ವಿಶ್ವದ ದೊಡ್ಡಣ್ಣನಿಗೆ ‘ಶಾಕ್’ ಕೊಟ್ಟ ಸೂರ್ಯದೇವ.. ಕೆನಡದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವು

ವಿಶ್ವದ ದೊಡ್ಡಣ್ಣನಿಗೆ ‘ಶಾಕ್’ ಕೊಟ್ಟ ಸೂರ್ಯದೇವ.. ಕೆನಡದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವು

ಕೊರೊನಾ ಅಬ್ಬರದ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಉಷ್ಣ ಗಾಳಿಗೆ ವಿಶ್ವದ ದೊಡ್ಡಣ್ಣ ಶಾಕ್ ಆಗಿದ್ದಾನೆ. ಕೆನಡಾ ಮೇಲೂ ಸೂರ್ಯ ಮುನಿಸಿಕೊಂಡಿದ್ದು, ಡಜನ್ ಗಟ್ಟಲೆ ಜನ ಸಾವಿನ ಮನೆ ಸೇರಿದ್ದಾರೆ.

ಹೌದು.. ಕೊರೊನಾದ ನಡುವೆ ಪುಟ್ಟ ರಾಷ್ಟ್ರ ಕೆನಡದಲ್ಲಿ ನೆಲ ಇದೀಗ ಸುಡು ಬಿಸಿಲಿನ ಧಗೆಗೆ ಹೈರಾಣಾಗಿದೆ. ಒಂದು ಕಡೆ ಕೊರೊನಾ ಅಬ್ಬರ, ಮತ್ತೊಂದು ಕಡೆ ಆಸ್ಟ್ರೇಲಿಯಾದಲ್ಲಿ ಭೀಕರ ಚಂಡಮಾರುತ, ಮಗದೊಂದು ಕಡೆ ಜ್ವಾಲಮುಖಿ. ಅಬ್ಬಬ್ಬಾ ಜಗತ್ತಿನಲ್ಲಿ ಏನೆನೆಲ್ಲಾ ಬೆಳವಣಿಗೆಗಳು ನಡೆಯುತ್ತಿದೆ ಅಲ್ವಾ..? ಇವೆಲ್ಲದೆರ ನಡುವೆ ಇದೀಗ ಅಮೆರಿಕ ಹಾಗೂ ಕೆನಡಾಗೆ ಮತ್ತೊಂದು ಶಾಕ್ ಎದುರಾಗಿದೆ.

ವಿಶ್ವದ ದೊಡ್ಡಣ್ಣನಿಗೆ ‘ಶಾಕ್’ ಕೊಟ್ಟ ಸೂರ್ಯ
ಕೆನಡಾದಲ್ಲೂ ಮುಂದುವರೆದ ಸೂರ್ಯನ ಮುನಿಸು

ಸೂರ್ಯ ಮುನಿಸಿಕೊಂಡಿದ್ದಾನೆ. ಬಿಸಿಗಾಳಿಯ ಪ್ರಖರಕ್ಕೆ ರಸ್ತೆಗಳು ಬಿರುಕು ಬಿಡ್ತಿವೆ. ರಸ್ತೆಯಲ್ಲಿ ಅಳವಡಿಸಿರುವ ಲೋಹದ ಸಾಮಾಗ್ರಿಗಳು ವಿಸ್ತಾರಗೊಳ್ಳುತ್ತಿದೆ. ಕೆನಡಾದ ನೆಲ ರಣ ಬಿಸಿಲಿನಿಂದ ಸುಡುತ್ತಿದೆ. ಬಿಸಿಲಿನ ತಾಪವನ್ನು ಸಹಿಸಲಾಗದೆ ಜನ ಉಸಿರು ಚೆಲ್ಲುತ್ತಿದ್ದಾರೆ. ಹೌದು, ಕೆನಡಾ ಕೂಡ ಇದೀಗ ಸೂರ್ಯನ ಪ್ರಕೋಪಕ್ಕೆ ತುತ್ತಾಗಿದೆ. ದೊಡ್ಡಣ್ಣನ ಮೇಲೆ ಸೂರ್ಯ ಮುನಿಸಿಕೊಂಡಿದ್ದಾನೆ. ಕೆನಡಾದಲ್ಲಿ ಉಷ್ಣ ಗಾಳಿ ಬೀಸುತ್ತಿದ್ದು, ಗಾಳಿಯ ತಾಪವನ್ನು ಸಹಿಸಲಾಗದೆ ಜನ ಒಬೊಬ್ಬರಾಗಿ ಸಾವಿನ ಮನೆ ಸೇರುತ್ತಿದ್ದಾರೆ.

