ಅವ್ರ್​ ಬಿಟ್​.. ಇವ್ರ್​ ಬಿಟ್..​ ಫಡ್ನವೀಸ್​​ರನ್ನೇ ನಂಬೋಕೆ ಇದೆ 8 ಕಾರಣ..? ಅದ್ಯಾವುದ್ ಗೊತ್ತಾ?

ಅವ್ರ್​ ಬಿಟ್​.. ಇವ್ರ್​ ಬಿಟ್..​ ಫಡ್ನವೀಸ್​​ರನ್ನೇ ನಂಬೋಕೆ ಇದೆ 8 ಕಾರಣ..? ಅದ್ಯಾವುದ್ ಗೊತ್ತಾ?

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜ್ಯ ಬಿಜೆಪಿ ನಾಯಕರಿಗಿಂತ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ರನ್ನೇ ಯಾಕೆ ನಂಬಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಹಾಗಾದ್ರೆ ರಮೇಶ್ ಜಾರಕಿಹೊಳಿಗೂ, ದೇವೇಂದ್ರ ಫಡ್ನವಿಸ್‌ಗೂ ಇರುವ ಸ್ನೇಹ ಸಂಬಂಧವಾದ್ರೂ ಏನು..? ನ್ಯೂಸ್‌ಫಸ್ಟ್‌ ಬಳಿ ರಮೇಶ್ ಜಾರಕಿಹೊಳಿ ಹಾಗೂ ದೇವೇಂದ್ರ ಫಡ್ನವಿಸ್ನರ ಸ್ನೇಹ ಸಂಬಂಧದ ಇಂಚಿಂಚೂ ಮಾಹಿತಿ ಇದೆ.

ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವೀಸ್​ರನ್ನೇ ನಂಬಲು ಕಾರಣಗಳೇನು.?

