ಕೆಜಿ ಹಳ್ಳಿ ಗಲಾಟೆ ಪ್ರಕರಣ; ಮತ್ತೊಬ್ಬ ಪ್ರಮುಖ ಆರೋಪಿ ಬಂಧಿಸಿದ NIA

ಕೆಜಿ ಹಳ್ಳಿ ಗಲಾಟೆ ಪ್ರಕರಣ; ಮತ್ತೊಬ್ಬ ಪ್ರಮುಖ ಆರೋಪಿ ಬಂಧಿಸಿದ NIA

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಗೋವಿಂದಪುರದ ನಿವಾಸಿ ಸೈಯ್ಯದ್ ಅಬ್ಬಾಸ್ ಎಂಬಾತನನ್ನ ಎನ್​ಐಎ ಅಧಿಕಾರಿಗಳು ಅರೆಸ್ಟ್​ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. 2020ರ ಆಗಸ್ಟ್ 11 ರಂದು ನಡೆದಿದ್ದ ಗಲಾಟೆ ಬಳಿಕ ಸೈಯ್ಯದ್ ಅಬ್ಬಾಸ್ ನಾಪತ್ತೆಯಾಗಿದ್ದ.

ಕೆ.ಜಿ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿರುವ ಆರೋಪ ಸೈಯ್ಯದ್ ಅಬ್ಬಾಸ್ ಮೇಲಿದೆ. ಈ ಸಂಬಂಧ 2020 ಆಗಸ್ಟ್ 12ರಂದು ಸಯ್ಯದ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲಾದ ನಂತರ ಪ್ರಕರಣವು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.

ಸೈಯ್ಯದ್ ಅಬ್ಬಾಸ್ ವಿರುದ್ಧ ಗಲಾಟೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪ ಕೂಡ ಇದೆ. ಹಲ್ಲೆ ಬಳಿಕ ಠಾಣೆಗೆ ಬೆಂಕಿ ಇಟ್ಟಿದ್ದು ಸಹ‌ ಇದೇ ಸೈಯ್ಯದ್ ಅಂತಾ ಹೇಳಲಾಗಿದೆ. ಇನ್ನು ಈಗಾಗಲೇ ಪ್ರಕರಣದ ಬಗ್ಗೆ ಸುದೀರ್ಘ ತನಿಖೆ ನಡೆಸಿರುವ ಎನ್​ಐಎ, ಈಗಾಗಲೇ 138 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದೆ. ಇನ್ನು ಬಂಧಿತ ಆರೋಪಿ ಸಯ್ಯದ್​ನನ್ನ ಎನ್ಐಎ ಕೋರ್ಟ್​ 6 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿದೆ.

The post ಕೆಜಿ ಹಳ್ಳಿ ಗಲಾಟೆ ಪ್ರಕರಣ; ಮತ್ತೊಬ್ಬ ಪ್ರಮುಖ ಆರೋಪಿ ಬಂಧಿಸಿದ NIA appeared first on News First Kannada.

Source: newsfirstlive.com

Source link