ಟ್ವಿಟರ್ ವಿರುದ್ಧ ಮಕ್ಕಳ ಪೋರ್ನೋಗ್ರಫಿಗೆ ಉತ್ತೇಜನ ಆರೋಪ!

ಟ್ವಿಟರ್ ವಿರುದ್ಧ ಮಕ್ಕಳ ಪೋರ್ನೋಗ್ರಫಿಗೆ ಉತ್ತೇಜನ ಆರೋಪ!

ನವದೆಹಲಿ: ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್​ ಟ್ವಿಟ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಟ್ವಿಟರ್ ವಿರುದ್ಧ ಚೈಲ್ಡ್ ಪೋರ್ನೋಗ್ರಫಿಗೆ ಉತ್ತೇಜನ ನೀಡುತ್ತಿರುವ ಆರೋಪ ಕೇಳಿಬಂದಿದೆ.

ದೆಹಲಿಯಲ್ಲಿ ವ್ಯಕ್ತಿಯೋರ್ವರು ದೂರು ನೀಡಿದ್ದು ದೆಹಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳೆಕೆ ನೀಡಿದ್ದು ಟ್ವಿಟರ್​ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಕ್ಕಳನ್ನ ಲೈಂಗಕತೆಗೆ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರು ನೀಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ವಿರುದ್ಧ ಮುಂದುವರೆದ ದಾಳಿ; ಈ ಬಾರಿ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿದ ಟ್ವಿಟರ್

ಇತ್ತ ರಾಷ್ಟ್ರೀಯ ಮಹಿಳಾ ಆಯೋಗ ಈ ವಿಚಾರವಾಗಿ ಸುವೋಮೋಟೋ ಪ್ರಕರಣ ದಾಖಲಿಸಿಕೊಂಡು ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವಂತೆ ಟ್ವಿಟರ್​ಗೆ ಹೇಳಿದೆ.

ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ವಕ್ತಾರ.. ಮಕ್ಕಳ ಲೈಂಗಿಕ ಶೋಷಣೆ ವಿಚಾರದಲ್ಲಿ ಟ್ವಿಟರ್ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಟ್ವಿಟರ್ ನಿಯಮವನ್ನು ಉಲ್ಲಂಘಿಸುತ್ತಿರುವವರನ್ನ ಪತ್ತೆಹಚ್ಚಲು ಹಾಗೂ ಅಂಥ ಕಂಟೆಂಟ್​ಗಳನ್ನು ತೆಗೆದುಹಾಕುತ್ತೇವೆ. ಈ ಸಮಸ್ಯೆಯನ್ನು ನಿಭಾಯಿಸಲು ಭಾರತದಲ್ಲಿ ಕಾನೂನಿನ ಜೊತೆಯಾಗುತ್ತೇವೆ ಮತ್ತು ನಮ್ಮ ಎನ್​ಜಿಓ ಪಾಲುದಾರರು ಈ ಸಮಸ್ಯೆ ನಿಭಾಯಿಸುವುದಕ್ಕಾಗಿ ಶ್ರಮ ವಹಿಸಲಿದ್ದಾರೆ ಎಂದಿದ್ದಾರೆ.

The post ಟ್ವಿಟರ್ ವಿರುದ್ಧ ಮಕ್ಕಳ ಪೋರ್ನೋಗ್ರಫಿಗೆ ಉತ್ತೇಜನ ಆರೋಪ! appeared first on News First Kannada.

Source: newsfirstlive.com

Source link