ಟೊಕಿಯೋ ಒಲಿಂಪಿಕ್ಸ್​ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ 

ಟೊಕಿಯೋ ಒಲಿಂಪಿಕ್ಸ್​ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ 

ಬೆಂಗಳೂರು: ಟೊಕಿಯೋ ಒಲಿಂಪಿಕ್ಸ್​ಗೆ  ಆಯ್ಕೆಯಾದ ಸ್ಪರ್ಧಿಗಳಿಗೆ ಕರ್ನಾಟಕ ಸರ್ಕಾರ ಗುಡ್​​ನ್ಯೂಸ್ ಕೊಟ್ಟಿದ್ದು,​ ಈಜುಕೊಳ ಓಪನ್​ಗೆ ಷರತ್ತುಬದ್ಧ ಅನುಮತಿ ನೀಡಿದೆ.

ಈ ಬಗ್ಗೆ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಹಾಗೂ ಸ್ವಿಮ್ಮಿಂಗ್ ಫೆಡರೇಷನ್​​ ಆಫ್​​ ಇಂಡಿಯಾ ಮನವಿ ಮಾಡಿತ್ತು. ಹೀಗಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಸ್ವಿಮ್ಮಿಂಗ್ ಪೂಲ್ ಓಪನ್ ಮಾಡಲು ಆದೇಶ ಹೊರಡಿಸಿದ್ದಾರೆ. ಅಭ್ಯಾಸಕ್ಕಾಗಿ ಮಾತ್ರ ಈಜುಕೊಳ ಬಳಕೆಗೆ ಸರ್ಕಾರ ಅನುಮತಿ ನೀಡಿದೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್​​ಡೌನ್ ಜಾರಿ ಮಾಡಿತ್ತು. ಇದೀಗ ಕೆಲವು ಚಟುವಟಿಕೆಗಳಿಗೆ ಲಾಕ್​ಡೌನ್ ಸಡಿಲಿಕೆ ಮಾಡಿದೆ. ಆದರೆ ಇದುವರೆಗೂ ಸ್ವಿಮ್ಮಿಂಗ್ ಪೂಲ್​ಗಳಿಗೆ ವಿಧಿಸಿರುವ ನಿರ್ಬಂಧದಲ್ಲಿ ಯಾವುದೇ ಸಡಿಲಿಕೆಯನ್ನ ಮಾಡಿಲ್ಲ.

The post ಟೊಕಿಯೋ ಒಲಿಂಪಿಕ್ಸ್​ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ  appeared first on News First Kannada.

Source: newsfirstlive.com

Source link