ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಶುಭ್​ಮನ್ ಗಿಲ್ ಔಟ್..?

ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಶುಭ್​ಮನ್ ಗಿಲ್ ಔಟ್..?

ಇಂಗ್ಲೆಂಡ್​ ಟೆಸ್ಟ್​​ ಸರಣಿಗೂ ಮುನ್ನವೇ ಟೀಮ್​ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಆರಂಭಿಕ ಬ್ಯಾಟ್ಸ್​ಮನ್​ ಶುಭ್​ಮನ್​ ಗಿಲ್,​​ ಗಾಯಗೊಂಡಿದ್ದು, ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ವರ್ಲ್ಡ್​ ಟೆಸ್ಟ್ ಚಾಂಪಿಯನ್​​ಶಿಪ್ ವೇಳೆ ಗಿಲ್​ಗೆ ಕಾಫ್​ ಇಂಜುರಿ ಕಾಣಿಸಿಕೊಂಡಿತ್ತು. ಆದರೀಗ ಗಾಯದ ಪ್ರಮಾಣ ಹೆಚ್ಚಾಗಿರೋದ್ರಿಂದ, ಗಿಲ್​ಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್ ನಿರ್ಧರಿಸಿದೆ. ಮೂಲಗಳ ಪ್ರಕಾರ ಕೇವಲ ಮೊದಲ ಟೆಸ್ಟ್ ಪಂದ್ಯ ಮಾತ್ರವಲ್ಲ, ಇಡೀ ಸರಣಿಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಆದ್ರೂ ಗಿಲ್​​​ ತಂಡದ ಸದಸ್ಯನಾಗಿ, ಇಂಗ್ಲೆಂಡ್​ನಲ್ಲೇ ಉಳಿಯಲಿದ್ದಾರೆ.

The post ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಶುಭ್​ಮನ್ ಗಿಲ್ ಔಟ್..? appeared first on News First Kannada.

Source: newsfirstlive.com

Source link