ಇನ್ನೂರರ ಗಡಿ ದಾಟಿದ ಸಾವಿನ ಸಂಖ್ಯೆ
ಇದೇ ಮೊದಲ ಬಾರಿಗೆ ಕೆನಡಾದಲ್ಲಿ 49.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಶುಕ್ರವಾರ ಒಂದೇ ದಿನದಲ್ಲಿ ಉಷ್ಣ ಗಾಳಿಯಿಂದಾಗಿ 65 ಮಂದಿ ಏಕಾಏಕಿ ಮೃತಪಟ್ಟಿದ್ದಾರೆ. ಇದೀಗ ಸಾವಿನ ಸಂಖ್ಯೆ ದ್ವಿಶತಕದ ಗಡಿ ದಾಟಿ ಮುನ್ನುಗುತ್ತಿದೆ. ಕೆನಡಾದ ವ್ಯಾಂಕೋವರ್‌ನಲ್ಲಂತು ಭಾರೀ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಇಲ್ಲಿ ಬರೋಬ್ಬರಿ 134 ಜನ ಬಿಸಿಲ ಬೇಗೆಯಿಂದ ಸಾವಿನ ಮನೆ ಸೇರಿದ್ದಾರೆ. ಇದುವರೆಗೆ ಸೂರ್ಯನ ಪ್ರಕೋಪಕ್ಕೆ ಸರಿ ಸುಮಾರು 230 ಜನರು ಪ್ರಾಣ ಕಳ್ಕೊಂಡಿದ್ದಾರೆ ಎನ್ನಲಾಗಿದೆ.

ಹೊಸ ಸಾರ್ವಕಾಲಿಕ ಅಧಿಕ ತಾಪಮಾನ
4 ಕೋಟಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಕೆನಡಾ ಸತತ ಮೂರನೇ ದಿನ ಸಾರ್ವಕಾಲಿಕ ಅಧಿಕ ತಾಪಮಾನಕ್ಕೆ ತುತ್ತಾಗಿದೆ. ಕೆನಡಾ ನೆಲ ಇದೇ ಮೊದಲ ಬಾರಿಗೆ ಇಂತಹ ಭೀಕರ ಉಷ್ಣಾಂಶದಿಂದ ಸುಡ್ತಿದೆ. ಸಾಮಾನ್ಯವಾಗಿ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತಿತ್ತು. ಆದರೆ ಇದೇ ಮೊದಲ ಬಾರಿ 49ರ ಗಡಿ ದಾಟಿದೆ. 49.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬ್ರಿಟಿಷ್ ಕೊಲಂಬಿಯಾದ ಲಿಟ್ಟನ್ ನಲ್ಲಿ ಉಷ್ಣಾಂಶವು 49.5 ಏರಿಕೆಯಾಗಿದ್ದು, ಇದುವರೆಗಿನ ಗರಿಷ್ಠ ತಾಪಮಾನ ಎಂದು ಕೆನಡಾದ ಹವಾಮಾನ ಇಲಾಖೆ ತಿಳಿಸಿದೆ.

ಸೂರ್ಯನ ಶಾಖ ಸಹಿಸಲಾಗದೆ ಡಜನ್ ಗಟ್ಟಲೆ ಜನರು ಒಬ್ಬರ ಹಿಂದೆ ಒಬ್ಬರಂತೆ ಸಾವಿನ ಮನೆ ಸೇರುತ್ತಿರುವುದು ಕೆನಡಾ ಕಳವಳಕ್ಕೆ ಕಾರಣವಾಗಿದೆ. ಬಿಸಿ ಗಾಳಿಯಿಂದ ತಮ್ಮ ಜನರನ್ನು ರಕ್ಷಣೆ ಮಾಡಲು ಕೆನಡಾ ಸರ್ಕಾರ ಜನರಿಗೆ ಒಂದಿಷ್ಟು ಸಲಹೆಗಳನ್ನು ಕೊಟ್ಟಿದೆ.

