ಜಗ್ಗೇಶ್ ಪುತ್ರನ ಕಾರು ಅಪಘಾತ; ದೊಡ್ಡ ಅನಾಹುತ ತಪ್ಪಿಸಿತು ಏರ್​ಬ್ಯಾಗ್ 

ಜಗ್ಗೇಶ್ ಪುತ್ರನ ಕಾರು ಅಪಘಾತ; ದೊಡ್ಡ ಅನಾಹುತ ತಪ್ಪಿಸಿತು ಏರ್​ಬ್ಯಾಗ್ 

ಬೆಂಗಳೂರು: ನಟ ಜಗ್ಗೇಶ್ ಪುತ್ರ ಗುರುರಾಜ್ ಅವರ ಬಿಎಂಡಬ್ಲ್ಯೂ ಕಾರ್ ಇಂದು ಭೀಕರ ಅಪಘಾತಕ್ಕೊಳಗಾಗಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರ್​ನಲ್ಲಿದ್ದ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ಆಗಿದ್ದು ಹೇಗೆ..?
ಹೈದ್ರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿಕ್ಕಬಳ್ಳಾಪುರ ಹೊರವಲಯದ ಅಗಲಗುರ್ಕಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಕಾರಿನ ಬಲಭಾಗದ ಮುಂದಿನ ಟೈರ್​ ಬ್ಲಾಸ್ಟ್​ ಆಗಿದ್ದರಿಂದ ನಿಯಂತ್ರಣ ತಪ್ಪಿ ವಾಹನ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಆಕ್ಸಿಡೆಂಟ್ ಆಗುತ್ತಿದ್ದಂಗೆ ಏರ್​ಬ್ಯಾಗ್ ಓಪನ್ ಆಗಿದೆ, ಹೀಗಾಗಿ ದೊಡ್ಡ ಅಪಘಾತದಿಂದ ಜಗ್ಗೇಶ್ ಪುತ್ರ ಪಾರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ಜಗ್ಗೇಶ್ ದಂಪತಿ ಭೇಟಿ ನೀಡಿದ್ದಾರೆ. ಸದ್ಯ ಯತೀರಾಜ್ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲೇ ಇದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

The post ಜಗ್ಗೇಶ್ ಪುತ್ರನ ಕಾರು ಅಪಘಾತ; ದೊಡ್ಡ ಅನಾಹುತ ತಪ್ಪಿಸಿತು ಏರ್​ಬ್ಯಾಗ್  appeared first on News First Kannada.

Source: newsfirstlive.com

Source link