ಸೋಂಕು ಪತ್ತೆ ಹಚ್ಚೋದು ಇನ್ನಷ್ಟು ಸುಲಭ.. ಇನ್ಮುಂದೆ ಮಾಸ್ಕ್​ ಹೇಳುತ್ತೆ ನಿಮ್ಮ ‘ಕೊರೊನಾ ಗುಟ್ಟು’

ಸೋಂಕು ಪತ್ತೆ ಹಚ್ಚೋದು ಇನ್ನಷ್ಟು ಸುಲಭ.. ಇನ್ಮುಂದೆ ಮಾಸ್ಕ್​ ಹೇಳುತ್ತೆ ನಿಮ್ಮ ‘ಕೊರೊನಾ ಗುಟ್ಟು’

ಬೋಸ್ಟೊನ್: ಇಷ್ಟು ದಿನ ಕೊರೊನಾ ವೈರಸ್​ ಸೋಂಕು ತಗುಲದಿರಲಿ ಅನ್ನೋ ಕಾರಣಕ್ಕೆ ಮಾಸ್ಕ್ ಧರಿಸಲಾಗ್ತಿತ್ತು. ಇನ್ನು ಮುಂದೆ ನೀವು ಧರಿಸುವ ಮಾಸ್ಕ್ ನಿಮಗೆ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಅನ್ನೋದನ್ನೂ ಹೇಳಲಿದೆ. ಇಂಥ ಮಾಸ್ಕ್​ನ್ನ ಹಾರ್ವರ್ಡ್ ಯೂನಿವರ್ಸಿಟಿಯ ಎಂಐಟಿ ಸಂಶೋಧಕರು ಕಂಡುಹಿಡಿದಿದ್ದಾರೆ. ಮಾಸ್ಕ್ ಧರಿಸಿದ 90 ನಿಮಿಷಗಳಲ್ಲಿ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಅನ್ನೋದು ಗೊತ್ತಾಗಲಿದೆ.

ಜರ್ನಲ್ ನೇಚರ್ ಬಯೋಟೆಕ್ನಾಲಜಿಯಲ್ಲಿ ವಿವರಿಸಿರುವಂತೆ ಈ ಮಾಸ್ಕ್​​ನಲ್ಲಿ ಸಣ್ಣ ಗಾತ್ರದ ಉಪಯೋಗಿಸಿ ಎಸೆಯಬಹುದಾದ ಸೆನ್ಸಾರ್ ಒಂದನ್ನು ಅಳವಡಿಸಲಾಗಿದ್ದು ಇದನ್ನು ವೈರಸ್ ಪತ್ತೆಹಚ್ಚಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ಬೇರೆ ಬೇರೆ ಮಾಸ್ಕ್​​ಗಳಲ್ಲೂ ಈ ಸೆನ್ಸಾರ್​ನ್ನು ಬಳಸಬಹುದಾಗಿದೆಯಂತೆ.

ಇನ್ನು ಮಾಸ್ಕ್​ನ ಒಳಗಡೆ ಈ ಸೆನ್ಸಾರ್​ನ್ನು ಅಳವಡಿಸಬಹುದಾಗಿದ್ದು ಧರಿಸಿದವರು ತಮಗೆ ಟೆಸ್ಟ್ ಮಾಡಿಕೊಳ್ಳಬೇಕಾದಾಗ ಸೆನ್ಸಾರ್​​ನ್ನು ಆನ್ ಮಾಡಿಕೊಳ್ಳಬಹುದು. ಸೆನ್ಸಾರ್​ನ್ನು ಮಾಸ್ಕ್​ನ ಒಳಗಡೆ ಅಳವಡಿಸುವುದರಿಂದ ಆ ವ್ಯಕ್ತಿ ತನ್ನ ಕೊರೊನಾ ಟೆಸ್ಟ್​ ರಿಸಲ್ಟ್​ ಬೇರೆಯವರಿಗೆ ತಿಳಿಯದಂತೆ ರಹಸ್ಯವಾಗಿ ಇಟ್ಟುಕೊಳ್ಳಲು ಸಹಾಯಕಾರಿಯಾಗಿರಲಿದೆ ಎನ್ನಲಾಗಿದೆ.

2020 ರಲ್ಲೇ ಈ ಫೇಸ್​ ಮಾಸ್ಕ್​ನ್ನು ಅಭಿವೃದ್ಧಿಪಡಿಸಲಾಗಿದ್ದು ಆನಂತರ ಸೋಂಕು ಹೆಚ್ಚಾದ ಹಿನ್ನೆಲೆ ಇದೀಗ ತಮ್ಮ ತಂತ್ರಜ್ಞಾನದ ಪ್ರಯೋಗವನ್ನು ಸಾರ್ಸ್​ ಕೋವಗ 2 ವೈರಸ್​ ಮೇಲೆ ನಡೆಸಿದ್ದಾರಂತೆ. ಈ ಫೇಸ್​ ಮಾಸ್ಕ್​ಗಳನ್ನು ತಯಾರಿಸಲು ಸಂಶೋಧಕರು ಫ್ರೀಜ್ ಮತ್ತು ಡ್ರೈ ಮಾಡಿದ ಸೆನ್ಸಾರ್​ಗಳನ್ನ ಬಳಸಿದ್ದಾರೆ. ಈ ಸೆನ್ಸಾರ್​​ನ ಸುತ್ತ ಸಿಲಿಕಾನ್ ಎಲಾಸ್ಟೊಮರ್​ನ್ನು ಸುತ್ತಲಾಗಿದೆಯಂತೆ.

The post ಸೋಂಕು ಪತ್ತೆ ಹಚ್ಚೋದು ಇನ್ನಷ್ಟು ಸುಲಭ.. ಇನ್ಮುಂದೆ ಮಾಸ್ಕ್​ ಹೇಳುತ್ತೆ ನಿಮ್ಮ ‘ಕೊರೊನಾ ಗುಟ್ಟು’ appeared first on News First Kannada.

Source: newsfirstlive.com

Source link