ಕನಸಿನ ಮನೆಗೆ ಪ್ರವೇಶ ಮಾಡಿದ ‘ರಾಕಿಂಗ್​’ ದಂಪತಿ

ಕನಸಿನ ಮನೆಗೆ ಪ್ರವೇಶ ಮಾಡಿದ ‘ರಾಕಿಂಗ್​’ ದಂಪತಿ

ಬೆಂಗಳೂರು: ಇಂದು ರಾಂಕಿಗ್​ ಸ್ಟಾರ್​ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ನೂತನ ಮನೆಯ ಗೃಹ ಪ್ರವೇಶ ಮಾಡಿದರು. ವಿಂಡ್ಸರ್ ಮ್ಯಾನರ್ ಬಳಿಯಿರುವ ಪ್ರೆಸ್ಟೀಜ್ ಅಪಾರ್ಟ್​​ಮೆಂಟ್​ನಲ್ಲಿ ಯಶ್ ದಂಪತಿ​ ಮನೆಯನ್ನ ಖರೀದಿಸಿದ್ದಾರೆ.

ಆಷಾಡ ಮಾಸ ಆರಂಭಕ್ಕೂ ಮುನ್ನವೇ ಹೊಸ ಮನೆ ಗೃಹಪ್ರವೇಶ ಮಾಡ್ಬೇಕು ಎಂದು ನಿರ್ಧರಿಸಿ ಇಂದು ಗೃಹಪ್ರವೇಶ ಮಾಡಿದ್ದಾರೆ. ಇಂಟಿರಿಯರ್ ಗಾಗಿ ಸಾಕಷ್ಟು ಸಮಯ ತೆಗೆದುಕೊಂಡು ಮನೆ ನಿರ್ಮಾಣ ಮಾಡಿದ್ದ ಈ ದಂಪತಿ, ಇಂದು ತಮ್ಮ ಕನಸಿನ ಮನೆಯನ್ನ ಪ್ರವೇಶಿಸಿದ್ದಾರೆ. ಕೋವಿಡ್ ಕಾರಣದಿಂದ ಗೃಹಪ್ರವೇಶದಲ್ಲಿ ಮನೆ ಮಂದಿ ಮಾತ್ರ ಭಾಗಿಯಾಗಿದ್ದರು.

The post ಕನಸಿನ ಮನೆಗೆ ಪ್ರವೇಶ ಮಾಡಿದ ‘ರಾಕಿಂಗ್​’ ದಂಪತಿ appeared first on News First Kannada.

Source: newsfirstlive.com

Source link