ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ಕೇಸ್​​ನಲ್ಲಿ ಪ್ರತಿವಾದಿಯಲ್ಲ- ಹೈಕೋರ್ಟ್

ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ಕೇಸ್​​ನಲ್ಲಿ ಪ್ರತಿವಾದಿಯಲ್ಲ- ಹೈಕೋರ್ಟ್

ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ದೌರ್ಜನ್ಯ ಕೇಸ್​ನಲ್ಲಿ ಪ್ರತಿವಾದಿಯಲ್ಲ ಎಂದು ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಮದುವೆ ಇಲ್ಲದೇ ತನ್ನ ಪತಿ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆ.. ಹೀಗಾಗಿ ಅವರನ್ನ ಕೌಟುಂಬಿಕ ದೌರ್ಜನ್ಯ ಕೇಸ್ನಲ್ಲಿ ಪ್ರತಿವಾದಿ ಮಾಡಬೇಕು ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯಲ್ಲಿದ್ದ ಮಹಿಳೆ ಹೆಸರನ್ನ ಹೈಕೋರ್ಟ್ ಕೈಬಿಟ್ಟಿದೆ.

ಪತಿಯ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾದ ವ್ಯಕ್ತಿ ಫ್ಯಾಮಿಲಿ ಮೆಂಬರ್ ಅಲ್ಲ. ಆಕೆಗೆ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ-2005”ರ ಸೆಕ್ಷನ್ 12 ಅನ್ವಯಿಸಲ್ಲ. ಇಂತಹ ವ್ಯಕ್ತಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಕೇಸ್​ನಲ್ಲಿ ಪ್ರತಿವಾದಿಯಾಗಿ ಸೇರಿಸಲು ಬರಲ್ಲ ಎಂದು ಕೋರ್ಟ್ ಹೇಳಿದೆ.

ಅರಕಲಗೂಡಿನ ಮಹಿಳೆ ಜೆಎಂಎಫ್ ಸಿ ಕೋರ್ಟ್​ನಲ್ಲಿ ಕೇಸ್ ಹಾಕಿದ್ರು. ಅದರಲ್ಲಿ ತನ್ನ ಪತಿಯ ಆಫೇರ್ ಲೇಡಿಯನ್ನ ಪ್ರತಿವಾದಿ ಮಾಡಿದ್ದರು. ಮನೆಯಲ್ಲಿ ಕಿರುಕುಳ ಆರೋಪಿಸಿ ಕೇಸ್ ದಾಖಲಾಗಿತ್ತು. ಅದನ್ನ ಪ್ರಶ್ನಿಸಿ ಪತಿಯ ಸಂಗಾತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಪ್ರತಿವಾದಿಯಾಗಿಸಿರುವ ಕ್ರಮ ಪ್ರಶ್ನಿಸಿ ಅರ್ಜಿ ಹಾಕಿದ್ದರು.

ರಾಮನಗರದ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ, ಹರೀಶ್ ಶ್ರೀನಿವಾಸ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ.. ಪತಿಯೊಂದಿಗೆ ಸೇರಿ ಕಿರುಕುಳ ನೀಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಪತಿ ಸಂಗಾತಿಯ ಮನೆಗೆ ಕರೆತರುತ್ತಿದ್ದರು ಎಂಬ ವಿಚಾರ ಬಿಟ್ಟರೆ ಬೇರೆ ಆರೋಪವಿಲ್ಲ.. ಕೌಟುಂಬಿಕ ದೌರ್ಜನ್ಯ ಕಾಯ್ದೆಯ 2(Q) ವ್ಯಾಪ್ತಿಯಲ್ಲಿ ಮನೆಗೆ ಬರುತ್ತಿದ್ದರೆ ದೌರ್ಜನ್ಯ ಎಂದು ಪರಿಗಣಿಸಲಾಗಲ್ಲ ಎಂದು ಹೇಳಿದೆ. ಇದೇ ವೇಳೆ ಅರ್ಜಿದಾರ ಮಹಿಳೆಯ ವಿರುದ್ಧದ ಪ್ರಕರಣನ್ನು ರದ್ದು ಮಾಡಿದೆ. ಅರಕಲಗೂಡು ಜೆಎಂಎಫ್ ಸಿ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು.

ಪ್ರಕರಣ ಹಿನ್ನಲೆ:
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಿಳೆ ದೂರು ನೀಡಿದ್ರು. ಪತಿಯ ವಿವಾಹೇತರ ಸಂಗಾತಿ ವಿರುದ್ದ ಕೇಸ್ ದಾಖಲಿಸಿದ್ದರು. ಡೊಮೆಸ್ಟಿಕ್ ವಯೋಲೆನ್ಸ್ ಆಕ್ಟ್ ಸೆಕ್ಷನ್ 12ರ ಅಡಿ ಪರಿಹಾರ ಕೋರಿದ್ದರು. ಅರಕಲಗೂಡು ಜೆಎಂಎಫ್ ಸಿ ಕೋರ್ಟ್ ನಲ್ಲಿ ಕೇಸ್ ದಾಖಲಾಗಿತ್ತು. ಮಹಿಳೆ ತನ್ನ ಪತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ದೌರ್ಜನ್ಯ ಎಸಗಿದ ಆರೋಪ ಮಾಡಿದ್ದರು. ಇದಕ್ಕೆ ರಾಮನಗರ ಮಹಿಳೆ ಈ ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ತನ್ನ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಆರೋಪಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

The post ಗಂಡನ ವಿವಾಹೇತರ ಸಂಗಾತಿ ಕೌಟುಂಬಿಕ ಕೇಸ್​​ನಲ್ಲಿ ಪ್ರತಿವಾದಿಯಲ್ಲ- ಹೈಕೋರ್ಟ್ appeared first on News First Kannada.

Source: newsfirstlive.com

Source link