  1. ಮೂರು ರಾಜ್ಯಗಳ ಗಡಿಭಾಗವಾಗಿರುವ ಬೆಳಗಾವಿ ರಾಜಕಾರಣಿಗಳಿಗೆ ಮಹಾರಾಷ್ಟ್ರ ರಾಜ್ಯದ ರಾಜಕಾರಣಿಗಳ ನಿಕಟ ಸಂಪರ್ಕವಿದೆ. ಇದರ ಪೈಕಿ, ಈ ಹಿಂದೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನಿಂದಲೂ ಮಹಾರಾಷ್ಟ್ರ ರಾಜ್ಯದ ರಾಜಕಾರಣಿಗಳ ಸ್ನೇಹ ಸಂಪರ್ಕ ಹೊಂದಿದ್ದಾರೆ.
  2. ಕಾಂಗ್ರೆಸ್, ಬಿಜೆಪಿ ಅಂತೆಲ್ಲಾ ಪಕ್ಷದ ಭೇದ ಮಾಡುತ್ತಾ ರಾಜಕಾರಣಿಗಳು ಸ್ನೇಹಿತರಾಗುವುದಿಲ್ಲ. ರಾಜಕಾರಣದಲ್ಲಿ ಚುನಾವಣೆ ಸಮಯ ಹೊರತುಪಡಿಸಿದ್ರೆ, ಉಳಿದ ಸಮಯದಲ್ಲಿ ಎಲ್ಲರೂ ಸ್ನೇಹಿತರಾಗಿಯೇ ಇರುತ್ತಾರೆ. ಹೀಗಾಗಿ, ಫಡ್ನವಿಸ್ ರಮೇಶ್ ಜಾರಕಿಹೊಳಿಗೆ ಮೊದಲಿನಿಂದಲೂ ಚಿರಪರಿಚಿತ.
  3. ರಮೇಶ್ ಜಾರಕಿಹೊಳಿಯವರ ಪತ್ನಿ ಮೂಲತಃ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದವರು. ಹೀಗಾಗಿ, ರಮೇಶ್ ಜಾರಕಿಹೊಳಿಗೆ ಮಹಾರಾಷ್ಟ್ರದ ನಂಟು ಗಟ್ಟಿಯಾಗಿದೆ.
  4. ಇನ್ನು ಕಳೆದ ಬಾರಿ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣಾ ಸಂದರ್ಭದಲ್ಲಿ, ದೇವೇಂದ್ರ ಫಡ್ನವಿಸ್ ಜೊತೆಗೆ ಒಂದಿಷ್ಟು‌ ಮಾತುಕತೆ ನಡೆಸುವ ಮೂಲಕ ಹತ್ತಿರವಾಗಿದ್ರು ರಮೇಶ್ ಜಾರಕಿಹೊಳಿ. ಬ್ಯಾಂಕ್ ಚುನಾವಣೆ ಮುಗಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ರಮೇಶ್ ಜಾರಕಿಹೊಳಿ ಸಹಾಯ ಕೋರಿದ್ದು ಇದೇ ದೇವೇಂದ್ರ ಫಡ್ನವಿಸ್‌ರಿಂದ.
  5. ಅದೇ ಸಂದರ್ಭದಲ್ಲಿ, ಫಡ್ನವಿಸ್ ಮುಂದೆ ನಾನು ರಾಜ್ಯ ರಾಜಕಾರಣದಲ್ಲಿ ಬೆಳೆಯದಂತೆ ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಾರೆ ನೋಡಿ ಎಂದು ಸೂಕ್ಷ್ಮವಾಗಿ ತಿಳಿಸಿದ್ರು. ಅಂದು ಜಾರಕಿಹೊಳಿಯ ಮಾತಿಗೆ ನಿಮಗೇನಾದ್ರೂ ರಾಜ್ಯ ರಾಜಕಾರಣದಲ್ಲಿ ಕಹಿ ಅನುಭವವಾದ್ರೆ, ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ. ಹೈಕಮಾಂಡ್ ನಾಯಕರ ಮುಂದೆ ನಾನು ಮಾತನ್ನಾಡುತ್ತೇನೆ ಎಂದಿದ್ದ ಫಡ್ನವಿಸ್.
  6. ಫಡ್ನವಿಸ್‌ರ ಮಾತನ್ನೇ ಅಚಲವಾಗಿ ನಂಬಿರುವ ರಮೇಶ್ ಜಾರಕಿಹೊಳಿ. ಸದ್ಯ ರಾಜ್ಯ ಬಿಜೆಪಿ ನಾಯಕರು ತಮ್ಮ ವಿರುದ್ಧದ ಆರೋಪಕ್ಕೆ ಅನುಸರಿಅಉತ್ತಿರುವ ನಡೆಯಿಂದ ಬೇಸತ್ತು ಫಡ್ನವಿಸ್ ಬಳಿಯೇ ಇತ್ಯರ್ಥ ಮಾಡಿಕೊಳ್ಳೋಣ‌‌ ಎಂದು ತೀರ್ಮಾನಿಸಿರುವ ರಮೇಶ್ ಜಾರಕಿಹೊಳಿ.
  7. ಇಷ್ಟೆಲ್ಲದರ ಮಧ್ಯೆ, ಫಡ್ನವಿಸ್ ಮೂಲಕವೇ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರಿಗೆ ಮಾತುಕತೆ ಆಡಿಸಿ, ತಮ್ಮನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ತಿಳಿಸಿರುವ ರಮೇಶ್ ಜಾರಕಿಹೊಳಿ.
  8. ಇನ್ನೊಂದು ಪ್ರಮುಖ ವಿಚಾರ ಅಂದರೆ, ಮೂರು ರಾಜ್ಯಗಳ ಗಡಿಭಾಗ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳು ಹೇಗಿದೆಯೋ, ಹಾಗೆಯೇ ಮಹಾರಾಷ್ಟ್ರ ರಾಜ್ಯವು ಸಕ್ಕರೆಯನ್ನು ಹೆಚ್ಚಾಗಿ ತಯಾರಿಕೆ ಮಾಡುತ್ತದೆ. ಇದರ ಹಿನ್ನೆಲೆಯಿಂದಲೂ ಜಾರಕಿಹೊಳಿ ಹಾಗೂ ಫಡ್ನವಿಸ್ ಒಳ್ಳೆಯ ಸ್ನೇಹಿತರು.

The post ಅವ್ರ್​ ಬಿಟ್​.. ಇವ್ರ್​ ಬಿಟ್..​ ಫಡ್ನವೀಸ್​​ರನ್ನೇ ನಂಬೋಕೆ ಇದೆ 8 ಕಾರಣ..? ಅದ್ಯಾವುದ್ ಗೊತ್ತಾ? appeared first on News First Kannada.

Source: newsfirstlive.com

Source link