ಬ್ಯುಸಿಯೆಸ್ಟ್ ಟೀಮ್ ಇಂಡಿಯಾಗೆ ಒಂದಿಷ್ಟು ರೆಸ್ಟ್ ಬೇಕಿತ್ತಾ..?

ಬ್ಯುಸಿಯೆಸ್ಟ್ ಟೀಮ್ ಇಂಡಿಯಾಗೆ ಒಂದಿಷ್ಟು ರೆಸ್ಟ್ ಬೇಕಿತ್ತಾ..?

ವಿಶ್ವ ಕ್ರಿಕೆಟ್​ನ​ ಬ್ಯುಸಿಯೆಸ್ಟ್​ ಟೀಮ್, ಟೀಮ್ ಇಂಡಿಯಾ..!! ಕೋವಿಡ್ ಇದ್ರೂ ಬ್ಯುಸಿಯಾಗಿರುವ ಟೀಮ್ ಇಂಡಿಯಾ ಆಟಗಾರರು, ಸದ್ಯ ಸಿಕ್ಕ ಅಲ್ಫಾವಧಿಯಲ್ಲೇ ಇಂಗ್ಲೆಂಡ್​ನ ನಗರಗಳಲ್ಲಿ ಸುತ್ತುತ್ತಾ, ರಿಲ್ಯಾಕ್ಸ್​ ಆಗ್ತಿದ್ದಾರೆ. ಟೆಸ್ಟ್​ ಚಾಂಪಿಯನ್​​ಶಿಪ್​ ಸೋಲಿನ ಬಳಿಕ ಅಭ್ಯಾಸ ಮಾಡೋ ಬದಲಿಗೆ, ಬೀದಿ ಸುತ್ತುತ್ತಿದೆ ಅಂತ ನೀವ್ ಟೀಕಿಸ್ತಿರಬಹುದು.. ಆದ್ರೆ ಟೀಮ್ ಇಂಡಿಯಾ ಆಟಗಾರರಿಗೆ ಈ ರಿಲ್ಯಾಕ್ಸ್​ ಬೇಕಿತ್ತು.. ಅದ್ಯಾಕೆ ಅಂತೀರಾ.. ಈ ಸ್ಟೋರಿ ನೋಡಿ..!

ಟೀಮ್ ಇಂಡಿಯಾ, ವಿಶ್ವ ಕ್ರಿಕೆಟ್​ನ ಮೋಸ್ಟ್​ ಬ್ಯುಸಿಯೆಸ್ಟ್​ ಟೀಮ್​​ಗಳಲ್ಲಿ ಒಂದ್ದಾಗಿದೆ. ಟಿ20, ಏಕದಿನ, ಟೆಸ್ಟ್​, ಐಪಿಎಲ್​.. ಹೀಗೆ ವರ್ಷಪೂರ್ತಿ ಬ್ಯುಸಿಯಾಗಿರುವ ಟೀಮ್ ಇಂಡಿಯಾ ಆಟಗಾರರು, ಕೋವಿಡ್​ ಮಹಾಮಾರಿಗೆ ಸಿಲುಕಿ 2020ರ ಮಾರ್ಚ್​ನಿಂದ ಆಗಸ್ಟ್​​ವರೆಗೂ, ಕ್ರಿಕೆಟ್​​ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಒಂದಷ್ಟು ದಿನ ಮನೆಯಲ್ಲಿ ಕಾಲ ಕಳೆದಿದ್ದರು ಬಿಟ್ಟರೇ, ಇದುವರೆಗೆ ಟೀಮ್ ಇಂಡಿಯಾ ಆಟಗಾರರಿಗೆ ನೋ ರೆಸ್ಟ್​..!

