ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗ್ತಾರೆ- ಸಚಿವ ನಾರಾಯಣಗೌಡ ವಿಶ್ವಾಸ

ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗ್ತಾರೆ- ಸಚಿವ ನಾರಾಯಣಗೌಡ ವಿಶ್ವಾಸ

ಚಾಮರಾಜನಗರ: ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾನು ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಲ್ಲ. ರಮೇಶ್ ಜಾರಕಿಹೊಳಿ ಖಂಡಿತ ಮಂತ್ರಿಯಾಗುತ್ತಾರೆ. ಅವರ ಬಗ್ಗೆ ನಮಗೆ ಗೌರವವಿದೆ. ಅವರ ಮೇಲಿನ ಆರೋಪಗಳು ಕಟ್ಟುಕಥೆ, ಆರೋಪರಿಂದ ಮುಕ್ತರಾಗುತ್ತಾರೆ. ನಾವೂ ಅವರ ಜೊತೆ ಇರುತ್ತೇವೆ. ಶಾಸಕ ಮುನಿರತ್ನ ಕೂಡ ಸಚಿವರಾಗುತ್ತಾರೆ ಎಂದರು.

ನಾವೆಲ್ಲಾ ಒಟ್ಟಿಗೆ ಇರೋರು, ಒಟ್ಟಿಗೆ ಇದ್ದೇವೆ. ಕೆಲವರಿಗೆ ಭಿನ್ನಾಭಿಪ್ರಾಯ ಇದೆಯಷ್ಟೇ. ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತೆ. ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಹೆಚ್​​ಡಿಡಿ ಬಗ್ಗೆ ಸಾಪ್ಟ್​ ಕಾರ್ನರ್​..
ಮನ್ ಮುಲ್ ಹಾಲಿನ ಟ್ಯಾಂಕರ್​ಗೆ ನೀರು ಮಿಶ್ರಣ ಹಗರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಿದ್ದೀವಿ. ದೊಡ್ಡವರಾಗಲಿ, ಚಿಕ್ಕವರಾಗಲಿ ಶಿಕ್ಷೆಯಾಗುತ್ತೆ. ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ಬಹುತೇಕ ಕುಟುಂಬ ನಂಬಿವೆ. ಅವರಿಗೆ ಅನ್ಯಾಯವಾಗಲೂ ನಾನು ಬಿಡಲ್ಲ. ಮನ್ ಮುಲ್ ತನಿಖಾ ವಿಚಾರವಾಗಿ ದೇವೇಗೌಡರು ನನಗೆ ಫೋನ್​ ಮಾಡಿಲ್ಲ. ಯಾರೇ ಕೂಡ ಆಗಲಿ,ರೈತರಿಗೆ ಅನ್ಯಾಯ ಮಾಡಬಾರದು. ಕುಮಾರಸ್ವಾಮಿ ಅವರು ಕೂಡ ರೈತರ ಮಗ, ಅವರು ಕೂಡ ತನಿಖೆಗೆ ಸಹಕರಿಸುತ್ತಾರೆ. ಮನ್​​ಮುಲ್ ಸೂಪರ್ ಸೀಡ್ ಮಾಡಲ್ಲ, ಮಾಡಿದ್ರೆ ಕೋರ್ಟ್ ಗೆ ಹೋಗಿ ಸ್ಟೇ ತರುತ್ತಾರೆ ಎಂದರು.

The post ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗ್ತಾರೆ- ಸಚಿವ ನಾರಾಯಣಗೌಡ ವಿಶ್ವಾಸ appeared first on News First Kannada.

Source: newsfirstlive.com

Source link