ಕುರಿಗಾಯಿ ಕುಟುಂಬಕ್ಕೆ 22.5 ಲಕ್ಷ ಪಂಗನಾಮ! ಪೇದೆ ವಿರುದ್ಧ ವಂಚನೆ ಆರೋಪ

ಕುರಿಗಾಯಿ ಕುಟುಂಬಕ್ಕೆ 22.5 ಲಕ್ಷ ಪಂಗನಾಮ! ಪೇದೆ ವಿರುದ್ಧ ವಂಚನೆ ಆರೋಪ

ವಿಜಯಪುರ: ಪಿಎಸ್​ಐ ಆಗ್ತೀನಿ ಅಂತ ಪೊಲೀಸ್ ಪೇದೆಯೋರ್ವ ಕುರಿಗಾಹಿ ಕುಟುಂಬವೊಂದರಿಂದ 22.5 ಲಕ್ಷ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವೊಯಪುರ ಪೊಲೀಸ್ ಹವಾಲ್ದಾರ್ ಆಗಿರೋ ಸುರೇಶ್ ಪಾತ್ರೋಟ್ ತನ್ನ ಸ್ನೇಹಿತ ಕುರಿಗಾಹಿ ಸುಭಾಸ್ ಬಳಿ ಒಟ್ಟು 22.5 ಲಕ್ಷ ಹಣ ಪಡೆದು ವಾಪಸ್ ನೀಡಿಲ್ಲ ಎನ್ನಲಾಗಿದೆ. ಈ ಕುರಿತು ಕುಟುಂಬದವರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾನು ಪಿಎಸ್​ಐ ಆಗ್ತೀನಿ. ನಂಗೆ ಹಣ ಬೇಕಾಗಿದೆ ಎಂದು 10 ವರ್ಷಗಳ ಹಿಂದೆ ಸುರೇಶ್ ಪಾತ್ರೋಟ್ ಹಣ ಪಡೆದು ಈವರೆಗೆ ವಾಪಸ್ ನೀಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ದೂರು ನೀಡಿದ್ರೂ ಪೊಲೀಸ್ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಸುಭಾಸ್ ಪತ್ನಿ ಆರೋಪಿಸಿದ್ದಾರೆ.

20 ಕುರಿಗಳನ್ನ ಮಾರಿ ಸುಭಾಸ್ ಮತ್ತು ಪತ್ನಿ ಸುರೇಶ್ ಪಾತ್ರೋಟ್​ಗೆ ಒಮ್ಮೆ ಚೆಕ್ ಮೂಲಕ 15 ಲಕ್ಷ ಹಾಗೂ ಮತ್ತೊಮ್ಮೆ ಬಾಂಡ್ ಮೂಲಕ 7.5 ಲಕ್ಷ ಹಣ ನೀಡಿದ್ದಾರಂತೆ. ಇದ್ದ ಕುರಿಗಳನ್ನೂ ಮಾರಿ ಹಣ ನೀಡಿ ಕೈಸುಟ್ಟುಕೊಂಡ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

The post ಕುರಿಗಾಯಿ ಕುಟುಂಬಕ್ಕೆ 22.5 ಲಕ್ಷ ಪಂಗನಾಮ! ಪೇದೆ ವಿರುದ್ಧ ವಂಚನೆ ಆರೋಪ appeared first on News First Kannada.

Source: newsfirstlive.com

Source link