ಉ. ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್​ಗೆ​​ ಅನಾರೋಗ್ಯ- ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ

ಉ. ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್​ಗೆ​​ ಅನಾರೋಗ್ಯ- ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್​​ ಅನಾರೋಗ್ಯದಿಂದ ಗುರುಗ್ರಾಮದ ವೇದಾಂತ್​​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನದಿಂದಲೇ ವೇದಾಂತ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಲಾಯಂ ಸಿಂಗ್​​ ಆರೋಗ್ಯದ ಕುರಿತು ವೈದ್ಯರು ಹೆಲ್ತ್ ಬುಲ್ಲೆಟಿನ್​​ ಬಿಡುಗಡೆ ಮಾಡಿದ್ದಾರೆ.

ಮುಲಾಯಂ ಸಿಂಗ್​​ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಸದ್ಯ ವೈದ್ಯಕೀಯ ಸಿಬ್ಬಂದಿ ಇವರಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ. ಸದ್ಯದಲ್ಲೇ ಇವರ ಆರೋಗ್ಯ ಸುಧಾರಿಸಲಿದೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಸಮಾಜವಾದಿ ಪಕ್ಷದ ಸಂಸ್ಥಾಪಕಾರದ ಹಿರಿಯ ನಾಯಕ ಮುಲಾಯಂ ಸಿಂಗ್​ ಅವರು, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೇಗಾದರೂ ಸರಿಯೇ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪ್ರಯತ್ನಿಸುತ್ತಿದ್ದರು. ಈಗ ಇಡೀ ಸಮಾಜವಾದಿ ಪಕ್ಷದ ನಾಯಕರ ದಂಡು ಮತ್ತು ಕುಟುಂಬ ವೇದಾಂತ್​​ ಆಸ್ಪತ್ರೆಯತ್ತ ದೌಡಾಯಿಸಿದೆ.

The post ಉ. ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್​ಗೆ​​ ಅನಾರೋಗ್ಯ- ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ appeared first on News First Kannada.

Source: newsfirstlive.com

Source link