ದುಬಾರಿ ದುನಿಯಾ: LPG ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ₹25 ಏರಿಕೆ

ದುಬಾರಿ ದುನಿಯಾ: LPG ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ₹25 ಏರಿಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಬರೆ ಬಿದ್ದಿದೆ. ಎಲ್​ಪಿಜಿ ಸಿಲಿಂಡರ್ ಬೆಲೆಯನ್ನ ಇಂದಿನಿಂದ 25 ರೂಪಾಯಿ 50 ಪೈಸೆ ಏರಿಕೆ ಮಾಡಲಾಗಿದೆ.

14.2 ಕೆ.ಜಿಯ ಡೊಮೆಸ್ಟಿಕ್​ ಸಿಲಿಂಡರ್​ನ ಬೆಲೆ ಸದ್ಯ ದೆಹಲಿಯಲ್ಲಿ 834.50 ರೂಪಾಯಿ ಇದೆ. ಇನ್ನು 19 ಕೆ.ಜಿಯ ಸಿಲಿಂಡರ್ ಬೆಲೆ 76 ರೂಪಾಯಿಯಷ್ಟು ಏರಿಕೆಯಾಗಿದ್ದು ಸಿಲಿಂಡರ್ ಒಂದಕ್ಕೆ 1,550 ರೂಪಾಯಿ ಆಗಲಿದೆ.

ಎಲ್​ಪಿಜಿ ಸಿಲಿಂಡರ್ ಬೆಲೆಯನ್ನ ಕಳೆದ ಫೆಬ್ರವರಿಯಲ್ಲಿ 25 ರೂಪಾಯಿ ಏರಿಕೆ ಮಾಡಲಾಗಿತ್ತು. ಮಾರ್ಚ್​ನಲ್ಲಿ 10 ರೂ. ಇಳಿಕೆ ಮಾಡಿದ್ದರೂ ನಂತರ ಏಪ್ರಿಲ್​ನಲ್ಲಿ ಮತ್ತೆ 10 ರೂ. ಏರಿಕೆ ಮಾಡಲಾಗಿತ್ತು. ಇದೀಗ ಏಕಾಏಕಿ 25 ರೂ. ಏರಿಕೆಯಾಗಿದ್ದು ಜನಸಾಮಾನ್ಯರು ಮತ್ತಷ್ಟು ಸಂಕಷ್ಟಪಡುವಂತಾಗಿದೆ.

ಎಲ್​ಪಿಜಿ ಸಿಲಿಂಡರ್ ಬೆಲೆ ಎಲ್ಲೆಲ್ಲಿ ಎಷ್ಟು..? (14.2 ಕೆಜಿ)

  • ದೆಹಲಿ- ₹834.50
  • ಮುಂಬೈ: ₹834.50
  • ಕೊಲ್ಕತ್ತಾ: ₹835.50
  • ಚೆನ್ನೈ: ₹850.50
  • ಬೆಂಗಳೂರು: ₹837.00

The post ದುಬಾರಿ ದುನಿಯಾ: LPG ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ₹25 ಏರಿಕೆ appeared first on News First Kannada.

Source: newsfirstlive.com

Source link