ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

– 2 ಕೋಟಿ 60 ಲಕ್ಷದ ಮೌಲ್ಯದ ವಾಹನಗಳು ಜಪ್ತಿ

ಚಿಕ್ಕೋಡಿ: ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ 9 ಟಿಪ್ಪರ್ ವಾಹನ, 1 ಜೆಸಿಬಿ, 2 ಟ್ರಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮೂಲದ ಫಯಾಜ ದಾಲಾಯತ ಎಂಬವರು ನೀಡಿದ ದೂರಿನ ಹಿನ್ನಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಯೂಸುಫ್ ಸೈಯದ್‍ನನ್ನು ಬಂಧಿಸಿ ಮೋಸದ ಜಾಲವನ್ನು ಭೇದಿಸಿದ್ದಾರೆ.

ಪ್ರಕರಣ ಪ್ರಮುಖ ಆರೋಪಿ ಯೂಸುಫ್ ತನ್ನ ಸಹಚರೊಂದಿಗೆ ಸೇರಿಕೊಂಡು ಫೈನಾನ್ಸ್ ಕಂಪನಿಗಳಿಂದ ಲೋನ್ ಪಡೆದು ಹಣ ಮರುಪಾವತಿ ಮಾಡಲು ಆಗದೇ ವಾಹನಗಳನ್ನು ಮಾರಾಟ ಮಾಡುವವರನ್ನು ಹುಡುಕುತ್ತಿದ್ದರು. ಅಂತವರನ್ನ ಗುರುತಿಸಿ ನಿಮ್ಮ ವಾಹನವನ್ನು ಮಾರಾಟ ಮಾಡಿ ಕೊಡುತ್ತೇವೆ ಜೊತೆಗೆ ವಿಮಾ ಕಂಪನಿಯಿಂದ ನಿಮಗೆ ಹಣ ಕೂಡ ಕೊಡಿಸುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ವಾಹನ ಪಡೆದು, ಬಳಿಕ ಅದೇ ವಾಹನಗಳನ್ನು ಪ್ರಕರಣದ ಎರಡನೇ ಆರೋಪಿಯಾದ ದಾಂಡೇಲಿಯ ದಿಲಾವರ ಕಾಕರ ಎಂಬವರಿಂದ ವಾಹನದ ಚೆಸ್ಸಿ ನಂಬರ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಅದಕ್ಕೆ ಬೇರೆ ಆರ್.ಸಿ ತಯಾರಿಸಿ ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು.

blank

ದೂರುದಾರ ಫಯಾಜ ಧಾಲಾಯತ್ ಎಂಬವರಿಗೆ ಕೂಡ ಆರೋಪಿ ಯೂಸುಫ್ ಒಂದು ಜೆಸಿಬಿಯನ್ನು ನೀಡಿದ್ದ 30 ಲಕ್ಷ ಮೌಲ್ಯದ ಜೆಸಿಬಿಯನ್ನ 12 ಲಕ್ಷಕ್ಕೆ ಮಾರಾಟ ಮಾಡಿ 6 ಲಕ್ಷ ರೂಪಾಯಿಗಳನ್ನ ಮುಂಗಡವಾಗಿ ಪಡೆದಿದ್ದ, ಕೆಲ ದಿನಗಳು ಕಳೆದರೂ ವಾಹನದ ಆರ್.ಸಿ ಪತ್ರಗಳನ್ನ ನೀಡದೇ ಸತಾಯಿಸಿದ್ದ ಹಿನ್ನೆಲೆಯಲ್ಲಿ ಫಯಾಜ್ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಡಿಮೆ ಬೆಲೆ, ಭರ್ಜರಿ ಆಫರ್ – ಅಜಿಯೋದಲ್ಲಿ ಜು.5ರವರೆಗೆ ಬಿಗ್ ಬೋಲ್ಡ್ ಸೇಲ್‍

The post ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್ appeared first on Public TV.

Source: publictv.in

Source link