ಮುಖ್ಯಮಂತ್ರಿಯಿಂದ್ಲೇ ಕೋವಿಡ್ ರೂಲ್ಸ್ ಬ್ರೇಕ್..!

ನೆಲಮಂಗಲ: ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾಗಿಯಾಗುವ ಮೂಲಕ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಣಿಗಲ್ ರೋಡ್ ನಲ್ಲಿರುವ ರೆಸಾರ್ಟ್ ಗೆ ಭೇಟಿ ನೀಡಿ ಸಿಎಂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಒಂದು ರೂಲ್ಸ್ ರಾಜಕೀಯ ಪ್ರಭಾವಿಗಳಿಗೆ ಒಂದು ರೂಲ್ಸ್ ಎನ್ನುವಂತಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಮದುವೆಗೆ ಕೇವಲ 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ 40 ಜನರಿಗೆ ಮಾತ್ರ ಅವಕಾಶ ಕೊಟ್ಟ ಸಿಎಂ ಯಡಿಯೂರಪ್ಪರಿಂದಲೇ ರೂಲ್ಸ್ ಬ್ರೇಕ್ ಆಗಿದೆ. ಜನಸಾಮಾನ್ಯರಿಗೆ ಅಧಿಕಾರಿಗಳು ಪೊಲೀಸರು ಫೈನ್ ಹಾಕಿ ತಡೀತಾರೆ, ಆದರೆ ಪ್ರಭಾವಿಗಳಿಗೆ ಅಧಿಕಾರಿಗಳೇ ಭದ್ರತೆ ಒದಗಿಸಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ನಾನೇ ಕಾರಣ- ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಮದುವೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಕುಣಿಗಲ್ ರಸ್ತೆಯ ಮಹದೇವಪುರದ ಖಾಸಗಿ ರೆಜಾಟ್ರ್ಸ್ ನಲ್ಲಿ ಮದುವೆ ಆಯೋಜನೆಯಾಗಿತ್ತು. ಶಿವಮೊಗ್ಗದ ಅಗಡಿ ಅಶೋಕ್ ಮಗನ ಮದುವೆ ಮದುವೆಯಲ್ಲಿ ಐನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿವಾಹ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಎಂ ಪ್ರಯಣ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಡೆ ನಡೆದಿದ್ದು, ಪೊಲೀಸರ ವಿರುದ್ಧ ವಾಹನ ಸವಾರರ ಗಲಾಟೆ ಮಾಡಿದ್ದಾರೆ. ಸಿಎಂ ಬಂದೋಬಸ್ತ್ ನಲ್ಲಿ ವಾಹನಗಳ ತಡೆ ಸಿಎಂ ಒಂದು ಕಾನೂನ ಜನರಿಗೆ ಒಂದು ಕಾನೂನ ಎಂದು ಸವಾರರು ಅವಾಜ್ ಹಾಕಿದ್ದಾರೆ. ಇತ್ತ ನೆಲಮಂಗಲ ತಾಲೂಕಿನ ಮಹದೇವಪುರ ಬಳಿ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲ್ ಟ್ರಾಫಿಕ್ ಜಾಮ್ ಆಗಿದ್ದು ನಂತರ ಕ್ಲಿಯರ್ ಆಗಿದೆ.

The post ಮುಖ್ಯಮಂತ್ರಿಯಿಂದ್ಲೇ ಕೋವಿಡ್ ರೂಲ್ಸ್ ಬ್ರೇಕ್..! appeared first on Public TV.

Source: publictv.in

Source link