ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು

ಮಡಿಕೇರಿ: ಅಮ್ಮನ ಸೀರೆಯಲ್ಲಿ ಜೋಕಾಲಿ ಆಡುತ್ತಾ ಆನಂದಿಸುತ್ತಿದ್ದ ಎರೆಡು ಮಕ್ಕಳು ಅದೇ ಜೋಕಾಲಿಯಿಂದ ಜೀವ ಕಳೆದುಕೊಂಡ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ಇಂದು ಸಂಜೆ ನಡೆದಿದೆ. ಇದನ್ನೂ ಓದಿ: ಬಾಣಂತನದ ಬಟ್ಟೆಗಳನ್ನು ಆನ್‍ಲೈನ್‍ನಲ್ಲಿ ಹರಾಜಿ

ಮಣಿಕ್ ಶಾ(14) ಹಾಗೂ ಪೂರ್ಣೆಶ್ (12) ಮೃತರಾಗಿದ್ದಾರೆ. ಸೋಮವಾರಪೇಟೆ ಪಟ್ಟಣಕ್ಕೆ ಸಮೀಪದ ಗಣಗೂರು ಉಂಜಿಗನ ಹಳ್ಳಿಯ ರಾಜು ಹಾಗೂ ಜಯಂತಿ ಎಂಬುವರ ಮಕ್ಕಳಾಗಿದ್ದಾರೆ. ಜೋಕಾಲಿ ಆಡುವಾಗ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮನೆಯಲ್ಲಿ ಇಬ್ಬರೇ ಅಕ್ಕಾ, ತಮ್ಮ ಇಬ್ಬರೂ ಜೋಕಾಲಿಯಲ್ಲಿ ಆಟವಾಡುತ್ತಿದ್ದರು. ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಎರಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿದ್ದು, ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೇಳಗಿಳಿಸಿದ್ದಾರೆ ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಸಬ್ ಇನ್ಸ್‍ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ತೆರಳಿ ಮೊಕದಮ್ಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಕ್ಕಳು ಜೋಕಾಲಿ ಆಟಲು ಹೋಗಿ ಪ್ರಾಣ ಕಳೆದುಕೊಂಡಿದ್ದು,ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು appeared first on Public TV.

Source: publictv.in

Source link