ಶಾಸಕ ಜಮೀರ್​ಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ಕಲಬುರಗಿ: ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದ ಜಮೀರ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ತರಹ ಮಾತಾಡೋದಿಲ್ಲ. ಯಾರಿಗೆ ನಾಲಿಗೆ ಮೇಲೆ ಹಿಡಿತ ಇರುತ್ತದೆಯೋ ಅವರು ಈ ರೀತಿ ಮಾತನಾಡೋದಿಲ್ಲ ಎಂದು ಸ್ವಪಕ್ಷದ ಶಾಸಕ ಜಮೀರ್ ಅವರಿಗೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಶಾಸಕರಾದವರು ಈ ರೀತಿ ಮಾತನಾಡಬಾರದು. ಈ ಮಾತು ಮುಂದಿನ ಬಾರಿ ಅಧಿಕಾರ ಹಿಡಿಯುವ ಪಕ್ಷದ ಗುರಿಗೆ ಹಿನ್ನಡೆಯಾಗುತ್ತದೆ. ಮಾತನಾಡುವವರು ಇದನ್ನು ಅರಿತುಕೊಂಡು ಮಾತನಾಡಬೇಕು. ಯಾರು ಅನಗತ್ಯವಾಗಿ, ಬಹಿರಂಗವಾಗಿ ಈ ವಿಚಾರ ಚರ್ಚೆ ಮಾಡದಂತೆ ಈಗಾಗಲೇ ನಮ್ಮ ಪಕ್ಷದಲ್ಲಿ ಸೂಚನೆ ಹೊರಡಿಸಲಾಗಿದೆ. ಆದರೂ ಕೂಡ ಈ ವಿಚಾರವಾಗಿ ಮಾತನಾಡಿದವರ ವಿರುದ್ಧ ಶಿಸ್ತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಜಗ್ಗೇಶ್ ಪುತ್ರ ಗುರುರಾಜ್ ಕಾರ್ ಅಪಘಾತ -ಮರಕ್ಕೆ ಡಿಕ್ಕಿ ಹೊಡೆದ ಕಾರ್

ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ. ನಮ್ಮಲ್ಲಿ ಸಿಎಂ ಅರ್ಹತೆ ಇರುವವರು ಬಹಳ ಜನ ಇರುವುದರಿಂದ ಈ ಮಾತು ಕೇಳಿ ಬರುತ್ತಿದೆ. ಆದರೆ ಬಿಜೆಪಿಯವರಿಗೆ ಯಡಿಯೂರಪ್ಪ ಬಿಟ್ರೆ ಗತಿ ಇಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

The post ಶಾಸಕ ಜಮೀರ್​ಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ appeared first on Public TV.

Source: publictv.in

Source link