ಮಂಜು-ದಿವ್ಯಾ ಸ್ನೇಹದಲ್ಲಿ ಬಿರುಕು.. ಕಾರಣ ಶಮಂತ್‌.. ಹೇಗೆ?

ಮಂಜು-ದಿವ್ಯಾ ಸ್ನೇಹದಲ್ಲಿ ಬಿರುಕು.. ಕಾರಣ ಶಮಂತ್‌.. ಹೇಗೆ?

ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್‌ ಸ್ನೇಹದಲ್ಲಿ ಬಿರುಕು ಬಿಟ್ಟಿದೆ. ಫ್ರೆಂಡ್‌ಶಿಫ್‌ನಲ್ಲಿ ವೈಮನಸ್ಸು ಬಂದಿರೋದು ನಿಜವಾದ್ರೂ ನೀವು ಅಂದುಕೊಂಡಿರೋ ಕಾರಣ ಕಾರಣವೇ ಅಲ್ಲ. ಇವರಿಬ್ಬರ ಸ್ನೇಹದಲ್ಲಿ ಮನಸ್ತಾಪ ಮೂಡಲು ಚಕ್ರವರ್ತಿ ಚಂದ್ರಚೂಡ್‌ ಹಾಗೂ ಪ್ರಶಾಂತ್ ಸಂಬರಗಿ ಕಾರಣ ಅನ್ನೋದು ಸಹಜವಾಗಿ ಬರೋ ಉತ್ತರ. ಆದ್ರೆ, ಆಶ್ಚರ್ಯ ಎನ್ನುವಂತೆ ಇದಕ್ಕೆ ಕಾರಣವಾಗಿರೋದು ಬ್ರೋ ಗೌಡ ಅಲಿಯಾಸ್‌ ಶಮಂತ್‌.

ಮಂಜು ಹಾಗೂ ದಿವ್ಯಾ ಸುರೇಶ್‌ ಶಮಂತ್ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ಅವರು ಇನ್ಮುಂದೆ ಮೊದಲಿನಂತೆ ಇರೋದು ಡೌಟೇ. ಮೊಟ್ಟೆ ಟಾಸ್ಕ್ ನಡೆಯೋ ವೇಳೆ ಶಮಂತ್ ಆಟವಾಡುವಾಗ ದಿವ್ಯಾ ಸುರೇಶ್ ಅವನಿಗಾಗಿ ಪ್ರೇಯರ್‌ ಮಾಡಿದ್ದು ಮಂಜುನಾ ಕೆರಳಿಸಿದೆ. ಈ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಚರ್ಚೆಯೇ ನಡೆಯಿತು.

 

 

ದಿವ್ಯಾ ಸುರೇಶ್‌: ಸ್ಟಾರ್ಟಿಂಗ್‌ ನೀನು ಮಾಡಿದೆ. ದಿವ್ಯಾ ಮಾಡಿದ್ಲು, ಶಮಂತ್ ಮಾಡಿದ. ನಾನು ಆಗ ಪ್ರೇಯರ್‌ ಮಾಡ್ತಾನೇ ಇದ್ದೆ. ಅವನು ಮಾಡಿದ್ದಕ್ಕೆ ನಾನು ದಿವ್ಯಾ ಸುರೇಶ್‌:. ಓಕೆ ನಾನು ಅದೇ ಥರಾ ಮಾಡಿದ್ದಿದ್ರೆ, ನೀನು ಗೆದ್ದಾಗ ನಾನು ಅಷ್ಟು ಖುಷಿಪಡೋ ಅವಶ್ಯಕತೆ ಏನಿತ್ತು?

