‘ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ’ ಎಂದ ರಾಮುಲು

‘ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ’ ಎಂದ ರಾಮುಲು

ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ಪ್ರಚಾರ ವಾಹನದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾವಚಿತ್ರ ತೆರವು ಮಾಡಿರುವ ವಿಚಾರಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ.. ಸಿದ್ದರಾಮಯ್ಯ ಅಹಿಂದ ಸಮುದಾಯ ಪರ ಕಾಳಜಿಯಿರುವ ದೊಡ್ಡ ನಾಯಕ. ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ ಎಂದರು.

ಬಿಜೆಪಿಯಲ್ಲಿ ಕಚ್ಚಾಟ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ರು. ಕಾಂಗ್ರೆಸ್ ಪಕ್ಷದಲ್ಲೇ ಕಚ್ಚಾಟ, ರಂಪಾಟ ನಡೆದಿದೆ. ಸಿಎಂ ಸ್ಥಾನದ ಪೈಪೋಟಿ ಕಾರಣ ಸಿದ್ದರಾಮಯ್ಯರ ಚಿತ್ರ ತೆರವು ಕೆಲಸ ಆಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಿಸಲಿ. ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಹಿಂದುಳಿತ, ದಲಿತ ಸಮುದಾಯಕ್ಕೆ ಅವಕಾಶ ನೀಡಿದೆ. ದಲಿತ ಸಮುದಾಯದ ಗೋವಿಂದ ಕಾರಜೋಳಗೆ ಡಿಸಿಎಂ ಹುದ್ದೆ ನೀಡಲಾಗಿದೆ.

blank

ರಾಮುಲುಗೆ ಡಿಸಿಎಂ ಪಟ್ಟ ನೀಡಲು ಕಾಯುತ್ತಿರಬಹುದು
ಶ್ರೀರಾಮುಲುಗೆ ಡಿಸಿಎಂ ಮಾಡುವ ಸಮಯಕ್ಕಾಗಿ ಕಾಯುತ್ತಿರಬಹುದು. ರಾಜಕಾರಣದಲ್ಲಿ ಕಾಯುವುದೇ ಒಂದು ದೊಡ್ಡ ಪರೀಕ್ಷೆ ಇರುತ್ತದೆ. ನಮಗೆ ಕೊಟ್ಟ ಮಾತಿನಂತೆ ಪಕ್ಷ ನಡೆದುಕೊಳ್ಳಲಿದೆ ಕಾಯಬೇಕು. ಶಾಸಕ ರಮೇಶ ಜಾರಕಿಹೊಳಿ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದಾರೆ. ಕೋರ್ಟ್​ನಲ್ಲಿ ಕ್ಲೀನ್ ಚಿಟ್ ಪಡೆದು ಮರಳಿ ಬರುವ ವಿಶ್ವಾಸವಿದೆ ಎಂದರು.

The post ‘ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ’ ಎಂದ ರಾಮುಲು appeared first on News First Kannada.

Source: newsfirstlive.com

Source link