‘ನಾನು ಕಾಂಗ್ರೆಸ್ ಸೇರಿ ಚೀಫ್ ಮಿನಿಸ್ಟರ್ ಆಗ್ಲಿಲ್ವ? ಮೂಲ-ವಲಸಿಗ ಎಲ್ಲಿಂದ ಬತ್ತದಪ್ಪಾ?

‘ನಾನು ಕಾಂಗ್ರೆಸ್ ಸೇರಿ ಚೀಫ್ ಮಿನಿಸ್ಟರ್ ಆಗ್ಲಿಲ್ವ? ಮೂಲ-ವಲಸಿಗ ಎಲ್ಲಿಂದ ಬತ್ತದಪ್ಪಾ?

ಮೈಸೂರು: ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಗೊಂದಲ‌ ಇಲ್ಲ‌. ಮೂಲ ವಲಸಿಗ ಅನ್ನೋ ಪ್ರಶ್ನೆಯೇ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು ಮೂಲ ವಲಸಿಗ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಪ್ರಸ್ತಾಪಿಸಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ರು. ಇಬ್ರಾಹಿಂ ಹೇಳಿಲ್ವೇನ್ರಿ ಸೊಸೆ ಮನೆಗೆ ಬಂದ ಮೇಲೆ‌ ಅತ್ತೆ ಸೊಸೆ ಇಬ್ಬರೂ ಒಂದೆ. ನಾನು ಕಾಂಗ್ರೆಸ್ ಸೇರಿ ಚೀಫ್ ಮಿನಿಸ್ಟರ್ ಆದ ಮೇಲೆ ಮೂಲ ಎಲ್ಲಿಂದ ಬತ್ತದಪ್ಪಾ? ಅದೆಲ್ಲಾ ಏನಿಲ್ಲ ನಡೀರಿ.. ಎಂದರು.

ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್​​ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ ಎಂದರು. ಸಿ.ಎಂ ಇಬ್ರಾಹಿಂ ಹೇಳಿಕೆಯನ್ನ ಉಲ್ಲೇಖಿಸಿದ ಸಿದ್ದರಾಮಯ್ಯ, ಸೊಸೆ ಮನೆಗೆ ಬರುವವರೆಗೂ ಹೊರಗಿನವಳು. ಬಂದ ಮೇಲೆ ಸೊಸೆ ಮನೆಯವಳೆ ಆಗುತ್ತಾಳೆ. ಅದೇ ರೀತಿ ನಾನು ಹೊರಗಿನಿಂದ ಬಂದವನು. ಕಾಂಗ್ರೆಸ್ ಗೆ ಬಂದ ಮೇಲೆ‌ ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮನೆಯವನೇ. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶದ ನಂತರ‌ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ಚುನಾವಣೆ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ ಎಂದು ತಿಳಿಸಿದ್ರು

ಇದೇ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಪಿಯುಸಿ ಎಕ್ಸಾಂ ಬೇಡ ಎಂದಾಗ ಎಸ್​​ಎಸ್​​ಎಲ್​ಸಿ ಎಕ್ಸಾಂ ಮಾಡುವುದರಲ್ಲಿ ಅರ್ಥ ಏನಿದೆ? ನಾನು ಮೊದಲಿಂದಲೂ ಹೇಳಿದ್ದೇನೆ ಬೇಡ ಅಂತ. ಬಿಎಸ್‌ವೈ ಸಂಪುಟದಲ್ಲಿ ಸಮನ್ವಯತೆಯೇ ಇಲ್ಲ. ಸುಧಾಕರ್‌‌ ನನಗೆ ಗೊತ್ತೆ ಇಲ್ಲ ಅಂತಾರೆ ಎಂದರು.

ರಾಜ್ಯದಲ್ಲಿ ಕೋವಿಡ್ ಲಸಿಕೆ ಕುರಿತು ಸಚಿವ ಸುಧಾಕರ್ ಸುಳ್ಳು ಹೇಳ್ತಿದ್ದಾನೆ. ದಾಸ್ತಾನಿದ್ರೆ ಜನ ಯಾಕೆ ಶಾಪ ಹಾಕ್ತ ಹೋಗ್ತಿದ್ರು? ದಾಸ್ತಾನು ಇದ್ರೆ ಜನ ಕ್ಯೂನಲ್ಲಿ ಯಾಕೆ‌ ನಿಲ್ಲಬೇಕಿತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು.

ಮೂಢ ನಂಬಿಕೆಯಿಂದ ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗಿಲ್ಲ
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ. ಸಿಎಂ ಸ್ಥಾನ ಕಳೆದುಕೊಳ್ತೀನಿ ಎಂಬ ಮೂಢ ನಂಬಿಕೆಯಿಂದ ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗ್ತಿಲ್ಲ. ನಾನು ಸಿಎಂ ಆಗಿದ್ದಾಗ 12 ಸಲ ಹೋಗಿದ್ದೆ. ಕೊರೊನಾದಿಂದ ಸತ್ತವರಿಗೆ ಐದು ಲಕ್ಷ ಪರಿಹಾರ ಕೊಡುವಂತೆ ಮೂರು ಪತ್ರ ಬರೆದಿದ್ದೇನೆ. ಸುಪ್ರಿಂ ಕೋರ್ಟ್ ಕೂಡ ಹೇಳಿದೆ ಪರಿಹಾರ ಕೊಡಿ ಅಂತ‌. ಚರ್ಚೆ ಮಾಡೋಣ ಅಂದ್ರೆ ಅಧಿವೇಶನವನ್ನೇ ಕರೆಯುತ್ತಿಲ್ಲ. ಅಧಿವೇಶನ ಕರೆದ್ರೆ ನಿಜವಾದ ಬಣ್ಣ ಬಯಲಾಗುತ್ತೆ ಅಂತ ಭಯ ಅವರಿಗೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಇನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದ ಗೊಂದಲದ ಬಗ್ಗೆ ಮಾತನಾಡಿದ ಅವರು, ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಶ್ರೀನಿವಾಸ್ ನಮ್ಮ ಮನೆಗೆ ಬಂದಿದ್ರು, ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ. ಇದರಲ್ಲಿ ನನ್ನದಾಗಲಿ ಡಿಕೆ ಶಿವಕುಮಾರ್​ ಅವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಗೊಂದಲಗಳು ಬೇಡ.
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಎಂದರು.

The post ‘ನಾನು ಕಾಂಗ್ರೆಸ್ ಸೇರಿ ಚೀಫ್ ಮಿನಿಸ್ಟರ್ ಆಗ್ಲಿಲ್ವ? ಮೂಲ-ವಲಸಿಗ ಎಲ್ಲಿಂದ ಬತ್ತದಪ್ಪಾ? appeared first on News First Kannada.

Source: newsfirstlive.com

Source link