ಬೆಂಗಳೂರು ಕರಗದ ₹21 ಲಕ್ಷ ಉಳಿತಾಯ ಹಣ ದುರ್ಬಳಕೆ ಆರೋಪ: ಕೇಸ್ ದಾಖಲು

ಬೆಂಗಳೂರು ಕರಗದ ₹21 ಲಕ್ಷ ಉಳಿತಾಯ ಹಣ ದುರ್ಬಳಕೆ ಆರೋಪ: ಕೇಸ್ ದಾಖಲು

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಉಳಿತಾಹ ಹಣವಾದ 21 ಲಕ್ಷ ರೂಪಾಯಿ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಧರ್ಮರಾಯಸ್ವಾಮಿ ದೇವಸ್ಥಾನದ ಸಹಾಯಕ ಆಯುಕ್ತ ವೆಂಕಟರಮಣ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಈ ಹಿಂದಿನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಗೋಪಾಲ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ದೇವಸ್ಥಾನಕ್ಕೆ ಪ್ರಸ್ತುತ ಯಾವುದೇ ಸಮಿತಿ ರಚನೆಯಾಗಿಲ್ಲ. ಜಿಲ್ಲಾಧಿಕಾರಿ, ಆಡಳಿತಾಧಿಕಾರಿಯನ್ನ ನೇಮಕ ಮಾಡಿದೆ. ಪ್ರತಿ ವರ್ಷ ಕರಗ ಶಕ್ತ್ಯೋತ್ಸವ ನಡೆಯುತ್ತದೆ. ಈ ಹಿನ್ನೆಲೆ 2016ರಲ್ಲಿ ಬಿಬಿಎಂಪಿಯಿಂದ ಅನುದಾನ ಬಿಡುಗಡೆಯಾಗಿತ್ತು. ಕರಗ ಉತ್ಸವಕ್ಕೆ ಖರ್ಚು ಮಾಡಿ ಉಳಿದಿದ್ದ 21.5 ಲಕ್ಷ ರೂಪಾಯಿಗಳನ್ನ ನಿಶ್ಚಿತ ಠೇವಣಿ ಇಟ್ಟು 2018ರಲ್ಲಿ ಬಾಂಡ್ ಪಡೆಯಲಾಗಿದೆ.

ಸಮಿತಿ‌ ಇಲ್ಲದ ಕಾರಣ ನಿಯಮಾನುಸಾರ ಠೇವಣಿ ಬಾಂಡ್​​ನ ಆಡಳಿತಾಧಿಕಾರಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ರಾಜಗೋಪಾಲ್ ಎರಡು ಪತ್ರ ಬರೆದಿದ್ದಾರೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತನಿಖೆ ಕೈಗೊಳ್ಳಬೇಕೆಂದು ವೆಂಕಟರಮಣ ಅವರು ಮನವಿ ಮಾಡಿದ್ದಾರೆ.

The post ಬೆಂಗಳೂರು ಕರಗದ ₹21 ಲಕ್ಷ ಉಳಿತಾಯ ಹಣ ದುರ್ಬಳಕೆ ಆರೋಪ: ಕೇಸ್ ದಾಖಲು appeared first on News First Kannada.

Source: newsfirstlive.com

Source link