ಕಾರಿನಲ್ಲಿ ಬಂದು ಮನೆಗಳ್ಳತನ ಮಾಡ್ತಿದ್ದ ‘ಐಷಾರಾಮಿ ಕಳ್ಳ’ ಅರೆಸ್ಟ್; ಚಿನ್ನಾಭರಣ ನೋಡಿ ಬೆಚ್ಚಿದ ಪೊಲೀಸರು

ಕಾರಿನಲ್ಲಿ ಬಂದು ಮನೆಗಳ್ಳತನ ಮಾಡ್ತಿದ್ದ ‘ಐಷಾರಾಮಿ ಕಳ್ಳ’ ಅರೆಸ್ಟ್; ಚಿನ್ನಾಭರಣ ನೋಡಿ ಬೆಚ್ಚಿದ ಪೊಲೀಸರು

ಬೆಂಗಳೂರು: ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಹೋಗಿ ಮನೆ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

blank

ಬಸವರಾಜ್ ಬಂಧಿತ ಆರೋಪಿ. ಮನೆಗಳಲ್ಲಿ ಕಳ್ಳತನ‌ ಮಾಡಿ ಐಷಾರಾಮಿ ಜೀವನ ನಡೆಸ್ತಿದ್ದ ಆರೋಪಿ ಇದುವರೆಗು 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಹಿಂದೆ ಬೆಂಗಳೂರಿನಲ್ಲೂ ಮನೆಗಳ್ಳತನದ ಮಾಡಿ ತಲೆ ಮರೆಸಿಕೊಂಡಿದ್ದ ಅನ್ನೋ ದೂರು ಕೇಳಿಬಂದಿತ್ತು. ಅಂತೆಯೇ ಇದೀಗ ಆರೋಪಿಯನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

blank

2 ಕಾರು ಸೀಜ್
ಸದ್ಯ ಬಂಧಿತ ಆರೋಪಿಯನ್ನ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈತನಿಂದ 8 ಲಕ್ಷ ಮೌಲ್ಯದ 1 ಕೆಜಿ 360ಗ್ರಾಂ ತೂಕದ ಚಿನ್ನಾಭರಣಗಳು, ಒಂದು ಲಕ್ಷದ ಐವತ್ತು ಸಾವಿರ ನಗದು, ಎರಡು ಕಾರುಗಳನ್ನ ಸೀಜ್ ಮಾಡಲಾಗಿದೆ.

The post ಕಾರಿನಲ್ಲಿ ಬಂದು ಮನೆಗಳ್ಳತನ ಮಾಡ್ತಿದ್ದ ‘ಐಷಾರಾಮಿ ಕಳ್ಳ’ ಅರೆಸ್ಟ್; ಚಿನ್ನಾಭರಣ ನೋಡಿ ಬೆಚ್ಚಿದ ಪೊಲೀಸರು appeared first on News First Kannada.

Source: newsfirstlive.com

Source link