ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಯಾರಿಯ ಜೊತೆಗೆ ಹೂವು ಮಾರುವ ಯುವತಿ ಬನಶಂಕರಿಗೆ ಇಂದು ಲ್ಯಾಪ್ ಟಾಪ್ ಹಸ್ತಾಂತರ ಮಾಡಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆದಿಶಕ್ತಿ ದೇವಾಲಯದಲ್ಲಿ ಹೂವು ಮಾರುವ ಯುವತಿ ಬನಶಂಕರಿ ಓದಿಗೆ ಹಲವು ಕೈಗಳು ನೆರವು ಮುಂದುವರಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬನಶಂಕರಿ ಓದಿಗೆ ಸಹಾಯ ಆಗಲೀ ಎಂದು ಲ್ಯಾಪ್ ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಮೀಷನರ್, ವಿದ್ಯೆ ಬಡತನ ದೂರ ಮಾಡುತ್ತದೆ. ಆಕೆಯ ಆಸಕ್ತಿ ಕಂಡು ನಾನು ಲ್ಯಾಪ್ ಟ್ಯಾಪ್ ವಿತರಣೆ ಮಾಡಿರುವೆ. ಇದನ್ನ ಯುವತಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.

ಇದೇ ವೇಳೆ ಯುವತಿ ಬನಶಂಕರಿ ಮಾತನಾಡಿ, ತುಂಬಾ ಖುಷಿ ಆಯಿತು. ಓದುವಾಗ ಈ ನೆರವು ಸಿಕ್ಕಿದು ನನ್ನ ಭಾಗ್ಯ ಎಂದರು. ನೆನ್ನೆಯಷ್ಟೇ ಪಬ್ಲಿಕ್ ಟಿವಿ ವತಿಯಿಂದ ಯುವತಿ ಓದಿಗಾಗಿ ಟ್ಯಾಬ್ ವಿತರಣೆ ಸಹ ಮಾಡಲಾಗಿದೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

The post ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್ appeared first on Public TV.

Source: publictv.in

Source link