆಂಗಳೂರು: ಅಂತರ್ ನಿಗಮ ವರ್ಗಾವಣೆಗೆ ಕೆಎಸ್ಆರ್​​ಟಿಸಿ ಗ್ರೀನ್​ಸಿಗ್ನಲ್ ಕೊಟ್ಟಿದೆ. ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್ ಇದ್ದ ಕಾರಣ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವರ್ಗಾವಣೆ ಬಯಸೋರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನ ನೀಡಿದೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳ ಸಿಬ್ಬಂದಿ ವರ್ಗಾವಣೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜುಲೈ -1 ರಿಂದ ಜುಲೈ -15ರವರೆಗೆ ಅನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ನೌಕರರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಅಂತಾ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

The post ಅಂತರ್ ನಿಗಮ ವರ್ಗಾವಣೆಗೆ KSRTC ಗ್ರೀನ್​ಸಿಗ್ನಲ್ appeared first on News First Kannada.

Source: newsfirstlive.com

Source link