ದೇಶದಲ್ಲಿಂದು 48,786 ಜನರಿಗೆ ಕೊರೊನಾ.. 61,588 ಮಂದಿ ಡಿಸ್ಚಾರ್ಜ್​​

ದೇಶದಲ್ಲಿಂದು 48,786 ಜನರಿಗೆ ಕೊರೊನಾ.. 61,588 ಮಂದಿ ಡಿಸ್ಚಾರ್ಜ್​​

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 48,786 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 3,04,11,634ಕ್ಕೆ ತಲುಪಿದೆ.

ಇಂದು 61,588 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,94,88,918ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1005 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,99,459 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 3,04,11,634
ಒಟ್ಟು ಡಿಸ್ಚಾರ್ಜ್ ಆದವರು: 2,94,88,918
ಒಟ್ಟು ಸಾವುಗಳು: 3,99,459
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 5,23,257
ಈವರಗೆ ವ್ಯಾಕ್ಸಿನ್ ಪಡೆದವರು: 33,57,16,019

 

The post ದೇಶದಲ್ಲಿಂದು 48,786 ಜನರಿಗೆ ಕೊರೊನಾ.. 61,588 ಮಂದಿ ಡಿಸ್ಚಾರ್ಜ್​​ appeared first on News First Kannada.

Source: newsfirstlive.com

Source link