ಮಂಜು ಪಾವಗಡ: ಗೊತ್ತಿಲ್ಲ ಓಕೆನಾ? ನನಗೆ ಹೇಗೆ ಆಗ್ಬೇಡ. ನಾನು ಹೇಳಿದ್ದು.. ಓಕೆ.. ಶಮಂತ್‌ ಅಂತಾ ಹೆಸರು ಹೇಳಿದ ಕೂಡಲೇ ನೀನು ಮಾಡಿದ್ದು. ಪ್ರೇಯರ್ ಮಾಡ್ದೆ ಓಕೆ. ಅವನಿಗೆ ಮೊಟ್ಟೆ ಸಿಕ್ಕಿದ ಕೂಡಲೇ ನೀನು ಡಿಸಪಾಯಿಂಟ್ ಆದೆ. ನನಗೆ ಎಷ್ಟು ಬೇಜಾರ್ ಆಗ್ಬೇಡಾ? ಏಯ್‌… ಏನ್‌ ಗುರು ಇದು. ನಾಲ್ಕು ದಿನದಿಂದ ಅಷ್ಟಾದ್ರೂ ನಿನ್ನ ಜೊತೆ ಮಾತನಾಡೋದನ್ನ ಬಿಟ್ಟಿದ್ದೀನಾ? ಇಲ್ಲಾ ಅಲ್ವಾ?

ದಿವ್ಯಾ ಸುರೇಶ್‌: ಓಕೆ ಮಂಜ ನಾನೇನಾದ್ರೂ ನಿನಗೆ ಕಂಪ್ಲೇಂಟ್ ಮಾಡಿದ್ನಾ? ನೀನು ಶುಭಾ ಪೂಂಜಾಗೂ ಹೀಗೇ ಸಪೋರ್ಟ್ ಮಾಡ್ತಿಯಾ ಅಲ್ವಾ? ನಾನೇನಾದ್ರೂ ಹೇಳ್ತೀನಾ ನಿಂಗೇ. ಅವರು ಅದೇ ಆಟ ಆಡ್ಬೇಕಾದ್ರೆ, ನನಗಿಂತ ಜಾಸ್ತಿ ಸಪೋರ್ಟ್ ಮಾಡ್ತಿಯಾ ನೀನು.

ಮಂಜು ಪಾವಗಡ: ಅಂದ್ರೆ ನೀನ್ ಹೇಳ್ತಿರೋದು ನೀನು ಮಾಡಿರೋದು ತಪ್ಪಲ್ಲಾ ಅಂತಾ?

ದಿವ್ಯಾ ಸುರೇಶ್‌: ಓಕೆ ನನಗೊಂದು ಆ್ಯನ್ಸರ್ ಕೊಡು.. ಒಬ್ಬರನ್ನ ಸಪೋರ್ಟ್ ಮಾಡೋದು ತಪ್ಪಾ?

ಮಂಜು ಪಾವಗಡ: ತಪ್ಪಿಲ್ಲ.. ತಪ್ಪು ಅಂತಾ ಹೇಳಿದ್ನಾ?

ದಿವ್ಯಾ ಸುರೇಶ್‌: ತೊಂದರೆ ಏನ್ ಹೇಳು..? ಈಗ ಹೇಳು..? ಶಮಂತ್ ಹೋದಾಗ ನಾನು ಹಂಗೇ ಮಾಡ್ದೆ ನೀನು ಹೋದಾಗ ಹಂಗೇ ಮಾಡಿಲ್ಲಾ ಅಂತಾನ?

ಮಂಜು ಪಾವಗಡ: ಹೌದು..

ದಿವ್ಯಾ ಸುರೇಶ್‌: ಓಕೆ.. ಅದೇ ಶಮಂತ್ ಅಲ್ಲ ಪ್ರಿಯಾಂಕಾಯಿಂದ ಶುರುವಾಗಿದ್ರೂ ನಾನು ಹಂಗೇ ಮಾಡ್ತಿದ್ದೆ.

ಮಂಜು ಪಾವಗಡ: ನನಗೆ ಇನ್ನೊಬ್ಬರ ಮ್ಯಾಟರ್ ಬೇಡ.