ಹೌದು..! ಕೋವಿಡ್​ ಪರಿಣಾಮ ಮಾರ್ಚ್​ನಲ್ಲಿ ನಡೆಯಬೇಕಿದ್ದ ಸೌತ್​ ಆಫ್ರಿಕಾ ವಿರುದ್ಧದ ಸರಣಿ ರದ್ದುಗೊಂಡಿತ್ತು. ಬಳಿಕ ನಾಲ್ಕು ತಿಂಗಳ ಕಾಲ ಮನೆಯಲ್ಲೇ ಉಳಿದಿದ್ದ ಟೀಮ್ ಇಂಡಿಯಾ ಆಟಗಾರರು, 2020ರ ಆಗಸ್ಟ್​ನ ಬಳಿಕ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದಾರೆ. ನಿಜ ಹೇಳಬೇಕಂದ್ರೆ, ಕ್ರಿಕೆಟ್​ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿರುವುದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಬಳಿಕವೇ ಆಗಿದೆ..!

2020ರ ಸೆಪ್ಟೆಂಬರ್​-ನವೆಂಬರ್​ನಲ್ಲಿ ಐಪಿಎಲ್..!
ಕೋವಿಡ್ ಹೊಡೆತದ ಕಾರಣ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ತಾತ್ಕಾಲಿಕ ಮುಂದೂಡಲಾಗಿತ್ತು. ಭಾರತದಲ್ಲಿ ಕೋವಿಡ್ ಪ್ರಕರಣಗಳ ಕಾರಣ, ಯುಎಇನಲ್ಲಿ 2020ರ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ತನಕ ನಡೆಸಲಾಯ್ತು. ಸುಮಾರು 2 ತಿಂಗಳ ಕ್ರಿಕೆಟ್ ಹಬ್ಬಕ್ಕಾಗಿ ಒಂದು ತಿಂಗಳು ಮುನ್ನವೇ ಟೀಮ್ ಇಂಡಿಯಾ ಆಟಗಾರರು, ಕ್ವಾರಂಟೀನ್​​ಗೆ ಒಳಗಾಗಿದ್ದರು. ನಂತರ ಯುಎಇನಲ್ಲಿ 14 ದಿನ ಕ್ವಾರಂಟೀನ್​​ನಲ್ಲಿದ್ದ ಟೀಮ್ ಇಂಡಿಯಾ ಆಟಗಾರರು, ಬಯೋ ಬಬಲ್​​ನ ಜೈಲಿನಲ್ಲೇ ಉಳಿಯಬೇಕಾಯ್ತು..! ಸರಿ ಸುಮಾರು ಮೂರ್ನಾಲ್ಕ ತಿಂಗಳು ಐಶಾರಾಮಿ ಜೈಲುವಾಸದ ಅನುಭವ ಅನುಭವಿಸಿದ್ದರು..

IPL​ ಬೆನ್ನಲ್ಲೇ ಆಸ್ಟ್ರೇಲಿಯಾಕ್ಕೆ ಹಾರಿದ್ದ ಆಟಗಾರರು
ಐಪಿಎಲ್​ ಮುಗೀತು ಎನ್ನುತ್ತಲೇ ಟೀಮ್ ಇಂಡಿಯಾ, ಯುಎಇಯಿಂದ ಹಾರಿದ್ದು ಕಾಂಗರೂ ನಾಡಿಗೆ.. ನವೆಂಬರ್ 14ರಂದು ಆಸ್ಟ್ರೇಲಿಯಾಕ್ಕೆ ಹಾರಿದ ಟೀಮ್ ಇಂಡಿಯಾ, 3 ಏಕದಿನ, ಟಿ20 ಪಂದ್ಯಗಳ ಸರಣಿ, ನಂತರ 4 ಪಂದ್ಯಗಳ ಟೆಸ್ಟ್​ ಸರಣಿಯನ್ನ ಆಡಿತ್ತು. ಜನವರಿ 19 ತನಕ ಕಾಂಗರೂ ನಾಡಿನಲ್ಲಿದ್ದ ಟೀಮ್ ಇಂಡಿಯಾ, ತವರಿಗೆ ವಾಪಸ್ ಆದ 5 ದಿನಗಳ ಅಂತರದಲ್ಲೇ, ಮತ್ತೊಂದು ಸರಣಿಗೆ ಸಜ್ಜಾಗಿ ನಿಂತಿತ್ತು.!

