ಗ್ರಾ.ಪಂಚಾಯಿತಿ ಸದಸ್ಯನ ಮಗನ ಖಾತೆಗೆ ಬಿತ್ತು ಲಕ್ಷ ಲಕ್ಷ ಹಣ.. ಪಿಡಿಓನೇ ನೀಡಿದ್ರಾ ಕುಮ್ಮಕ್ಕು..?

ಗ್ರಾ.ಪಂಚಾಯಿತಿ ಸದಸ್ಯನ ಮಗನ ಖಾತೆಗೆ ಬಿತ್ತು ಲಕ್ಷ ಲಕ್ಷ ಹಣ.. ಪಿಡಿಓನೇ ನೀಡಿದ್ರಾ ಕುಮ್ಮಕ್ಕು..?

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ದೇವರಗುಡಿಪಲ್ಲಿ ಪಂಚಾಯಿತಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯ, ಮಕ್ಕಳು ಹಾಗೂ ಸ್ವತಃ ಪಿಡಿಓ ವಿರುದ್ಧ ಲಕ್ಷಾಂತರ ರೂ ಹಣ ಗೋಲ್ಮಾಲ್ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರೂ ಸ್ವಚ್ಛತೆಯತ್ತ ಗಮನಹರಿಸಿದ್ರೆ ಇತ್ತ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಚರಂಡಿ ಸ್ವಚ್ಛತೆ,‌ ಬ್ಲೀಚಿಂಗ್, ಸ್ಯಾನಿಟೈಸರ್, ಪಿನಾಯಿಲ್ ಹೆಸರಲ್ಲಿ 16.5 ಲಕ್ಷ ಗುಳುಂ ಮಾಡಿದ್ದಾರೆ ಎನ್ನಲಾಗಿದೆ.

ಪಂಚಾಯಿತಿಯ ಹಿಂಬಾಗವೇ ಚರಂಡಿಗಳು ಗಬ್ಬು ನಾರುತ್ತಿದ್ದರೆ ಇತ್ತ ಮೂರ್ನಾಲ್ಕು ಬಾರಿ ಸ್ವಚ್ಚತೆ ಮಾಡಿರೋದಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೊರೊನಾ ಸೋಂಕು ನಿವಾರಣೆ ಹೆಸರಲ್ಲೂ ಹಣ ಕೊಳ್ಳೆಹೊಡೆದಿದ್ದಾರೆ ಎನ್ನಲಾಗಿದ್ದು ಗ್ರಾಮ ಪಂಚಾಯಿತಿ ಸದಸ್ಯನ ಮಗನ ಖಾತೆಗೆ ಲಕ್ಷಾಂತರ ಹೂ ಜಮೆಯಾಗಿದೆಯಂತೆ.

ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ಪಿಡಿಓ ಶಂಕರಪ್ಪರಿಂದಲೇ ಅಕ್ರಮಕ್ಕೆ ಕುಮ್ಮಕ್ಕು ಸಿಕ್ಕಿದೆ.. ಎರಡು ಪಂಚಾಯತಿಗಳ ಕಾರ್ಯಭಾರ ಹೊತ್ತಿರುವ ಪಿಡಿಓ ಶಂಕರಪ್ಪ ಇದೇ ಗ್ರಾಮಪಂಚಾಯಿತಿಯವರಾಗಿದ್ದು ಹಣ ಲೂಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

The post ಗ್ರಾ.ಪಂಚಾಯಿತಿ ಸದಸ್ಯನ ಮಗನ ಖಾತೆಗೆ ಬಿತ್ತು ಲಕ್ಷ ಲಕ್ಷ ಹಣ.. ಪಿಡಿಓನೇ ನೀಡಿದ್ರಾ ಕುಮ್ಮಕ್ಕು..? appeared first on News First Kannada.

Source: newsfirstlive.com

Source link