ದಿವ್ಯಾ ಸುರೇಶ್‌: ನನ್ನ ಬಗ್ಗೆನೇ ನಾನು ಹೇಳ್ತಿರೋದು. ಫಸ್ಟ್ ಯಾರಿಂದಾದ್ರೂ ಸ್ಟಾರ್ಟ್ ಆಗಿದ್ರೂ ನಾನು ಹಂಗೇ ಮಾಡ್ತಿದ್ದೆ. ಶಮಂತ್ ಅಂತಾನೇ ಅಲ್ಲ. ಯಾರಿಂದ ಸ್ಟಾರ್ಟ್ ಆಗಿದ್ರೂ ನಾನು ಹಂಗೇ ಮಾಡ್ತಿದ್ದೆ. ನೀನು ಇದೊಂದು ವಿಷ್ಯ ಇಟ್ಕೊಂಡು ಇಷ್ಟು ದಿನ ಆಟವಾಡಿದ್ದು.. ಇಷ್ಟು ದಿನ ಸಪೋರ್ಟ್ ಮಾಡಿದ್ದು ಇಷ್ಟೆನಾ ಅಂತಾ ಮಾತನಾಡ್ತಿದೆಯೆಲ್ಲಾ.. ಫಸ್ಟ್‌ ಇನ್ನಿಂಗ್ಸ್‌ನಲ್ಲಿ ಹೇಗಿದ್ದೆ? ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಹೇಗಿದ್ಯಾ ಅಂತಾ ನಿನಗೆ ಗೊತ್ತು. ಇಷ್ಟು ದಿನ ಇದ್ದದ್ದು ಸುಮ್ನೆನಾ? ಖುಷಿ ಖುಷಿಯಾಗಿದ್ದು, ನಾನು ನೀನು ಫ್ರೆಂಡ್ಸ್ ಆಗಿದ್ದು ಸುಮ್ನೆನಾ?

ಮಂಜು ಪಾವಗಡ: ಸುಮ್ನೆ ಅಂತಾ ನಾನ್ ಹೇಳ್ತಿಲ್ಲಾ? ನಾವು ಈಗಲೂ ಫ್ರೆಂಡ್ಸ್.. ನಾನು ಆ ಜಾಗದಲ್ಲಿ ಇದ್ದಾಗ ಅವನಿಗೆ ಮಾಡಿದಾಗ ನನಗೆ ಹೇಗೇ ಅನಿಸುತ್ತೆ ಹೇಳು?

ದಿವ್ಯಾ ಸುರೇಶ್‌: ಅವನಿಗಿಂತ ಜಾಸ್ತಿ ನಿನಗೆ ಮಾಡಿದ್ದೇನೆ ಮಂಜ. ಅವನಿಗೆ ಅಲ್ಲ. ನೀನು ವಿನ್ ಆದಾಗ ಎಷ್ಟು ಖುಷಿಪಟ್ಟಿದ್ದೇನೆ ಅಂತಾ ನಿನಗೆ ಗೊತ್ತು. ಅದನ್ನ ನೋಡ್ತಿಲ್ಲ ನೀನು. ನಿನಗೂ ಗೊತ್ತು ನಿನಗೆ ಮೊಟ್ಟೆ ಬರದಿದ್ದಾಗ ನನಗೆ ಎಷ್ಟು ಖುಷಿಯಾಗ್ತಿತ್ತು ಅಂತಾ ಸುಳ್ಳು ಹೇಳ್ಬೇಡಾ.. ? ನನಗೆ ಗೊತ್ತು ನಿನಗೆ ಯಾರೋ ಹೇಳಿಕೊಟ್ಟಿದ್ದಾರೆ ಇದನ್ನ. ಆಟ ಆಡ್ಬೇಡಾ ನನ್ನ ಜೊತೆ ನಿಜವಾಗ್ಲೂ ಹೇಳ್ತೀನಿ. ಮುಂಚೆ ಇರೋ ಥರಾ ನೀನು ಮಾತನಾಡ್ತಿದ್ಯಾ?

ಮಂಜು ಪಾವಗಡ: ಮುಂಚೆಯಿದ್ದಂಗೆ ಇರೋಕೆ ಆಗಲ್ಲ.. ನೀನು ಮಾಡಿದ್ದು ತಪ್ಪಲ್ಲಾ ಹೌದು ತಾನೇ. ತಪ್ಪಿಲ್ಲ.. ಫೈನ್ ಬಿಟ್ಹಾಕೂ..

