ಪೀಟರ್ & ಟೀಂ ಕೊಲೆ ಮಾಡಬೇಕು ಅಂದುಕೊಂಡಿದ್ದು ರೇಖಾನಲ್ಲ..But ಯಾರನ್ನ ಗೊತ್ತಾ..?

ಪೀಟರ್ & ಟೀಂ ಕೊಲೆ ಮಾಡಬೇಕು ಅಂದುಕೊಂಡಿದ್ದು ರೇಖಾನಲ್ಲ..But ಯಾರನ್ನ ಗೊತ್ತಾ..?

ಬೆಂಗಳೂರು: ರೇಖಾ ಕದಿರೇಶ್ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ರೋಚಕ ಮಾಹಿತಿ ಬಯಲಾಗಿದ್ದು ಪೀಟರ್ ಅಂಡ್​ ಟೀಮ್​ ಮಾಡಿದ್ದು ಒಂದು ಕೊಲೆಯಾದ್ರೂ ಅವರು ಅಂದುಕೊಂಡಿದ್ದು ಮೂರು ಕೊಲೆ ಎನ್ನಲಾಗಿದೆ. ಅಲ್ಲದೆ ಅಸಲಿಗೆ ಹಂತಕರ ಗುರಿ ರೇಖಾ ಆಗಿರಲೇ ಇಲ್ಲವಂತೆ. ಹಾಗಾದ್ರೆ ಹಂತಕರ ಗುರಿ ಇದ್ದ್ದದ್ದು ಯಾರ ಮೇಲೆ..?

ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಪೀಟರ್ ಮೂರು ಕೊಲೆಗೆ ತೀರ್ಮಾನಿಸಿದ್ದನಂತೆ.. ಪೀಟರ್ ಕದಿರೇಶ್​ಗೆ ಪಕ್ಕಾ ಶಿಷ್ಯನಾಗಿದ್ದನಂತೆ. ಇತ್ತ ಕದಿರೇಶ್ ಹತ್ಯೆಗೆ ಕಾರಣವಾಗಿದ್ದು ಗಾರ್ಡನ್ ಶಿವ, ನವೀನ್ ಮತ್ತು ವಿನಯ್. ಗಾರ್ಡನ್ ಶಿವನ ಅಕ್ಕನ ಮಕ್ಕಳಾದ ನವೀನ್ ವಿನಯ್ ಸೇರಿ ಕದಿರೇಶ್​​ನನ್ನ ಕೊಂದಿದ್ರು ಎನ್ನಲಾಗಿದೆ. ಕದಿರೇಶ್​ನ ಹತ್ಯೆ ನಡೆದಿದ್ದು ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಕಾರವಾಗಿ. ಹೀಗಾಗಿ ಕದಿರೇಶ್ ಹತ್ಯೆಗೆ ಕಾರಣರಾದವರನ್ನ ಮುಗಿಸಲು ಪೀಟರ್ ಹಲ್ಲು ಮಸೆಯುತ್ತಿದ್ದನಂತೆ ಅಂತಾ ಹೇಳಲಾಗಿದೆ.

blank

ಪೀಟರ್ & ಟೀಂ ಗಾರ್ಡನ್ ಶಿವ, ವಿನಯ್, ನವೀನ್ ರನ್ನ ಕೊಲೆ ಮಾಡಬೇಕು ಎಂದಿದ್ದನಂತೆ. ಇವರನ್ನ ಕೊಲೆ ಮಾಡಲು ಸಹಾಯ ಮಾಡು ಅಂತ ಪೀಟರ್ ರೇಖಾಳನ್ನೇ ಕೇಳಿದ್ದನಂತೆ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ನಡೆಸಬೇಕು..ಇದಕ್ಕೆ ಸಹಕಾರ ಕೊಡು ಎಂದಿದ್ದನಂತೆ. ಆದ್ರೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ರಂತೆ.. ರೌಡಿಸಂ ಐಡಿಯಾ ಇಲ್ಲದ ರೇಖಾ ಪೀಟರ್ ಮನವಿಯನ್ನ ತಿರಸ್ಕರಿಸಿದ್ದಳು.. ಈ ವಿಚಾರಕ್ಕೆ ಪೀಟರ್ ರೇಖಾ ಮೇಲೆ ಕೋಪ ಮಾಡಿಕೊಂಡಿದ್ದ ಎನ್ನಲಾಗಿದೆ.

ಇದೇ ಸಮಯದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಅರುಣ್.. ಕದಿರೇಶ್ ಕೊಲೆಗೆ ರೇಖಾ ಕಾರಣ, ಕದಿರೇಶ್ ಕೊಲೆ ಮಾಡಿದ್ದ ನವೀನ್, ವಿನಯ್​ಗೆ ಸಹಾಯ ಮಾಡಿದ್ದಾಳೆ ಎಂದಿದ್ದನಂತೆ. 4 ತಿಂಗಳ ಹಿಂದೆ ಪೀಟರ್ ಅಂಡ್ ಟೀಮ್ ಜೊತೆ ಮೀಟಿಂಗ್ ಮಾಡಿದ್ದ ಅರುಣ್ ಮತ್ತು ಮಾಲಾ.. ಮೀಟಿಂಗ್ ನಲ್ಲಿ ಪೀಟರ್ ಗಾರ್ಡನ್ ಶಿವನ ಬಗ್ಗೆ ಹೇಳಿದ್ದನಂತೆ. ಅದೇ ಮೀಟಿಂಗ್ ನಲ್ಲಿ ಅರುಣ್ ರೇಖಾ ಬಗ್ಗೆ ಹೇಳಿದ್ದ ಎನ್ನಲಾಗಿದೆ. ಗಾರ್ಡನ್ ಶಿವ ಮತ್ತು ವಿನಯ್​ರನ್ನ ನಂತ್ರ ಮುಗಿಸೋಣ.. ಮೊದಲು ರೇಖಾ ಮುಗಿಸೋಣ ಎಂದು ಮಾತನಾಡಿ ಮೀಟಿಂಗ್ ಮುಗಿಸಿದ್ರಂತೆ. ಹಲವು ದಿನಗಳ ಕಾಲ ರೇಖಾ ಯಾವಾಗ ಒಂಟಿಯಾಗಿರುತ್ತಾಳೆ ಎಂದು ಗಮನಿಸಿ.. ಊಟ ನೀಡಿ ವಾಪಸ್ಸು ಹೋಗುವ ಸಮಯದಲ್ಲಿ ಜನರು ಕಡಿಮೆ ಇರ್ತಾರೆ ಅವಾಗ ಹೊಡೆಯೋದು ಎಂದು ಪ್ಲಾನ್ ಫಿಕ್ಸ್ ಮಾಡಿದ್ರಂತೆ.

The post ಪೀಟರ್ & ಟೀಂ ಕೊಲೆ ಮಾಡಬೇಕು ಅಂದುಕೊಂಡಿದ್ದು ರೇಖಾನಲ್ಲ..But ಯಾರನ್ನ ಗೊತ್ತಾ..? appeared first on News First Kannada.

Source: newsfirstlive.com

Source link