ಅದ್ಭುತ ಅನುಭವ, ನೂತನ ಪಾತ್ರ: ಸುದೀಪ್

ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ವಾಯ್ಸ್ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಸಿನಿಮಾಕ್ಕೆ ವಾಯ್ಸ್ ಡಬ್ಬಿಂಗ್ ಆರಂಭಿಸಿರುವುದ ಬಗ್ಗೆ ತಿಳಿಸಿದ್ದ ಸುದೀಪ್, ಇದೀಗ ಚಿತ್ರದ ವಾಯ್ಸ್ ಡಬ್ಬಿಂಗ್ ಮುಗಿದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸುದೀಪ್, ವಿಕ್ರಾಂತ್ ರೋಣ ವಾಯ್ಸ್ ಡಬ್ಬಿಂಗ್‍ನನ್ನು ಮುಗಿಸಿದೆ. ಅದ್ಭುತವಾದ ಅನುಭವ, ನೂತನ ಪಾತ್ರ. 3ಡಿ ಆವೃತ್ತಿಯಲ್ಲಿರುವ ಕೆಲವು ಸ್ಯಾಂಪಲ್‍ಗಳನ್ನು ನೋಡಿದೆ. ವಿಆರ್ ಪ್ರಪಂಚದಲ್ಲಿ ನೋಡಿ ರೋಮಾಂಚನವಾಯಿತು. ಇದೀಗ ಸಾಂಗ್ ಶೂಟಿಂಗ್‍ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ಕೆ.ಮಂಜು ಬಂಡವಾಳ ಹೂಡಿದ್ದಾರೆ. ತ್ರಿಡಿ ಟೆಕ್ನಾಲಜಿಯಲ್ಲಿ ಮೂಡಿ ಬರುತ್ತಿರುವ ದೊಡ್ಡ ಬಜೆಟ್‍ನ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ವಿಶೇಷವೆಂದರೆ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ವಾಯ್ಸ್ ಡಬ್ ನೀಡುತ್ತಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಡಬ್ಬಿಂಗ್ ಶುರು ಮಾಡಿದ ನಟ ಕಿಚ್ಚ

 

View this post on Instagram

 

A post shared by KicchaSudeepa (@kichchasudeepa)

The post ಅದ್ಭುತ ಅನುಭವ, ನೂತನ ಪಾತ್ರ: ಸುದೀಪ್ appeared first on Public TV.

Source: publictv.in

Source link