blank

ಕೆನಡಾ ಸರ್ಕಾರ ತಮ್ಮ ಜನರಿಗೆ ಏರ್ ಕಂಡೀಷನರ್ ಇರುವ ಮಳಿಗೆಗಳಿಗೆ ಹೋಗಿ ರಕ್ಷಣೆ ಪಡೆದುಕೊಳ್ಳಿ ಎಂದಿದೆ. ಸಾಧ್ಯವಾದಷ್ಟು ಹೊರಗಿನ ಚಟುವಟಿಕೆಗಳನ್ನ ನಿರ್ಬಂಧಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚಾಗಿ ದ್ರವ ಪದಾರ್ಥಗಳನ್ನು ಸೇವಿಸಲು ತಿಳಿಸಿದೆ . ಯಾವುದೇ ಕಾರಣಕ್ಕೂ ಮುಚ್ಚಿದ ಕಾರುಗಳಲ್ಲಿ ಜನರು ಅಥವಾ ಪ್ರಾಣಿಗಳನ್ನು ಬಿಟ್ಟುಹೋಗದಿರಿ, ಇದ್ರಿಂದ ಜನರ ಮಾತ್ರವಲ್ಲದೇ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಎದುರಾಗಲಿದೆ . ಯಾವುದೇ ಕಾರಣಕ್ಕ್ಕೂ ಈ ತಪ್ಪು ಮಾಡ್ಬೇಡಿ ಎಂದು ಕೆನಡಾ ಸರ್ಕಾರ ಜನರಲ್ಲಿ ಮನವಿ ಮಾಡ್ಕೊಂಡಿದೆ.

ಮತ್ತೊಂದು ಪ್ರಮುಖ ಅಂಶವೆಂದ್ರೆ, ಯಾವುದೇ ಕಾರಣಕ್ಕೆ ಮನೆಯೊಳಗೆ ಕೂಡ ಫ್ಯಾನ್‌ನ ಅಡಿಯಲ್ಲಿಯೇ ಸಂರಕ್ಷಣೆ ಪಡೆದುಕೊಳ್ಳದಿರಿ, ಸಾಧ್ಯವಾದ್ರೆ ಮನೆಯ ಕಿಟಕಿಗಳಿಗೆ ಪರದೆಗಳನ್ನು ಹಾಕಿ ಬಿಸಿಯಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸಿ ಎಂದಿದೆ. ಸರಕಾರ ಬಿಡುಗಡೆ ಮಾಡುವ ಮಾರ್ಗಸೂಚಿಗಳನ್ನು ಅನುಸರಿಸಿ. ಏರ್ ಕಂಡೀಷನರ್ ಇರುವ ಸ್ಥಳಗಳೆಂದರೆ ಲೈಬ್ರರಿ, ಶಾಪಿಂಗ್ ಮಾಲ್‌ಗಳು, ಕಮ್ಯುನಿಟಿ ಸೆಂಟರ್‌ಗಳು ನಿಮಗೆ ಬಿಸಿಯಿಂದ ರಕ್ಷಣೆ ನೀಡಬಲ್ಲುದು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಬಿಸಿಯಿಂದ ಸಂರಕ್ಷಣೆ ಪಡೆಯಿರಿ ಎಂದಿದೆ.

