ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಏನಾಯ್ತು..? ಜಗ್ಗೇಶ್ ಪುತ್ರ ಯತಿರಾಜ್ ಪರಿಸ್ಥಿತಿ ಹೇಗಿದೆ..?

ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಏನಾಯ್ತು..? ಜಗ್ಗೇಶ್ ಪುತ್ರ ಯತಿರಾಜ್ ಪರಿಸ್ಥಿತಿ ಹೇಗಿದೆ..?

ಬೆಂಗಳೂರು: ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಟ ಜಗ್ಗೇಶ್ ಪುತ್ರ ಯತಿರಾಜ್ ಅವರ ಕಾರ್ ಅಪಘಾತವಾಗಿದೆ. ಅಪಘಾತ ನಡೆದಾಗಿನ ದೃಶ್ಯ ನ್ಯೂಸ್​ಫಸ್ಟ್​ಗ ಲಭ್ಯವಾಗಿದ್ದು ಯತಿರಾಜ್ ನಿಲ್ಲಲಾಗದೇ ಕುಸಿದುಬಿದ್ದಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಅಪಘಾತ ನಡೆದಾಗ ಸ್ಥಳೀಯರು ಯತಿರಾಜ್​ರನ್ನ ಒಂದೆಡೆ ಕೂರಿಸಿದ್ದಾರೆ. ಈ ವೇಳೆ ಅವರದೇ ಮೊಬೈಲ್​ನ್ನು ಯತಿರಾಜ್ ಅವರ ಮುಂದೆ ಹಿಡಿದು ಸಂಬಂಧಿಕರಿಗೆ ಫೋನ್ ಮಾಡಿ ಎಂದಿದ್ದಾರೆ. ಫೋನ್​ನಲ್ಲಿ ಮಾತನಾಡಲಾಗದ ಸ್ಥಿತಿಯಲ್ಲಿದ್ದ ಯತಿರಾಜ್ ಅಲ್ಲಿಂದ ಎದ್ದು ಸ್ವಲ್ಪ ಮುಂದೆ ನಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಸಹಾಯ ಮಾಡಿದ್ದಾರೆ. ಸ್ವಲ್ಪ ದೂರ ನಡೆದ ಯತಿರಾಜ್ ನಿಲ್ಲಲಾಗದೇ ಕೊನೆಗೆ ಕುಸಿದುಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಸಂಬಂಧಿಕರನ್ನ ಸಂಪರ್ಕಿಸಲು ಪ್ರಯತ್ನ ನಡೆಸಿರುವುದು ದೃಶ್ಯದಲ್ಲಿ ಲಭ್ಯವಾಗಿದೆ.

 

The post ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಏನಾಯ್ತು..? ಜಗ್ಗೇಶ್ ಪುತ್ರ ಯತಿರಾಜ್ ಪರಿಸ್ಥಿತಿ ಹೇಗಿದೆ..? appeared first on News First Kannada.

Source: newsfirstlive.com

Source link