ನನಗೆ ಮನೆಯಿಂದ ಪ್ರೆಷರ್ ಹಾಕ್ತಿದ್ದಾರೆ : ವೈಷ್ಣವಿ ಬಳಿ ಸತ್ಯ ಬಾಯ್ಬಿಟ್ಟ ಶುಭಾ ಪೂಂಜಾ

ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ಹಲವು ಟಾಸ್ಕ್‌ಗಳಲ್ಲಿ ಕೆಲವು ಸ್ಪರ್ಧಿಗಳು ಗೆದ್ದಿದ್ದಾರೆ, ಮತ್ತೆ ಕೆಲವರು ಸೋತಿದ್ದಾರೆ. ಆದ್ರೆ ಎಲ್ಲರೂ ಒಂದಲ್ಲಾ ಒಂದು ಟಾಸ್ಕ್‌ನಲ್ಲಿ ಗೆದ್ದಿದ್ದಾರೆ. ಆದರೆ ಶುಭಾ ಪೂಂಜಾರವರು ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರು. ಒಂದು ಟಾಸ್ಕ್‌ಗಳಲ್ಲಿ ಕೂಡ ಇಲ್ಲಿಯವರೆಗೂ ಗೆದ್ದಿಲ್ಲ. ಹೀಗಾಗಿ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ಟಾಸ್ಕ್‌ನಲ್ಲಿ ಆದರೂ ಗೆದ್ದು ಬರುವಂತೆ ಮನೆಯವರು ಪ್ರೆಷರ್ ಹಾಕುತ್ತಿದ್ದಾರೆ ಎಂದು ಶುಭಾ ಪೂಂಜಾರವರು ವೈಷ್ಣವಿ ಬಳಿ ಹೇಳಿಕೊಂಡಿದ್ದಾರೆ.

ಬುಧವಾರ ದೊಡ್ಮನೆಯ ಲಿವಿಂಗ್ ಏರಿಯಾದಲ್ಲಿ ಶುಭಾಪೂಂಜಾ ಹಾಗೂ ವೈಷ್ಣವಿ ಕುಳಿತುಕೊಂಡಿರುತ್ತಾರೆ. ಈ ವೇಳೆ ನಮ್ಮ ಅಮ್ಮ, ಸುಮಂತ್, ಅಪ್ಪ ಎಲ್ಲರೂ ನನಗೆ ಬೈದಿದ್ದಾರೆ. ಈ ಬಾರಿ ಒಂದು ಟಾಸ್ಕ್ ಆದರೂ ಗೆದ್ದುಕೊಂಡು ಬಾ ಎಂದು ತುಂಬಾ ಪ್ರೆಷರ್ ಹಾಕಿದ್ದಾರೆ. ಆದರೆ ನನಗೆ ಒಂದು ಗೆಲ್ಲುವುದಕ್ಕೆ ಆಗುತ್ತಿಲ್ಲ. ಯಾವತ್ತು ಪ್ರೆಷರ್ ಹಾಕಬಾರದು ಎಂದು ಶುಭಾ ಹೇಳುತ್ತಾರೆ. ಆಗ ವೈಷ್ಣವಿ ಪ್ರೆಷರ್ ಇಲ್ಲದೆಯೇ ಲಾಸ್ಟ್ ಇನ್ನಿಂಗ್ಸ್ ಎಷ್ಟು ಚೆನ್ನಾಗಿ ಆಡುತ್ತಿದ್ರಿ. ಎಷ್ಟು ಟಾಸ್ಕ್ ಗೆದ್ರಿ ಎಂದು ರೇಗಿಸುತ್ತಾರೆ.

ಇದಕ್ಕೆ ಶುಭಾ, ಒಂದು ಇಲ್ಲ. ಆದರೆ ಅದೇ ಬೆಟರ್ ಆಗಿತ್ತು. ಆದರೆ ಈಗ ನನಗೆ ಪ್ರೆಷರ್ ಹಾಕಿದ್ದಾರೆ. ಒಂದು ಸಾರಿ ಅಥವಾ ಎರಡು ಸಾರಿ ಹೇಳಿ ಬಿಟ್ಟು ಬಿಡಬೇಕು. ಆದರೆ ನಾನು ಬಿಗ್‍ಬಾಸ್ ಮನೆಗೆ ವಾಪಸ್ ಹೋಗುತ್ತಿದ್ದೇನೆ ಎಂದಾಗ ದಿನ ಪ್ರೆಷರ್ ಹಾಕುತ್ತಿದ್ದರು. ಟಾಸ್ಕ್ ಚೆನ್ನಾಗಿ ಆಡು, ಯಾವುದಾದರೂ ಒಂದು ಗೆಲ್ಲು, ಯಪ್ಪಾ ನನಗೆ ಎಷ್ಟು ಮೆಂಟಲಿ ಪ್ರೆಷರ್ ಎನ್ನುತ್ತಾರೆ.

blank

ಈ ವೇಳೆ ವೈಷ್ಣವಿ ನಾನು ಮನಸ್ಸು ಮಾಡಿದರೆ ಎಲ್ಲಾ ಟಾಸ್ಕ್‌ನನ್ನು ಕೂಡ ಗೆದ್ದು ಬಿಡುತ್ತೇನೆ ಎಂದು ಹೇಳಬೇಕಿತ್ತು ಎನ್ನುತ್ತಾರೆ. ನಾನು ಬಾಲ್ ಟಾಸ್ಕ್ ಆದರೂ ಗೆಲ್ಲಬಾರದಾ ಎಂದು ಶುಭಾ ಹೇಳುತ್ತಾ ನಗುತ್ತಾರೆ. ನಂತರ ಇನ್ನೂ ಎಷ್ಟು ವಾರಗಳಿದೆ, ಎಷ್ಟು ಟಾಸ್ಕ್‌ಗಳಿರಬಹುದು, ವಾಪಸ್ ಹೋಗುವಷ್ಟರಲ್ಲಿ ಒಂದಾದರೂ ವಿನ್ ಆಗಿ ಹೋಗಬೇಕು ಎಂದು ಹೇಳಿದ್ದಾರೆ.

The post ನನಗೆ ಮನೆಯಿಂದ ಪ್ರೆಷರ್ ಹಾಕ್ತಿದ್ದಾರೆ : ವೈಷ್ಣವಿ ಬಳಿ ಸತ್ಯ ಬಾಯ್ಬಿಟ್ಟ ಶುಭಾ ಪೂಂಜಾ appeared first on Public TV.

Source: publictv.in

Source link