ಹೌದು..! ಫ್ರೆಬ್ರವರಿ 5ರಿಂದ ಪ್ರತಿಷ್ಠಿತ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಅಣಿಯಾಗಬೇಕಿತ್ತು. ಹೀಗಾಗಿ ಕೇವಲ 5 ದಿನಗಳ ಅಂತರದಲ್ಲೇ ಮತ್ತೆ ಬಯೋ ಬಬಲ್​​​ಗೆ ಸೇರಿ, ಮಾರ್ಚ್ 28ರ ತನಕ ಹೊರ ಪ್ರಪಂಚಕ್ಕೆ ಕಾಲಿಟ್ಟಿರಲಿಲ್ಲ..

ಇಂಗ್ಲೆಂಡ್​ ಸರಣಿ ಬೆನ್ನಲ್ಲೇ ಐಪಿಎಲ್​..!
ಇಂಗ್ಲೆಂಡ್ ಸರಣಿ ಮುಕ್ತಾಯದ ಬೆನ್ನಲ್ಲೇ, 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಶುರುವಾಗಿತ್ತು. ಹೀಗಾಗಿ ನೇರವಾಗಿ ಮತ್ತೆ ಐಪಿಎಲ್​​ ಬಯೋ ಬಬಲ್​​ಗೆ ಕಾಲಿಟ್ಟ ಟೀಮ್ ಇಂಡಿಯಾ ಆಟಗಾರರು, ಯಥಾಪ್ರಕಾರ 14 ದಿನಗಳ ಕ್ವಾರಂಟೀನ್​​, ನಂತರ ಏಪ್ರಿಲ್​ 9ರಿಂದ ಮೇ 3ರ ತನಕ ಬಯೋಬಬಲ್​ನಲ್ಲಿ ಇರಬೇಕಾಯ್ತು. ದುರಾದೃಷ್ಟವಶತ್ ಐಪಿಎಲ್​ ಅರ್ಧಕ್ಕೆ ನಿಂತರು ಟೀಮ್ ಇಂಡಿಯಾ ಆಟಗಾರರು ಮಾತ್ರ, ಮನೆಯಿಂದ ಹೊರಬಾರದಂತೆ ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿತ್ತು..!

ಇದಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಹಾಗೂ ಇಂಗ್ಲೆಂಡ್ ಸರಣಿಗಾಗಿ ತಂಡವನ್ನ ಪ್ರಕಟಿಸಿದ್ದ ಬಿಸಿಸಿಐ, ಮೇ.20ರಿಂದ ಮತ್ತೆ ಟೀಮ್ ಇಂಡಿಯಾ ಆಟಗಾರರನ್ನ ಮುಂಬೈನಲ್ಲಿ ಕ್ವಾರಂಟೀನ್​ನಲ್ಲಿಟ್ಟಿತ್ತು. ಜೂನ್​ 3ಕ್ಕೆ ಇಂಗ್ಲೆಂಡ್ ಫ್ಲೈಟ್​ ಹತ್ತಿದ ಆಟಗಾರರು, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಮುಕ್ತಾಯದವರೆಗೂ ಬಯೋ ಸೆಕ್ಯೂರ್ ಒಳಗೆ ಇರಬೇಕಾಯ್ತು..! ಹೀಗೆ ಬಯೋ ಬಬಲ್​ನಿಂದ ಬಯೋ ಬಬಲ್​ಗೆ ಹಾರುತ್ತಿದ್ದ ಟೀಮ್ ಇಂಡಿಯಾ ನಿಜಕ್ಕೂ ವಿಶ್ರಾಂತಿ ಬೇಕಿತ್ತು..!