ಇದು ಅಂತ್ಯವಲ್ಲ ಆರಂಭ ಎಂದ ಹವಾಮಾನ ತಜ್ಞರು
ಒಂದು ಕಡೆ ಜನರು ರಣ ಬಿಸಿಲಿಗೆ ಪ್ರಾಣ ಕಳ್ಕೊತ್ತಿದ್ರೆ, ಹವಾಮಾನ ಇಲಾಖೆ ಮಾತ್ರ ಮತ್ತೊಂದು ಶಾಕಿಂಗ್ ಸಂಗತಿ ಹೇಳಿದೆ. ಇದು ಜಸ್ಟ್ ಟ್ರೈಲರ್ ಅಷ್ಟೇ, ಪಿಚ್ಚರ್ ಅಭಿ ಬಾಕಿ ಹೇ ಎಂದಿದೆ. ಇದು ಅಂತ್ಯವಲ್ಲ, ಇದೇನಿದ್ರೂ ಆರಂಭ ಅಷ್ಟೇ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಹವಾಮಾನ ಶಾಸ್ತ್ರಜ್ಞರ ಪ್ರಕಾರ
ಬಿಸಿಗಾಳಿ ಪೆಸಿಫಿಕ್ ವಾಯವ್ಯ ಪ್ರದೇಶದಲ್ಲಿ ಇದೀಗ ತಾನೇ ಶುರುವಾಗಿದೆ. ಇದು ಕನಿಷ್ಠ ಪಕ್ಷ 24 ಗಂಟೆಗಳ ಕಾಲ ಇರುತ್ತದೆ. ಬಿಸಿ ಉಷ್ಣ ಗಾಳಿ ಈಗ ಪ್ರಾರಂಭ ಆಗಿದೆ ಅಷ್ಟೇ. ಜುಲೈ ತಿಂಗಳಲ್ಲಿ ತಾಪಮಾನ ಮಟ್ಟ ಮತ್ತಷ್ಟು ಏರಿಕೆಯಾಗಲಿದೆ. ಹವಾಮಾನ ಬದಲಾವಣೆಯಿಂದಾಗಿ ಹದಗೆಟ್ಟಿರುವ ಶಾಖದ ಅಲೆಯು ವಾಯುವ್ಯದ ಮೇಲೆ ತೀವ್ರ ಒತ್ತಡವನ್ನುಂಟು ಮಾಡುತ್ತಿದೆ. ಹೀಗಾಗಿ ಫೆಸಿಫಿಕ್ ವಾಯುವ್ಯದಲ್ಲಿ ಬಿಸಿಗಾಳಿ ಉಂಟಾಗುತ್ತಿದೆ.
-ಹವಾಮಾನ ಶಾಸ್ತ್ರಜ್ಞರು

ವ್ಯಾಂಕೋವರ್ ನಲ್ಲಿ ತಾಪಮಾನ ಇದುವರೆಗೆ ಇಷ್ಟು ಏರಿಕೆಯಾಗಿರ್ಲಿಲ್ಲ. ಇಂತಹ ಕೆಟ್ಟ ಉಷ್ಣಾಂಶವನ್ನು ಎಂದೂ ಕೂಡ ನೋಡಿಲ್ಲ. ಜನರು ಬಿಸಿಲಿನ ತಾಪವನ್ನ ತಡೆಯಲಾಗದೆ ಉಸಿರು ನಿಲ್ಲಿಸುತ್ತಿರುವುದನ್ನು ನೋಡಲಾಗ್ತಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಕಣ್ಣೀರು ಹಾಕುತ್ತಿದ್ದಾರೆ.

ಕೆನಾಡ ಮಾತ್ರವಲ್ಲ ಬಿಸಿಲ ಬೇಗೆಯ ಸಾವುಗಳು ಅಮೆರಿಕದ ಫೆಸಿಫಿಕ್ ವಾಯುವ್ಯ ಭಾಗಕ್ಕೂ ವಿಸ್ತರಿಸಿದೆ. ಅಮೆರಿಕದಲ್ಲೂ ಕೂಡ ರಸ್ತೆಗಳು ಬಿರುಕು ಬಿಡ್ತಿದ್ದು, ಅಮೆರಿಕದ ಕೆಲ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬರೋಕು ಭಯ ಪಡ್ತಿದ್ದಾರೆ ಎನ್ನಲಾಗಿದೆ. ಕೆನಡಾ ಪಶ್ಚಿಮ ಮತ್ತು ಯುಎಸ್ ಪೆಸಿಫಿಕ್ ವಾಯುವ್ಯ ಪ್ರದೇಶದಲ್ಲಿ ದಾಖಲಾದ ಅತೀ ಹೆಚ್ಚಿನ ತಾಪಮಾನ ಇದಾಗಿದೆ. ಮೃತಪಟ್ಟವರ ಪೈಕಿ ಹೆಚ್ಚಿನವರು ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದವರು ಎಂದು ಸರ್ಕಾರ ಮಾಹಿತಿ ನೀಡಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಗಿದ್ದು ಕೆನಡಾದ ಕಳವಳಕ್ಕೆ ಕಾರಣವಾಗಿದೆ.

The post ವಿಶ್ವದ ದೊಡ್ಡಣ್ಣನಿಗೆ ‘ಶಾಕ್’ ಕೊಟ್ಟ ಸೂರ್ಯದೇವ.. ಕೆನಡದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವು appeared first on News First Kannada.

Source: newsfirstlive.com

Source link