ದಿವ್ಯಾ ಸುರೇಶ್: ನಾನು ಮಾಡಿದ್ದು ತಪ್ಪು ಅಂತಾ ನಿನಗೆ ಅನಿಸ್ತಿದೆ ಅಲ್ವಾ? ಸಾರಿ..ನಿನ್ನ ಪ್ರಕಾರ ಶಮಂತ್ ಇದ್ದಾನೆ ಅಂತಾ ಮಾಡಿದ್ದೇನೆ ಅಂತಾನಾ.?

ಮಂಜು ಪಾವಗಡ: ಹೌದು, ಅದನ್ನೇ ಹೇಳ್ತಿದ್ದೀನಿ ನಾನು..

ದಿವ್ಯಾ ಸುರೇಶ್‌ : ನಾನು ನಾಳೆಯಿಂದ ಮಾತನಾಡೋಲ್ಲ.

ಮಂಜು ಪಾವಗಡ: ನಾನು ಮುಂಚೆಯಿಂದಲೂ ಯಾವತ್ತೂ ಹೇಳಿಲ್ಲ. ಇವರ ಜೊತೆ ಮಾತನಾಡ್ಬೇಡ ಅಂತಾ ಹೇಳಿದ್ದೀನಾ..? ಮಾತನಾಡೋದೇ ಬೇಡ.

ದಿವ್ಯಾ ಸುರೇಶ್‌ : ನಾಳೆಯಿಂದ ಮಾತನಾಡೋಲ್ಲ… ಓಕೆನಾ..? ಈ ವಾರ ಮನೆಗೆ ಹೋಗ್ತೀನಿ… ನಾಳೆಯಿಂದ ಫುಲ್ ಸೈಲೆಂಟ್ ಆಗಿ ಇರ್ತೀನಿ. ನಿನ್ನ ಮಾತನಾಡಿಲ್ಲ ಅಂದ್ರೆ ನಿನ್ನ ಫ್ಯಾನ್ಸ್‌ ನನಗೆ ವೋಟ್ ಮಾಡೋಲ್ಲ. ನಾನು ಮನೆಗೆ ಹೋಗ್ತೀನಿ.. ಬಾಯ್‌..

ಇಷ್ಟಕ್ಕೆ ಇದು ಮುಗಿಯಲಿಲ್ಲ. ಮಧ್ಯರಾತ್ರಿ ಇಷ್ಟೆಲ್ಲಾ ಆದ್ಮೇಲೆ ಬೆಳಗ್ಗೆ ಮಂಜು ಪಾವಗಡ ಶುಭಾ ಪೂಂಜಾಗೆ ಈ ವರದಿ ಒಪ್ಪಿಸಿದರು. ಏನೆಲ್ಲಾ ಆಯ್ತು ಅಂತಾ ಹೇಳಿದರು. ಇದೆಲ್ಲಾ ನೋಡಿದ್ರೆ ಮಂಜು ಹಾಗೂ ದಿವ್ಯಾ ಸುರೇಶ್‌ ನಡುವೆ ಎಲ್ಲವೂ ಸರಿಯಿಲ್ಲ ಅಂತಾ ಕಾಣಿಸ್ತಿದೆ. ಇವರ ಸ್ನೇಹ ಮೊದಲಿನಂತೆ ಆಗುತ್ತೋ ಇಲ್ವೋ ಅನ್ನೋದನ್ನ ಈಗ್ಲೇ ಹೇಳೋದು ಕಷ್ಟವೇ. ಆದರೇ ನಮ್ಗೂ ಖುಷಿನೇ.

The post ಮಂಜು-ದಿವ್ಯಾ ಸ್ನೇಹದಲ್ಲಿ ಬಿರುಕು.. ಕಾರಣ ಶಮಂತ್‌.. ಹೇಗೆ? appeared first on News First Kannada.

Source: newsfirstlive.com

Source link