11 ತಿಂಗಳು ಬಯೋ ಸೆಕ್ಯೂರ್​ ಆಟಗಾರರ​ ಜೀವನ..!
ಹೌದು..! 11 ತಿಂಗಳಿಂದ ಬಯೋ ಬಬಲ್​ನಲ್ಲೇ ಜೀವನ ನಡೆಸುತ್ತಿದ್ದ ಆಟಗಾರರಿಗೆ, ವಿಶ್ರಾಂತಿ ಬೇಕಿತ್ತು. ಏಕೆಂದ್ರೆ 1 ತಿಂಗಳ ಬಯೋ ಬಬಲ್​​ನಲ್ಲಿ ಉಳಿಯಲು, ವಿದೇಶಿ ಆಟಗಾರರು ನರಕದಂತೆ ಭಾವಿಸುತ್ತಾರೆ. ಇಂಥದ್ರಲ್ಲಿ ಟೀಮ್ ಇಂಡಿಯಾ ಆಟಗಾರರು, ಸತತ 11 ತಿಂಗಳು ಬಯೋ ಬಬಲ್​​ನಿಂದ ಬಯೋಬಬಲ್​ ಹಾರುತ್ತಲೇ, ಇದ್ದಾರೆ. ಬಯೋಬಬಲ್​ನ ಲಕ್ಷ್ಮಣ ರೇಖೆಯಿಂದ ಒಂಟಿತನ ಜೊತೆಗೆ ಮಾನಸಿಕವಾಗಿ ಕುಗ್ಗುತ್ತಾರೆ. ಹೊರ ಪ್ರಪಂಚದ ಜೊತೆ ಸಂಪರ್ಕ ಹೊಂದಿರದ ಆಟಗಾರರ ಮೇಲೆ, ಇನ್ನಿತರ ಅಡ್ಡ ಪರಿಣಾಮಗಳು ಬೀರುತ್ತವೆ. ಇಂತಹ ಅಡ್ಡ ಪರಿಣಾಮಗಳ ನಡುವೆಯೂ ಟೀಮ್ ಇಂಡಿಯಾ ಆಟಗಾರರಿಗೆ, ವಿಶ್ರಾಂತಿ ಸಿಕ್ಕಿರಲಿಲ್ಲ.. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಒಂದಷ್ಟು ರಿಫ್ರೆಂಷ್​ಮೆಂಟ್ ಬೇಕಿತ್ತು..

ಬಹುತೇಕ ಬಯೋ ಬಬಲ್​​ನಲ್ಲೇ ಇದ್ದ ಆಟಗಾರರು, ಮಾನಸಿಕವಾಗಿ ಸ್ವಲ್ಪ ಕುಂದಿರುತ್ತಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಟಗಾರರು, 20 ದಿನಗಳ ವಿಶ್ರಾಂತಿ ಹೊಸ ಹುರುಪು ನೀಡಲಿದೆ. ಜೊತೆಗೆ ಮಾನಸಿಕ ಮನಸ್ಥಿತಿಯಿಂದ ಹೊರ ಬರಲು ನೆರವಾಗುತ್ತೆ. ಹೀಗಾಗಿ ಈ ಇಪ್ಪತ್ತು ದಿನಗಳ ವಿಶ್ರಾಂತಿ ಮುಂದಿನ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡಲೂ ನೆರವಾಗುತ್ತದೆ.

ಒಟ್ನಲ್ಲಿ.. ಬಯೋ ಬಬಲ್​​ನ ಲಕ್ಷ್ಮಣ ರೇಖೆಯ ಒಳಗೆ ಬಂದಿಯಾಗಿದ್ದ ಟೀಮ್ ಇಂಡಿಯಾ ಆಟಗಾರರು, ಬಹುದಿನಗಳ ಬಳಿಕ ಹೊರ ಪ್ರಪಂಚದೊಂದಿಗೆ ಬೆರೆಯುವ ಅವಕಾಶ ಸಿಕ್ಕಿದೆ. ಈ ವೇಳೆ ಸೋಲಿನ ಕಹಿ ಅನುಭವ ಮರೆತು, ಸೇಡಿಗಾಗಿ ಕಾಯ್ತಿರುವ ರೂಟ್​ ಪಡೆಗೆ, ಬುದ್ಧಿ ಕಲಿಸಿ ಇತಿಹಾಸ ಬರೆಯಲಿ ಅನ್ನೋದೆ, ಕ್ರಿಕೆಟ್ ಅಭಿಮಾನಿಗಳ ಆಶಯ.

The post ಬ್ಯುಸಿಯೆಸ್ಟ್ ಟೀಮ್ ಇಂಡಿಯಾಗೆ ಒಂದಿಷ್ಟು ರೆಸ್ಟ್ ಬೇಕಿತ್ತಾ..? appeared first on News First Kannada.

Source: newsfirstlive.com

Source link